ETV Bharat / state

ಜನಸಂಕಲ್ಪ ಯಾತ್ರೆಯಿಂದ ದೂರ ಉಳಿದ ರಮೇಶ್ ಜಾರಕಿಹೊಳಿ..! ಕುತೂಹಲ ಕೆರಳಿಸಿದ ನಡೆ - ನಿಪ್ಪಾಣಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆ

ನಿಪ್ಪಾಣಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಿಂದ ರಮೇಶ್ ಜಾರಕಿಹೊಳಿ ದೂರ ಉಳಿದಿದ್ದಾರೆ. ಈ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ಗ್ರಾಸ ಒದಗಿಸಿದೆ.

Janasankalpa Yatra
ಜನಸಂಕಲ್ಪ ಯಾತ್ರೆಯಿಂದ ದೂರ ಉಳಿದ ರಮೇಶ್ ಜಾರಕಿಹೊಳಿ
author img

By

Published : Mar 8, 2023, 10:08 PM IST

ಚಿಕ್ಕೋಡಿ: ಇನ್ನೇನು ಸಾರ್ವತ್ರಿಕ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿದ್ದ ರೀತಿಯಲ್ಲಿ ತಾ ಮುಂದು ನಾ ಮುಂದು ಎಂದು ಮತದಾರರ ಓಲೈಕೆಗೆ ಹಲವಾರು ಯಾತ್ರೆಗಳನ್ನು ಕೈಗೊಂಡಿವೆ. ಆದರೆ, ರಾಜ್ಯದಲ್ಲೇ ವಿಭಿನ್ನವಾಗಿ ಹಾಗೂ ಪವರ್ ಪಾಯಿಂಟ್ ಎಂದು ಗುರುತಿಸಿಕೊಂಡಿರುವ ಬೆಳಗಾವಿ ಬಿಜೆಪಿ ರಾಜಕಾರಣದಲ್ಲಿ ಸದ್ಯ ಭಿನ್ನಮತ ಸ್ಪೋಟಗೊಂಡಿದ್ದು, ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳಿಗೆ ಗ್ರಾಸವಾಗಿವೆ.

ಇನ್ನೇನು ಚುನಾವಣೆಗೆ ಕೇವಲ ಒಂದೆರಡು ತಿಂಗಳು ಇರುವಾಗಲೇ, ರಾಜ್ಯದ ರಾಜಕಾರಣ ಗರಿಗೆದರಿದೆ. ಮೂರು ಪಕ್ಷಗಳು ಮತದಾರರ ಓಲೈಕೆಗೆ ಬಾರಿ ಕಸರತ್ತು ನಡೆಸುತ್ತಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಭದ್ರಕೋಟೇಯಾಗಿದೆ. ಈ ಕೋಟೆಯ ವಲಯದಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು ಮತ್ತಷ್ಟು ಪ್ರತಿಷ್ಠೆ ಕಣವಾಗಿ ಬೆಳಗಾವಿ ರಾಜಕಾರಣ ಬಿಂಬಿತವಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಜಾ ದ್ವನಿ ಸಮಾವೇಶ ಬಳಿಕ ಕಳೆದ ಒಂದು ವಾರದಿಂದ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಇವತ್ತು ಜನ ಸಂಕಲ್ಪ ಯಾತ್ರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಬಾಗ್ ಹಾಗೂ ನಿಪ್ಪಾಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಸಮಾವೇಶ ನಡೆಸಲಾಯಿತು.

ಎಲ್ಲವನ್ನೂ ನಾವು ಸರಿದೂಗಿಸಿಕೊಂಡು ಹೋಗುತ್ತೇವೆ - ಬಿಎಸ್​ವೈ: ಬಿ ಎಸ್ ಯಡಿಯೂರಪ್ಪ ಇಂದು ವಾಯುಮಾರ್ಗವಾಗಿ ಅಂಕಲಿ ಗ್ರಾಮಕ್ಕೆ ಆಗಮಿಸಿ ಜನ ಸಂಕಲ್ಪ ಯಾತ್ರೆಗೂ ಮೊದಲು ಪತ್ರಿಕಾಗೋಷ್ಠಿ ನಡೆಸಿದರು. ಗೆಲ್ಲುವ ಪಕ್ಷಕ್ಕೆ ನಾ ಮುಂದು ತಾ ಮುಂದು ಎಂಬುದು ಸ್ವಾಭಾವಿಕವಾಗಿರುತ್ತವೆ. ಎಲ್ಲವನ್ನು ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದ ಕೇವಲ ಒಂದೆರಡು ಗಂಟೆಯಲ್ಲಿ ರಮೇಶ ಜಾರಕಿಹೊಳಿ ರಾಯಬಾಗದಲ್ಲಿ ಕಾಣಿಸಿಕೊಂಡರು. ಆದರೆ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರ ನಿಪ್ಪಾಣಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಗೆ ಗೈರಾದರು. ಈ ಮೂಲಕ ಅವರು ಮತ್ತೊಮ್ಮೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವನ್ನೆಲ್ಲವನ್ನೂ ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಯಬಾಗ್​​​ನಲ್ಲಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ ಜಿಲ್ಲೆಯ ಕೆಲವು ಬಿಜೆಪಿ ನಾಯಕರ ಜೊತೆ ಅಂತರ ಕಾಯ್ದುಕೊಂಡ ಇರುವುದು ಎದ್ದು ಕಾಣುತ್ತಿತ್ತು. ನಿಪ್ಪಾಣಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಜನ ಸಂಕಲ್ಪ ಯಾತ್ರೆಯಲ್ಲಿ ರಮೇಶ ಜಾರಕಿಹೊಳಿ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಕಳೆದ ಒಂದು ವಾರದ ಹಿಂದೆಷ್ಟೇ ಸಂಸದ ಅಣ್ಣಸಾಬ್ ಜೊಲ್ಲೆ ಪರೋಕ್ಷವಾಗಿ ರಮೇಶ ಜಾರಕಿಹೊಳಿ ನಿಪ್ಪಾಣಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ರಾಜಕೀಯ ಚಟುವಟಿಕೆಗಳು ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದ್ದರು.

ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ರಮೇಶ್ ಜಾರಕಿಹೊಳಿಯವರು ನಿಪ್ಪಾಣಿ ಕ್ಷೇತ್ರದಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ಕಾಣಿಸದೇ ಇರುವುದು, ಸಂಸದ ಅನ್ನಸಾಬ್ ಜೊಲ್ಲೆ ಮಾತಿಗೆ ಪುಷ್ಟಿ ನೀಡಿದಂತಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಸಿಟಿ ರವಿ, ಲಕ್ಷ್ಮಣ ಸವದಿ, ಪಿ. ರಾಜೀವ, ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲೆಯ ಹಲವಾರು ನಾಯಕರು ಕಾಣಿಸಿಕೊಂಡರು. ಆದರೆ, ರಮೇಶ ಜಾರಕಿಹೊಳಿ ಗೈರು ಎದ್ದು ಕಾಣುತ್ತಿತ್ತು. ಬೆಳಗಾವಿಯ ಬಿಜೆಪಿ ರಾಜಕಾರಣದಲ್ಲಿ ಯಾವುದು ಸರಿ ಇಲ್ಲ ಎಂಬ ಚರ್ಚೆಗೆ ಇದು ಗ್ರಾಸವನ್ನೂ ಒದಗಿಸಿತು.

ಇದನ್ನೂ ಓದಿ: ಬೊಮ್ಮಾಯಿ ಕೂರಿಸಿಕೊಂಡು ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ಶಾ ಭರವಸೆ ಪ್ರಶ್ನಿಸಿ ಆಯೋಗಕ್ಕೆ ದೂರು: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.