ETV Bharat / state

ಕೊರೊನಾ ವಿರುದ್ದ ಸೈನಿಕರಂತೆ ಹೋರಾಡುತ್ತಿರುವ ಅಧಿಕಾರಿಗಳ ಕೆಲಸಕ್ಕೆ ಶ್ಲಾಘನೆ - praja pratinidhi foundation news in athani

ಕೊರೊನಾ ವೈರಸ್ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುವ ಮೂಲಕ ಪ್ರಜಾ ಪರಿವರ್ತನಾ ಪೌಂಡೇಶನ್ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

praja-pratinidhi-foundation
ಪ್ರಜಾ ಪರಿವರ್ತನಾ ಪೌಂಡೇಶನ್
author img

By

Published : Apr 7, 2020, 1:17 PM IST

ಅಥಣಿ :ಪಟ್ಟಣದಲ್ಲಿ ಕೊರೊನಾ ವೈರಸ್ ಕಟ್ಟೆಚ್ಚರಕ್ಕೆ ಸತತವಾಗಿ ಪರಿಶ್ರಮ, ಪ್ರಾಮಾಣಿಕ ಕೆಲಸ ಮಾಡುತ್ತಿರುವ ಮತ್ತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುವ ಮೂಲಕ ಪ್ರಜಾ ಪರಿವರ್ತನಾ ಪೌಂಡೇಶನ್ ವತಿಯಿಂದ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ವೇಳೆ, ಅಥಣಿ ಡಿವೈಎಸ್​ಪಿ ಎಸ್.ವಿ. ಗಿರೀಶ, ಪುರಸಭೆ ಅಧಿಕಾರಿಗಳು, ತಾಲೂಕು ಪಂಚಾಯತ್​​ ಅಧಿಕಾರಿಗಳು, ಉಪತಹಶೀಲ್ದಾರ್​ ಸೇರಿದಂತೆ ಇತರ ಅಧಿಕಾರಿಗಳಿಗೆ ಗುಲಾಬಿ ಹೂ ಕೊಟ್ಟು ಅವರ ಸೇವೆಗೆ ಧನ್ಯವಾದ ಅರ್ಪಿಸಲಾಯಿತು.

ಪ್ರಜಾ ಪರಿವರ್ತನಾ ಪೌಂಡೇಶನ್

ಈ ವೇಳೆ ಮಾತನಾಡಿದ ಪ್ರಜಾ ಪರಿವರ್ತನಾ ಫೌಂಡೇಶನ್ ಕಾರ್ಯಾಧ್ಯಕ್ಷ ದೀಪಕ ಬುರ್ಲಿ, ಜಾಗತಿಕ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಅಥಣಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಮತ್ತು ಅವರ ಸೇವೆ ಅಗ್ರಗಣ್ಯವಾಗಿದ್ದು, ಅವರ ನಿರಂತರ ಶ್ರಮ ಸಾರ್ವಜನಿಕರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಮತ್ತು ಜನರ ಜೀವ ಕಾಪಾಡುವ ಹಿತಾಸಕ್ತಿಯಿಂದ ಕೂಡಿದೆ. ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಇಂದು ಪ್ರಜಾ ಪರಿವರ್ತನಾ ಫೌಂಡೇಶನ್ ಮಾಡಿದೆ ಎಂದರು.

ಈ ವೇಳೆ, ಪ್ರಜಾ ಪರಿವರ್ತನಾ ಫೌಂಡೇಶನ್ ಗೌರವ ಅಧ್ಯಕ್ಷ ಚಿದಾನಂದ ಶೇಗುಣಸಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.