ETV Bharat / state

ಕುಂದಾನಗರಿಯಲ್ಲಿ 'ಯುವರತ್ನ'... ಪುನೀತ್​ ಕಂಡು ಅಭಿಮಾನಿಗಳ ಹರ್ಷೋದ್ಘಾರ - Power star who came to Kundanagari to promote the film 'Yuvaratna'

ಯುವರತ್ನ ಸಿನಿಮಾ ಪ್ರಚಾರಕ್ಕಾಗಿ ಇಂದು ಮಧ್ಯಾಹ್ನ ಕುಂದಾನಗರಿಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಪಾಲಿಸಿ, ಎಲ್ಲರೂ ಮಾಸ್ಕ್ ಧರಿಸಿ ಹುಷಾರಾಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು. ನೆಚ್ಚಿನ ನಟನ ಕಂಡ ಬೆಳಗಾವಿ ಮಂದಿ ಶಿಳ್ಳೆ ಹಾಕಿ ಸಂಭ್ರಮಿಸಿದರು.

film 'Yuvaratna'
'ಯುವರತ್ನ' ಸಿನಿಮಾ ಪ್ರಚಾರಕ್ಕೆಕುಂದಾನಗರಿಗೆ ಬಂದ ಪವರ್​ ಸ್ಟಾರ್​​​
author img

By

Published : Mar 21, 2021, 5:13 PM IST

ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್, ತಾವು ಅಭಿನಯಿಸಿದ ಯುವರತ್ನ ಸಿನಿಮಾದ ಪ್ರಚಾರ ಮಾಡಿದರು. ಪುನೀತ್ ರಾಜಕುಮಾರ್​​ಗೆ, ಡಾಲಿ ಧನಂಜಯ್​, ಹಾಸ್ಯನಟ ರವಿಶಂಕರ್​ ಸೇರಿದಂತೆ ಇತರ ಸಹ ನಟರು‌ ಸಾಥ್ ನೀಡಿದರು.

ಕುಂದಾನಗರಿಯಲ್ಲಿ ಪವರ್​ ಸ್ಟಾರ್ ಚಿತ್ರ ಪ್ರಚಾರ ​​​

ಯುವರತ್ನ ಸಿನಿಮಾ ಪ್ರಚಾರಕ್ಕಾಗಿ ಇಂದು ಮಧ್ಯಾಹ್ನ ಕುಂದಾನಗರಿಗೆ ಆಗಮಿಸಿದ್ದ ಪುನೀತ್ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದರು. ಅಲ್ಲಿಂದ ಯುವರತ್ನ ಚಿತ್ರತಂಡ ನೇರವಾಗಿ ಕ್ಯಾಂಪ್ ಪ್ರದೇಶದಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಆಗಮಿಸಿತ್ತು.

film 'Yuvaratna'
'ಯುವರತ್ನ' ಸಿನಿಮಾ ಪ್ರಚಾರಕ್ಕೆ ಕುಂದಾನಗರಿಗೆ ಬಂದ ಪವರ್​ ಸ್ಟಾರ್​​​

ಈ ವೇಳೆ ಅಭಿಮಾನಿಗಳು ಹೂವಿನ ಹಾರ ಹಾಕಿ, ಡೊಳ್ಳು ಬಾರಿಸುವ ಮೂಲಕ ಅದ್ಧೂರಿಯಾಗಿ ಚಿತ್ರತಂಡವನ್ನು ಸ್ವಾಗತಿಸಿರು. ಈ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಲು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕನ್ನಡದ ಬಾವುಟ ಹಿಡಿದು ಅಭಿಮಾನಿಗಳು ಅಪ್ಪುಗೆ ಸ್ವಾಗತ ಕೋರಿದರು. ನಟ ಪುನೀತ್ ರಾಜ್‌ಕುಮಾರ್ ಬರ್ತಿದ್ದಂತೆ ಕುಂದಾನಗರಿಯಲ್ಲಿ ತುಂತುರು ಮಳೆ ಕೂಡ ಆರಂಭವಾಯಿತು‌.

ಓದಿ:ಕಲಬುರಗಿಗೆ ಆಗಮಿಸಿದ ಪವರ್​ ಸ್ಟಾರ್​ಗೆ ಹೂವಿನ ಸುರಿಮಳೆ​

ತುಂತುರು ಮಳೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅಪ್ಪು, ಕುಂದಾನಗರಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹುಟ್ಟಿದ ನಾಡು ಎಂದು ಬಣ್ಣಿಸಿದರು. ಪುನೀತ್ ಜೇನಿನ ಹೊಳೆಯೂ ಹಾಲಿನ ಮಳೆಯೋ ಎಂದು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನಿಮ್ಮನ್ನು ನೋಡಬೇಕು ಅಂತಾ ನಾನು ಬಂದಿದ್ದೇನೆ. ನಿಮಗೋಸ್ಕರ ನಾನು ಡ್ಯಾನ್ಸ್ ಮಾಡಿದ್ದೇನೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಎಲ್ಲರೂ ಮಾಸ್ಕ್ ಧರಿಸಿ ಹುಷಾರಾಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು. ಇದೇ ವೇಳೆ ಯುವರತ್ನ ಸಿನಿಮಾದ ಡೈಲಾಗ್ ಹೊಡೆದಿದ್ದರಿಂದ ಅಭಿಮಾನಿಗಳು ಖುಷ್​ ಆದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.