ETV Bharat / state

ಪರಿಹಾರಕ್ಕಾಗಿ ನೆರೆ ಸಂತ್ರಸ್ತರಿಂದ ಅನಿರ್ದಿಷ್ಟ ಸತ್ಯಾಗ್ರಹ

ಕೃಷ್ಣಾ ನದಿಯ ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡ ಪಲಾನುಭವಿಗಳ ಮನೆಗಳು ಆನ್‌ಲೈನ್‌ನಲ್ಲಿ ಡಿಲೀಟ್ ಆಗಿದ್ದು, ಆ ಮನೆಗಳ ಪರಿಹಾರ ಹಣ ಒದಗಿಸಬೇಕೆಂದು ಮಾಂಜರಿ ಗ್ರಾಮ ಪಂಚಾಯತ್​​ ಎದುರು ಅನಿರ್ದಿಷ್ಟ ಕಾಲದವರಗೆ ನೆರೆ ಸಂತ್ರಸ್ತರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

Protest in front of Manjari Gram Panchayat
ಪರಿಹಾರಕ್ಕಾಗಿ ನೆರೆ ಸಂತ್ರಸ್ಥರಿಂದ ಅನಿರ್ಧಿಷ್ಟ ಸತ್ಯಾಗ್ರಹ
author img

By

Published : Sep 29, 2020, 6:51 PM IST

ಚಿಕ್ಕೋಡಿ: 2019ರಲ್ಲಿ ಸಂಭವಿಸಿದ ಕೃಷ್ಣಾ ನದಿಯ ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡ ಪಲಾನುಭವಿಗಳ ಮನೆಗಳು ಆನ್‌ಲೈನ್‌ನಲ್ಲಿ ಡಿಲೀಟ್ ಆಗಿದ್ದು, ಆ ಮನೆಗಳ ಪರಿಹಾರ ಹಣ ಒದಗಿಸಬೇಕು ಎಂದು ಮಾಂಜರಿ ಗ್ರಾಮ ಪಂಚಾಯತ್​​ ಎದುರು ಅನಿರ್ದಿಷ್ಟ ಕಾಲದವರಗೆ ನೆರೆ ಸಂತ್ರಸ್ತರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಪರಿಹಾರಕ್ಕಾಗಿ ನೆರೆ ಸಂತ್ರಸ್ತರಿಂದ ಅನಿರ್ದಿಷ್ಟ ಸತ್ಯಾಗ್ರಹ

ಕಳೆದ ವರ್ಷ ಕೃಷ್ಣಾ ನದಿಯಿಂದ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮವು ಅಕ್ಷರಶಃ ತತ್ತರಿಸಿ ಹೋಗಿದ್ದು, ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಳುಗಡೆಯಾದ ಮನೆಗಳಿಗೆ ಸರ್ಕಾರ 5ಲಕ್ಷ ರೂ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಈ ಮಾಂಜರಿ ಗ್ರಾಮದಲ್ಲಿ ಮನೆಗಳ ಸರ್ವೆ ಕಾರ್ಯ ಸಮರ್ಪಕವಾಗದೇ, ಸಂತ್ರಸ್ತರು ಮನೆಗಳಿಂದ ವಂಚಿತರಾಗಿದ್ದಾರೆ. ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಅರ್ಹ ಸಂತ್ರಸ್ತರನ್ನು ಮಂಜೂರಾತಿ ಪಟ್ಟಿಯಿಂದ ಕೈಬಿಡಲಾಗಿದೆ. ಸದ್ಯ ಮಾಂಜರಿ ಗ್ರಾಮದಲ್ಲಿ ನೆರೆ ಸಂತ್ರಸ್ತರು ರಸ್ತೆ, ಸಮುದಾಯ ಭವನ ಹಾಗೂ ಬಿದ್ದ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಮಾಂಜರಿ ಗ್ರಾಮದ ನೆರೆ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ರೊಚ್ಚಿಗೆದ್ದ ಮಾಂಜರಿಯ ನೆರೆ ಸಂತ್ರಸ್ತರು ಇವತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದರು. ಮಾಂಜರಿ ಗ್ರಾಮದಲ್ಲಿ ಸದ್ಯ 521 ಮನೆಗಳ ಮಂಜೂರಾತಿ ಸಿಗಬೇಕಿದೆ. ಸರ್ಕಾರ ಕೂಡಲೇ ನೆರೆ ಸಂತ್ರಸ್ತರಿಗೆ ದೊರೆಯಬೇಕಾದ ಮನೆಗಳನ್ನು ನ್ಯಾಯಯುತವಾಗಿ ಮಂಜೂರಾತಿ ಮಾಡಿಕೊಡಬೇಕೆಂದು ನೆರೆ ಸಂತ್ರಸ್ತರು ಆಗ್ರಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.