ETV Bharat / state

ಬೆಳಗಾವಿಗೆ ಸಿಎಂ ಆಗಮನ ಹಿನ್ನೆಲೆ ರಸ್ತೆ ದುರಸ್ತಿ: ಜನಸಾಮಾನ್ಯರ ಆಕ್ರೋಶ - ಈಟಿವಿ ಭಾರತ ಕರ್ನಾಟಕ

ಹಾಳಾದ ರಸ್ತೆಯನ್ನು ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಪಿಡಬ್ಲ್ಯೂಡಿ ಅಧಿಕಾರಿಗಳು ಈಗ ಸಿಎಂ ಆಗಮಿಸುತ್ತಿರುವುದಕ್ಕೆ ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

public-are-outraged-on-pwd-officials-for-not-repair-of-roads-in-belgavi
ಸಿಎಂ ಆಗಮನ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳಿಂದ ರಸ್ತೆ ದುರಸ್ತಿ ಕಾರ್ಯ: ಅಧಿಕಾರಿಗಳ ಧೋರಣೆಗೆ ಜನಸಾಮಾನ್ಯರು ಆಕ್ರೋಶ
author img

By

Published : Aug 9, 2023, 10:12 PM IST

Updated : Aug 11, 2023, 10:47 AM IST

ಬೆಳಗಾವಿಗೆ ಸಿಎಂ ಆಗಮನ ಹಿನ್ನೆಲೆ ರಸ್ತೆ ದುರಸ್ತಿ: ಜನಸಾಮಾನ್ಯರ ಆಕ್ರೋಶ

ಚಿಕ್ಕೋಡಿ (ಬೆಳಗಾವಿ): ಆಗಸ್ಟ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮಕ್ಕೆ ಆಗಮಿಸುತ್ತಿದ್ದು ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅಥಣಿಯಿಂದ ಕೋಕಟನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 20 ಕಿಮೀ ರಸ್ತೆ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿಂದೆ ರಸ್ತೆ ದುರಸ್ತಿಗೆ ಅಥಣಿ ಲೋಕೋಪಯೋಗಿ ಅಧಿಕಾರಿಗಳಿಗೆ ಹಲವು ಬಾರಿ ಜನರು ಮನವಿ ಸಲ್ಲಿಸಿದರೂ ಕ್ಯಾರೆನ್ನದ ಅಧಿಕಾರಿಗಳು ಸದ್ಯ ಸಿಎಂ ಬರುತ್ತಿದ್ದಾರೆಂದು ದುರಸ್ತಿಗೆ ಮುಂದಾಗಿದ್ದು, ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.

ಅಥಣಿಯಿಂದ ಕೋಕಟನೂರ ಮಾರ್ಗವಾಗಿ ಸಾವಳಗಿ ಗ್ರಾಮಕ್ಕೆ ಸಂಪರ್ಕ ನೀಡವು ರಸ್ತೆ ಹಾಳಾಗಿದ್ದು, ಅಭಿವೃದ್ಧಿಗೆ ಹಲವು ಬಾರಿ ಸ್ಥಳಿಯರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಕುರುಡು ಜಾಣತನ ಪ್ರದರ್ಶನ ಮಾಡಿದ್ದರು. ಆದರೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಆರು ಸಚಿವರು ಕೋಕಟನೂರು ಗ್ರಾಮಕ್ಕೆ ವಿವಿಧ ಕಾಮಗಾರಿಗಳನ್ನು ಉದ್ಘಾಟನೆಗೆ ಬರುತ್ತಿರುವುದಕ್ಕಾಗಿ ಇದೀಗ ಸಮರೋಪಾದಿಯಲ್ಲಿ ದುರಸ್ತಿಗೆ ಮುಂದಾಗಿದ್ದಾರೆ. ಸಿಎಂ ಸಂಚರಿಸುವ ರಸ್ತೆಯನ್ನಷ್ಟೇ ದುರಸ್ತಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೋಕಟನೂರ-ಯಲ್ಲಮ್ಮವಾಡಿ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ಅತ್ತ ನೋಡದೆ ತಾರತಮ್ಯ ಮಾಡುತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಥಣಿ ಸಾವಳಗಿ ಮಾರ್ಗ ಜಿಲ್ಲಾ ಹೆದ್ದಾರಿಯಾಗಿದ್ದು, ಹಲವು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಸ್ಥಳೀಯ ಲೋಕೋಪಯೋಗಿ ಇಲಾಖೆಗೆ ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನಾನುಕೂಲವಾಗುತ್ತದೆ ರಸ್ತೆ ಅಭಿವೃದ್ಧಿ ಮಾಡಿ ಎಂದು ಸ್ಥಳೀಯರು ಮನವಿ ಸಲ್ಲಿಸಿದ್ದರು.

"ಅಧಿಕಾರಿಗಳು ಇದಕ್ಕೆ ಸ್ಪಂದಿಸದೇ, ಈಗ ಮುಖ್ಯಮಂತ್ರಿ ಬರುತ್ತಾರೆಂದು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನೀತಿಯನ್ನು ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಆದರೆ ಅಥಣಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜನಸಾಮಾನ್ಯರಿಗೊಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ" ಎಂದು ರೈತ ಮುಖಂಡ ರಾಜಕುಮಾರ್ ಜಂಬಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ: ಸಚಿವ ಜಮೀರ್ ಅಹಮ್ಮದ್​

Last Updated : Aug 11, 2023, 10:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.