ETV Bharat / state

ಬಾರದ ಮಳೆಗೆ ಬಿತ್ತನೆ ಕಾಣದ ಭೂಮಿ: ಆತಂಕದಲ್ಲಿ ರೈತರು

author img

By

Published : Jul 3, 2019, 3:56 PM IST

ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದ್ದು, ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಮಾತ್ರ ಮಳೆಯಾಗದಿರುವುದು ರೈತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಯಾವುದೇ ಬೆಳೆ ಬೆಳೆಯಲಾರದೆ ಬೇಸರಗೊಂಡಿದ್ದಾನೆ ಅನ್ನದಾತ.

ಮಳೆಯಿಲ್ಲದೆ ಬರಿದಾದ ಭೂಮಿ

ಚಿಕ್ಕೋಡಿ: ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಆದರೆ, ಅಥಣಿ, ಕಾಗವಾಡ ತಾಲೂಕಿನಾದ್ಯಂತ ಜುಲೈ ತಿಂಗಳು ಆಗಮಿಸಿದರೂ ಮಳೆಯಾಗದೆ ಮೋಡ ಕವಿದ ವಾತಾವರಣ ಮಾತ್ರ ಇದೆ. ಇದರಿಂದ ಅಥಣಿ ಹಾಗೂ ಕಾಗವಾಡ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಗ್ರಾಮಗಳ ರೈತರ ಮೊಗದಲ್ಲಿ ವರುಣರಾಯ ನಿರಾಸೆ ಮೂಡಿಸಿದ್ದಾನೆ.

ಮಳೆಯಿಲ್ಲದೆ ಬರಿದಾದ ಭೂಮಿ

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ರೈತರು ಪರದಾಡುವಂತಾಗಿದ್ದು, ಟ್ಯಾಂಕರ್ ಮೂಲಕವೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೊಂಕಣ ಪ್ರದೇಶದಲ್ಲಿ ಮಳೆಯಾದ ಪರಿಣಾಮ ತಂಪು ವಾತಾವರಣ ಇದ್ದು, ತಂಪು ವಾತಾವರಣ ಬಿಟ್ಟರೆ ಯಾವುದೇ ತರಹದ ಪ್ರಾಕೃತಿಕ ಬದಲಾವಣೆಯಾಗಿಲ್ಲ. ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ಕಬ್ಬಿನ ಬೆಳೆ ನೀರಿಲ್ಲದೆ ಒಣಗಿ ಹೋಗಿವೆ. ರೈತರು ಈ ವರ್ಷವಾದರೂ ರೋಹಿಣಿ, ಮೃಗಶಿರಾ ಹಾಗೂ ಆರಿದ್ರಾ ಮಳೆಯಾಗಿ ಬಿತ್ತನೆ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಭೂಮಿ ಹದಗೊಳಿಸಿ ಬಿತ್ತನೆ ಮಾಡುವ ಹಂಬಲ ರೈತರದ್ದಾಗಿತ್ತು. ಆದರೆ, ಮಳೆ ಮಾತ್ರ ರೈತನ ಜೀವನ ಜೊತೆ ಚೆಲ್ಲಾಟ ಆಡಿ ರೈತನ ಮುಖದಲ್ಲಿ ಮಂದಹಾಸ ಮುಡದಂತೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಕೃಷ್ಣಾ ನದಿಗೆ ಈಗ 20,000 ಕ್ಯೂಸೆಕ್​​ಗಿಂತ ಹೆಚ್ಚಿನ ನೀರು ಹರಿದು ಬರುತ್ತಿದೆ. ಆದರೆ, ಈಗ ಹರಿದು ಬರುವ ನೀರನ್ನೆಲ್ಲ ಹಿಪ್ಪರಗಿ ಅಣೆಕಟ್ಟಿನಿಂದ ಹೊರಕ್ಕೆ ಬಿಡಲಾಗುತ್ತಿದೆ. ಈ ನೀರು ಅಥಣಿ, ಕಾಗವಾಡ ಭಾಗದ ರೈತರ ಉಪಯೋಗಕ್ಕೆ ಬಾರದಂತಿದ್ದು, ರೈತ ಯಾವ ಬಿತ್ತನೆ ಕಾರ್ಯಕ್ಕೂ ಮುಂದಾಗುತ್ತಿಲ್ಲ. ಈ ಭಾಗದಲ್ಲಿ ಮಳೆಯಾಗದ ಕಾರಣ ತೊಗರಿ, ಹೆಸರು, ಮೆಕ್ಕೆಜೋಳ ಈ ವರ್ಷ ಇನ್ನೂ ಬಿತ್ತನೆ ಆಗಿಲ್ಲ. ಇದರಿಂದ ಮಳೆಯಾಶ್ರಿತ ಭೂಮಿ ಸಂಪೂರ್ಣ ಬರಡಾಗಿದೆ.

Intro:ಬಾರದ ಮಳೆ ಮುಂದೂಡಿದ ಬೆಳೆ : ನಿರಾಸೆಗೊಂಡ ಅಥಣಿ, ಕಾಗವಾಡ ಭಾಗದ ರೈತರುBody:

ಚಿಕ್ಕೋಡಿ :
ಸ್ಟೋರಿ

ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಧಾರಕಾರ ಮಳೆಯಾಗುತ್ತಿದೆ. ಆದರೆ, ಅಥಣಿ, ಕಾಗವಾಡ ತಾಲ್ಲೂಕಿನಾದ್ಯಂತ ಜುಲೈ ತಿಂಗಳು ಆಗಮಿಸಿದರೂ ಮಳೆಯಾಗದೆ ಮೋಡ ಕವಿದ ವಾತಾವರಣ ಮಾತ್ರ ಇದೆ. ಇದರಿಂದ ಅಥಣಿ ಹಾಗೂ ಕಾಗವಾಡ ತಾಲ್ಲೂಕಿನ ಪೂರ್ವ ಮತ್ತು ಉತ್ತರ ಭಾಗದ ಗ್ರಾಮಗಳ ರೈತರ ಮೊಗದಲ್ಲಿ ನಿರಾಶೆ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ರೈತರು ಪರದಾಡುವಂತಾಗಿದ್ದು. ಟ್ಯಾಂಕರ ಮೂಲಕವೇ ಕುಡಿವ ನೀರು ಪೂರೈಸುತ್ತಿರುವುದು ಸಾಮಾನ್ಯವಾಗಿದೆ. ಕೊಂಕಣ ಪ್ರದೇಶದಲ್ಲಿ ಮಳೆಯಾದ ಪರಿಣಾಮ ತಂಪು ವಾತಾವರಣ ಸೂಸುತ್ತಿದ್ದು. ತಂಪು ವಾತಾವರಣ ಬಿಟ್ಟರೆ ಯಾವುದೇ ತರಹದ ಪ್ರಾಕೃತಿಕ ಬದಲಾವಣೆಯಾಗಿಲ್ಲ. ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ನೀರಿನ ಅಭಾವದಿಂದ ಕಬ್ಬಿನ ಬೆಳೆ ನೀರಿಲ್ಲದೆ ಒಣಗಿ ಹೋಗಿವೆ.

ರೈತರು ಈ ವರ್ಷವಾದರೂ ರೋಹಿಣಿ ಮೃಗಶಿರಾ ಹಾಗೂ ಆರಿದ್ರಾ ಮಳೆಯಾಗಿ ಬಿತ್ತನೆಯಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಭೂಮಿ ಹದಗೊಳಿಸಿ ಬಿತ್ತನೆ ಮಾಡುವ ದಾವಂತದಲ್ಲಿದ್ದ ರೈತರು. ಆದರೆ, ಮಳೆ ಮಾತ್ರ ರೈತನ ಜೀವನ ಜೊತೆ ಚೆಲ್ಲಾಟ ಆಡುತ್ತಿದೆ.

ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಕೃಷ್ಣಾ ನದಿಗೆ ಈಗ 20,000 ಕ್ಯೂಸೆಕ್ ಕ್ಕಿಂತ ಹೆಚ್ಚು ನೀರು ಹರಿದು ಬರುತ್ತಿದೆ. ಆದರೆ, ಈಗ ಹರಿದು ಬರುವ ನೀರನ್ನೆಲ್ಲ ಹಿಪ್ಪರಗಿ ಅಣೆಕಟ್ಟಿನಿಂದ ಹೊರ ಹರಿದು ಬಿಡಲಾಗುತ್ತಿದೆ. ಈ ನೀರು ಅಥಣಿ, ಕಾಗವಾಡ ಭಾಗದ ರೈತರಿಗೆ ಉಪಯೋಗಕ್ಕೆ ಭಾರದಂತಿದ್ದು. ರೈತ ಯಾವ ಬಿತ್ತನೆ ಕಾರ್ಯಕ್ಕೂ ಮುಂದಾಗುತ್ತಿಲ್ಲ.

ಈ ಭಾಗದಲ್ಲಿ ಮಳೆಯಾಗದ ಕಾರಣ ತೊಗರಿ, ಹೆಸರು, ಮೆಕ್ಕೆಜೋಳ ಬೆಳೆಯುಮಂತಹ ಬೆಳೆಗಳು ಈ ವರ್ಷ ಇನ್ನೂ ಬಿತ್ತನೆಯೇ ಆಗಿಲ್ಲ. ಇದರಿಂದ ಮಳೆಯಾಶ್ರಿತ ಭೂಮಿ ಸಂಪೂರ್ಣ ಬರಡಾಗಿ ನಿಂತಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.