ETV Bharat / state

ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ವಿಚಾರ: ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ವಿಚಾರ ಚರ್ಚೆಗೆ ಬಂತು. ಈ ವೇಳೆ ಶಾಸಕರನ್ನು ಎಲ್ಲಿಯೂ ನಿರ್ಲಕ್ಷ್ಯ ಮಾಡಿಲ್ಲ. ಹಾಗಾಗಿ ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದಾಗ, ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು.

legislative assembly
ವಿಧಾನಸಭೆ
author img

By

Published : Dec 27, 2022, 7:50 PM IST

ಬೆಂಗಳೂರು: ಶಾಸಕರ ಹಕ್ಕುಚ್ಯುತಿ ಉಲ್ಲಂಘನೆಯಾಗಿರುವ ವಿಚಾರಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಇಂದು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕನಾಗಿರುವ ನನ್ನನ್ನು ಕಡೆಗಣಿಸಲಾಗಿದೆ. ನನ್ನ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅವರಿಂದಲೇ ಉದ್ಘಾಟಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದರು.

ಅಮರಣಾಂತ ಉಪವಾಸದ ಎಚ್ಚರಿಕೆ: ಮುಂದುವರೆದು ಮಾತನಾಡಿ, ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಅಮರಣಾಂತರ ಉಪವಾಸ ಕೂರುತ್ತೇನೆ ಎಂದು ಅವರು ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು. ತಕ್ಷಣವೇ ಸಭಾಧ್ಯಕ್ಷರು ಇದನ್ನು ಹಕ್ಕುಚ್ಯುತಿಗೆ ಶಿಫಾರಸು ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜೇಗೌಡ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದರು.

ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಜೆಡಿಎಸ್ ಇರಲಿ. ಈ ರೀತಿ ಹಾಲಿ ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡುವುದು ಶಾಸಕರ ಹಕ್ಕನ್ನು ಮೊಟಕುಗೊಳಿಸುತ್ತದೆ. ಹಿಂದೆ ಈ ರೀತಿ ಯಾರೇ ಮಾಡಿದ್ದರೂ ತಪ್ಪು. ಹಾಗೆಂದು ನೀವು ಕೂಡ ಮುಂದುವರೆಸುವುದು ತಪ್ಪು ಎಂದು ಟೀಕಿಸಿದರು. ಸದಸ್ಯರ ಹಕ್ಕುಗಳನ್ನು ಕಾಪಾಡುವುದು ಸಭಾಧ್ಯಕ್ಷರ ಜವಾಬ್ದಾರಿ ಎಂದರು. ಇದಕ್ಕೆ ಸದನದ ಉಪ ನಾಯಕ ಯು.ಟಿ.ಖಾದರ್, ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಲಿಂಗೇಶ್, ನಂಜೇಗೌಡ, ಸಾ.ರಾ.ಮಹೇಶ್, ಶಿವಲಿಂಗೇಗೌಡ ಸೇರಿದಂತೆ ಇತರ ಶಾಸಕರು ದನಿಗೂಡಿಸಿದರು.

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಒಂದು ನಿಲುವಳಿ ಸೂಚನೆ ಮೇಲೆ ಇದೇ ಸದನದಲ್ಲಿ ಒಂದು ವಾರ ಚರ್ಚೆ ನಡೆದ ನಿದರ್ಶನವಿದೆ. ಸರ್ಕಾರ ಬರುತ್ತದೆ, ಹೋಗುತ್ತದೆ. ಯಾವ ಪಕ್ಷ ಎಂಬುದು ಮುಖ್ಯವಾಗಬಾರದು. ಶಾಸಕರ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಅವರಿಗೆ ನಿರ್ಬಂಧ ಹಾಕಿ ಪರಾಜಿತ ಅಭ್ಯರ್ಥಿಯಿಂದ ಉದ್ಘಾಟನೆ ಮಾಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜಕೀಯ ಕಾರಣಗಳು ಏನೇ ಇರಲಿ, ಜನರಿಂದ ಆಯ್ಕೆಯಾದವರು ಶಾಸಕನೇ. ಈಗಿನ ಚುನಾವಣೆಯಲ್ಲಿ ಗೆದ್ದು ಬರುವುದೆಂದರೆ ಏಳು ಕೆರೆಯ ನೀರು ಕುಡಿದಷ್ಟೇ ಸವಾಲಿನ ಕೆಲಸ. ಮುಖ್ಯಮಂತ್ರಿಗಳ ಬಳಿ ಸಂಬಂಧಿಕರು, ಸೋತವರು, ಸಮುದಾಯದವರು ಹೀಗೆ ಬೇರೆ ಬೇರೆಯವರು ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹಾಗಂತ ಹಾಲಿ ಶಾಸಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಶಾಸಕರೇ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದಾರೆ: ಈ ಮಧ್ಯೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹಿಂದೆ ಶಾಸಕರು, ಶಾಸಕರಾಗಿ ಕೆಲಸ ಮಾಡುತ್ತಿದ್ದರು. ಈಗ ಶಾಸಕರೇ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹತ್ತು ಲಕ್ಷ ಅನುದಾನ ಘೋಷಣೆ ಮಾಡಿದರು. ಆಗ ಸಚಿವರೊಬ್ಬರು ನನ್ನ ಅನುಮತಿ ಇಲ್ಲದೆ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಈಗ ಅಂತಹ ಕಾಲ ಹೋಗಿದೆ. ಶಾಸಕರೇ ಕಾರ್ಯಪಾಲಕರಾಗುತ್ತಿರುವುದರಿಂದ ಇಲ್ಲಿ ಅನುದಾನ ಹೇಗೆ ಹೋಗುತ್ತದೆ ಎಂಬುದು ನಮಗೂ ಗೊತ್ತು. ನಿಮಗೂ ಗೊತ್ತು. ಆದರೆ, ಶಾಸಕರ ಕ್ಷೇತ್ರಕ್ಕೆ ಎಲ್ಲಿಯ ಅನುದಾನವನ್ನು ಕಡಿತ ಮಾಡಿಲ್ಲ. ಹೇಗೋ ಅಭಿವೃದ್ಧಿ ಕೆಲಸಗಳಿಗೆ ಹಣ ಬರುತ್ತದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು ಎಂದು ಹೇಳಿದರು.

ಸದನದ ಬಾವಿಗಿಳಿದು ಪ್ರತಿಭಟನೆ: ಶಾಸಕರನ್ನು ಎಲ್ಲಿಯೂ ನಿರ್ಲಕ್ಷ್ಯ ಮಾಡಿಲ್ಲ. ಹಾಗಾಗಿ, ಇದು ಹಕ್ಕುಚ್ಯುತಿಗೆ ಬರುವುದಿಲ್ಲ ಎಂದಾಗ, ಸಚಿವರ ಉತ್ತರಕ್ಕೆ ಬೇಸರಗೊಂಡ ಶಾಸಕರಾದ ರಾಜೇಗೌಡ ಹಾಗೂ ಡಾ ರಂಗನಾಥ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹಕ್ಕುಚ್ಯುತಿ ಗೆ ಈ ನಿಯಮ ಬರುವುದಿಲ್ಲ. ಯಾವ ಶಿಷ್ಟಾಚಾರ ಉಲ್ಲಂಘನೆಯಾಗಿರುವ ದಾಖಲೆ ಕೊಟ್ಟಿಲ್ಲ ಎಂದರು. ಇದರಿಂದ ಮತ್ತಷ್ಟು ಕೆರಳಿದ ರಾಜೇಗೌಡ ಅವರು, ಕಾರ್ಯಕ್ರಮ ಉದ್ಘಾಟನೆಗೆ ಕರೆಯುತ್ತಿಲ್ಲ ಎಂದರು.

ಸದನದ ಸಮಯವನ್ನು ಬೇರೆ ವಿಷಯಕ್ಕೆ ಬಳಸಿಕೊಳ್ಳೋಣ, ಇದರ ಬಗ್ಗೆ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡೊಣ ಎಂದು ಸ್ಪೀಕರ್ ಹೇಳಿದಾಗ, ಶಾಸಕರು ಧರಣಿಯನ್ನು ವಾಪಸ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.