ETV Bharat / state

ನೆರೆ ಪೀಡಿತ ಪ್ರದೇಶದ ಸರ್ವೆಯಲ್ಲಿ ತಾರತಮ್ಯ ಆರೋಪ: ರಸ್ತೆ ತಡೆದು ಸಂತ್ರಸ್ತರ ಪ್ರತಿಭಟನೆ - Protest of Janavada villagers in Athani taluk

ಸರ್ವೆ ಕಾರ್ಯದಲ್ಲಿ ತಾರತಮ್ಯ ತೋರಲಾಗುತ್ತಿದೆ. ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಿ, ಹಾನಿಯಾದ ಮನೆಗಳನ್ನು ಗುರುತಿಸುವಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.

ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರ ಪ್ರತಿಭಟನೆ
author img

By

Published : Nov 5, 2019, 7:37 PM IST

ಅಥಣಿ(ಬೆಳಗಾವಿ): ರಾಜ್ಯ ಸರ್ಕಾರ ಕೃಷ್ಣಾ ನದಿಯ ಪ್ರವಾಹ ಪೀಡಿತರಿಗೆ ಪರಿಹಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಸಂಪರ್ಕ ರಸ್ತೆ ತಡೆದ ಪ್ರತಿಭಟನಾಕಾರರು, ಸರ್ವೆ ಕಾರ್ಯದಲ್ಲಿ ತಾರತಮ್ಯ ತೋರಲಾಗುತ್ತಿದೆ. ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಿ, ಹಾನಿಯಾದ ಮನೆಗಳನ್ನು ಗುರುತಿಸುವಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಇನ್ನು ಸಮರ್ಪಕವಾಗಿ ಸರ್ವೆ ನಡೆಸಬೇಕು ಮತ್ತು ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರ ಪ್ರತಿಭಟನೆ

ರಸ್ತೆ ತಡೆಯಿಂದಾಗಿ ಸತ್ತಿ ಗ್ರಾಮದ ಹೊರವಲಯದಲ್ಲಿ ವಾಹನ ಸವಾರರು ಕಿಲೋ ಮೀಟರ್​ಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಥಣಿ ತಹಶಿಲ್ದಾರ್​ ಎಂ. ಎನ್. ಬಳಿಗಾರ ಹಾಗೂ ಅಥಣಿ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.

Intro:ರಾಜ್ಯ ಸರ್ಕಾರ ಕೃಷ್ಣಾ ನದಿಯ ಪ್ರವಾಹ ಪೀಡಿತರಿಗೆ ಪರಿಹಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿ ,ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ರಸ್ತೆ ತಡೆದು ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ..Body:ಅಥಣಿ ವರದಿ:
ಫಾರ್ಮ್ಯಾಟ್: ಎವಿ
ಸ್ಲಗ್: ಪರಿಹಾರಕ್ಕೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

Anchor:
ರಾಜ್ಯ ಸರ್ಕಾರ ಕೃಷ್ಣಾ ನದಿಯ ಪ್ರವಾಹ ಪೀಡಿತರಿಗೆ ಪರಿಹಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿ

ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ರಸ್ತೆ ತಡೆದು ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ..

ಬಾಗಲಕೋಟ ಜಿಲ್ಲೆಯ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಸಂಪರ್ಕ ರಸ್ತೆ ತಡೆದ ಪ್ರತಿಭಟನಾಕಾರರು ಸರ್ವೆ ಕಾರ್ಯದಲ್ಲಿ ತಾರತಮ್ಯ ತೋರಲಾಗುತ್ತಿದ್ದು ಎ,ಬಿ,ಸಿ ಕೆಟಗರಿ ಯಾಗಿ ಹಾನಿಯಾದ ಮನೆಗಳನ್ನು ಗುರುತಿಸುವಲ್ಲಿ ಅನ್ಯಾಯ ಮಾಡಲಾಗಿದ್ದು ಸಮರ್ಪಕವಾಗಿ ಸರ್ವೆ ನಡೆಸಬೇಕು ಮತ್ತು ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ...

ಸದ್ಯ ಸರ್ಕಾರದ ಹತ್ತು ಸಾವಿರ ಪರಿಹಾರ ನೀಡಿದ ಬಳಿಕ ಬಿದ್ದ ಗುಡಿಸಲುಗಳನ್ನು ಕಟ್ಟಿಕೊಂಡಿದ್ದು ಮರು ಸರ್ವೆ ಮಾಡುವಾಗ ಅಂತಹ ಫಲಾನುಭವಿಗಳನ್ನು ಪರಿಗಣಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ...

ಪ್ರತಿಭಟನೆ ಹಾಗೂ ರಸ್ತೆ ತಡೆಇಂದಾಗಿ ಸತ್ತಿ ಗ್ರಾಮದ ಹೊರವಲಯದಲ್ಲಿ ವಾಹನ ಸವಾರರು ಕಿಲೋಮಿಟರುಗಟ್ಟಲೆ ರಸ್ತೆಯಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಕೆಲಹೊತ್ತು ಗೊಂದಲದ ವಾತಾವರಣ ಕೂಡ ಏರ್ಪಟ್ಟಿತ್ತು,ಸ್ಥಳಕ್ಕೆ ಅಥಣಿ ತಹಶಿಲ್ದಾರ ಎಮ್ ಎನ್ ಬಳಿಗಾರ ಹಾಗೂ ಅಥಣಿ ಪೋಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದು ಕಂಡುಬಂತು...Conclusion:ಶಿವರಾಜ್ ನೇಸರ್ಗಿ ಅಥಣಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.