ಬೆಳಗಾವಿ: ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀರಭದ್ರ ಅಥವಾ ವೀರಗಾಸೆ ಕುಣಿತ ಮಾಡುವವರಿಗೂ ಸರ್ಕಾರ ಮಾಸಾಶನ ನೀಡಬೇಕು ಎಂದು ಪುರವಂತರು ಒತ್ತಾಯಿಸಿದ್ದಾರೆ.
ಕರಾವಳಿ ಭಾಗದ ದೈವ ನರ್ತಕರಿಗೆ ಸರ್ಕಾರದಿಂದ ಮಾಸಾಶನ ವಿಚಾರಕ್ಕೆ ಪ್ರತಿಕ್ರಿಯಿಸಿದ ಪುರವಂತರೊಬ್ಬರು, ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡಲಿ. ಅನಾದಿ ಕಾಲದಿಂದಲೂ ರಥೋತ್ಸವ, ಗುಗ್ಗಳೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ತಾಲೂಕಿನಲ್ಲಿಯೂ ವೀರಗಾಸೆ ಕಲಾವಿದರ ಸಂಘವಿದೆ. 60 ವರ್ಷ ಮೀರಿದ ವೀರಗಾಸೆ ಪುರವಂತರಿದ್ದಾರೆ. ಹೀಗಾಗಿ ಅವರಿಗೂ ಸಹ ಮಾಸಾಶನ ನೀಡಬೇಕು ಎಂದು ಬೆಳಗಾವಿಯಲ್ಲಿ ಕಲಾವಿದ ಪಂಚಾಕ್ಷರಿ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬೆಂಬಲ: ಸಾಮಾಜಿಕ ಜಾಲತಾಣಗಳಲ್ಲೂ ವೀರಗಾಸೆ ಕುಣಿತ ಮಾಡುವ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡಬೇಕು ಎಂಬುದಕ್ಕೆ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ: ಜಾನಪದ ಅಕಾಡೆಮಿ ಪ್ರಶಸ್ತಿ: ಚಾಮರಾಜನಗರದ ವೀರಗಾಸೆ ಕಲಾವಿದ ಆಯ್ಕೆ