ETV Bharat / state

2ನೇ ಹಂತದ ಗ್ರಾಪಂ ಚುನಾವಣೆ: ಅಥಣಿ ತಾಲೂಕು ಆಡಳಿತದಿಂದ ಭರದ ಸಿದ್ಧತೆ - 2ನೇ ಹಂತದ ಗ್ರಾ.ಪಂ ಚುನಾವಣೆ

ಅಥಣಿ ತಾಲೂಕಿನಲ್ಲಿ 46 ಗ್ರಾಮ ಪಂಚಾಯಿತಿಗಳ ಪೈಕಿ 41 ಗ್ರಾಮ ಪಂಚಾಯಿತಿಗಳಿಗೆ 2ನೇ ಹಂತದ ಚುನಾವಣೆ ನಡೆಯುತ್ತಿದೆ.

athani
2ನೇ ಹಂತದ ಗ್ರಾ.ಪಂ ಚುನಾವಣೆ: ಅಥಣಿ ತಾಲೂಕು ಆಡಳಿತದಿಂದ ಭರದ ಸಿದ್ಧತೆ
author img

By

Published : Dec 26, 2020, 5:06 PM IST

ಅಥಣಿ: ಡಿ. 27ರಂದು ನಡೆಯಲಿರುವ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಥಣಿ ತಾಲೂಕು ಆಡಳಿತದಿಂದ ಭರದ ಸಿದ್ಧತೆ ನಡೆಸಲಾಗುತ್ತಿದೆ.

2ನೇ ಹಂತದ ಗ್ರಾಪಂ ಚುನಾವಣೆ: ಅಥಣಿ ತಾಲೂಕು ಆಡಳಿತದಿಂದ ಭರದ ಸಿದ್ಧತೆ

ತಾಲೂಕಿನಲ್ಲಿ 46 ಗ್ರಾಮ ಪಂಚಾಯಿತಿಗಳ ಪೈಕಿ 41 ಗ್ರಾಮ ಪಂಚಾಯಿತಿಗಳಿಗೆ 2ನೇ ಹಂತದ ಚುನಾವಣೆ ನಡೆಯುತ್ತಿದೆ. ಇದರಲ್ಲಿ 5 ಗ್ರಾಪಂ ಚುನಾವಣೆ ಅವಧಿ ವಿಸ್ತರಣೆ ಇರುವುದರಿಂದ ಸದ್ಯಕ್ಕೆ ಚುನಾವಣೆ ನಡೆಯುತ್ತಿಲ್ಲ.

ಪಾರ್ಥನಹಳ್ಳಿ, ಯಲಿಹಡಲಗಿ, ಶೇಗುಣಶಿ, ಖಿಳೇಗಾಂವ್, ಹಲ್ಯಾಳ, ಕೊಟ್ಟಲಗಿ, ಅಥಣಿ ಗ್ರಾಮೀಣ, ಸತ್ತಿ, ಮದಭಾವಿ, ಐಗಳಿ, ಕೋಕಟನೂರ, ಕಕಮರಿ, ನಂದಗಾಂವ್, ಹುಲಗಬಾಳಿ, ಅನಂತಪೂರ, ಅಡಹಳ್ಳಿ, ಕೋಹಳ್ಳಿ, ಜಂಬಗಿ, ಸಂಬರಗಿ, ಬಳ್ಳಿಗೇರಿ, ಶಿರಹಟ್ಟಿ, ಝುಂಜರವಾಡ, ಕಟಗೇರಿ, ಶಿರೂರ, ಅರಟಾಳ್, ತಂಗಡಿ, ಸಪ್ತಸಾಗರ, ನಾಗನೂರ ಪಿ.ಕೆ., ಗುಂಡೆವಾಡಿ, ಮಲಾಬಾದ, ಅರಳಿಹಟ್ಟಿ ಕನ್ನಾಳ, ಚಮಕೇರಿ, ಬಡಚಿ, ಸುಟ್ಟಟ್ಟಿ, ಜಕ್ಕಾರಟ್ಟಿ, ಸಿದ್ದೇವಾಡಿ, ರಡೇರಹಟ್ಟಿ ಸೇರಿ ಒಟ್ಟು 41 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆಗೆ ನಡೆಯಲಿದೆ.

741 ಸದಸ್ಯ ಸ್ಥಾನಗಳ ಪೈಕಿ 81 ಸದಸ್ಯರ ಸ್ಥಾನಗಳಿಗೆ ಅವಿರೋಧ ಆಯ್ಕೆಯಾದರೆ, 651 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 9 ಸದ್ಯಸರ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿವೆ.

ಓದಿ: ಗಡಿಭಾಗದ ಶಕ್ತಿ ದೇವತೆ ಕೋಕಟನೂರ ಯಲ್ಲಮ್ಮ ದೇವಿ ಜಾತ್ರೆ ರದ್ದುಗೊಳಿಸಿ ಡಿಸಿ ಆದೇಶ

ಈ ಬಾರಿ ಅಥಣಿ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಗೆ 1,735 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದು, 900 ಪುರುಷ ಅಭ್ಯರ್ಥಿಗಳು ಹಾಗೂ 835 ಮಹಿಳಾ ಅಭ್ಯರ್ಥಿಗಳು ಸ್ಫರ್ಧಿಸಿದ್ದಾರೆ. ತಾಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 2,34,508 ಮತದಾರರಿದ್ದು, ಇದರಲ್ಲಿ 1,21,511 ಪುರುಷ ಮತದಾರರು, 1,12,997 ಮಹಿಳಾ ಮತದಾರರಿದ್ದಾರೆ.

ತೆಲಸಂಗ್, ಸವದಿ, ದರೂರ, ಮಹಿಷವಾಡಗಿ, ನಂದೇಶ್ವರ ಈ ಐದು ಗ್ರಾಮ ಪಂಚಾಯಿತಿಗಳ ಚುನಾವಣೆ ಸದ್ಯಕ್ಕಿಲ್ಲ ಎಂದು ಅಥಣಿ ತಹಶೀಲ್ದಾರ್​ ದುಂಡಪ್ಪ ಕೋಮಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ ಪೆಟ್ಟಿಗೆ ಹಾಗೂ ಸೂಚನಾ ಫಲಕಗಳದೊಂದಿಗೆ ನಿಯೋಜನೆಗೊಂಡ ಗ್ರಾಮಗಳಿಗೆ ತೆರಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.