ಬೆಳಗಾವಿ: ರಾಜ್ಯದ ಹೆಸರಾಂತ ವಕೀಲ ಹಾಗೂ ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳುವಾಡಮಠ (64) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ವಾರವಷ್ಟೇ ಅನಾರೋಗ್ಯದ ಕಾರಣ ಮುಳುವಾಡಮಠ ಅವರು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇವರು ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮತ್ತು ರಾಜ್ಯ ಬಾರ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದರು. ಕಾನೂನು ಸೇವೆಯಲ್ಲಿ ರಾಜ್ಯದಲ್ಲೇ ಮುಳುವಾಡಮಠ ಅವರು ದೊಡ್ಡ ಹೆಸರು ಮಾಡಿದ್ದರು.
ಮುಳುವಾಡಮಠ ಅವರ ನಿಧನಕ್ಕೆ ಬಾರ್ ಅಸೋಸಿಯೇಷನ್ ಸದಸ್ಯರು ಹಾಗೂ ಜಿಲ್ಲೆಯ ವಕೀಲರು ಸಂತಾಪ ಸೂಚಿಸಿದ್ದಾರೆ.