ಬೆಳಗಾವಿ: ಕೊರೊನಾ ತಡೆಗೆ ಸರ್ಕಾರ ಜಾರಿಗೆ ತಂದಿರುವ ಲಾಕ್‍ಡೌನ್ ಉಲ್ಲಂಘಿಸಿ ಓಡಾಟ ನಡೆಸಿದ 679 ಬೈಕ್ ಸೀಜ್ ಮಾಡಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ 78,200 ರೂ. ದಂಡ ಹಾಕಲಾಗಿದೆ.
ಲಾಕ್‍ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಜಿಲ್ಲೆಯ ಪೊಲೀಸರು ಬಿಸಿ ಮುಟ್ಟಿಸಿ ಖಡಕ್ ಕಾರ್ಯಾಚರಣೆ ನಡೆಸಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಓಡ್ಡಾಡುತ್ತಿದ್ದ 230 ಜನರ ವಿರುದ್ಧ ಪ್ರಕರಣ ದಾಖಲಾಗಿ, 140 ವಾಹನಗಳನ್ನು ಸೀಜ್ ಮಾಡಲಾಗಿದೆ.
ಚಿಕ್ಕೋಡಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಓಡ್ಡಾಡುತ್ತಿದ್ದ 45 ಜನರ ವಿರುದ್ಧ ಕೇಸ್, 4500 ರೂ. ದಂಡ ವಿಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ 25 ಜನರ ಮೇಲೆ ಕೇಸ್ ಬುಕ್ ಆಗಿದೆ. 2,500 ರೂ. ದಂಡ ವಸೂಲಿ ಜತೆಗೆ 86 ಬೈಕ್ ಸೀಜ್ ಮಾಡಿದ್ದಾರೆ.
ಅಥಣಿ: 109 ಜನರ ವಿರುದ್ಧ ಕೇಸ್, 10,900 ರೂ. ದಂಡ ಹಾಗೂ 112 ಬೈಕ್ ವಶಕ್ಕೆ ಪಡೆಯಲಾಗಿದೆ.
ಬೈಲಹೊಂಗಲ: ಮಾಸ್ಕ್ ಧರಿಸದ 106 ಜನರ ವಿರುದ್ಧ ಕೇಸ್, 10,600 ರೂ. ದಂಡ, ಸಾಮಾಜಿಕ ಅಂತರ ಮರೆತ 24 ಜನರ ಮೇಲೆ ದೂರು ದಾಖಲಿಸಿ 2,400 ರೂ. ದಂಡ ಹಾಕಲಾಗಿದ್ದು, 111 ಬೈಕ್ ಜಪ್ತಿ ಮಾಡಲಾಗಿದೆ.
ಗೋಕಾಕ: ಮಾಸ್ಕ್ ಧರಿಸದೆ ಓಡಾಡುತ್ತಿದ್ದ 165 ಜನರ ವಿರುದ್ಧ ಕೇಸ್, 11,100 ರೂ. ದಂಡ ವಿಧಿಸಲಾಗಿದೆ. 20 ಜನರು ಸಾಮಾಜಿಕ ಅಂತರ ಉಲ್ಲಂಘನೆ ಎಸಗಿದ್ದು, 6,500 ರೂ. ದಂಡ ಮತ್ತು 182 ಬೈಕ್ ಹಾಗೂ 3 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಮದುರ್ಗ: ಮಾರ್ಗಸೂಚಿ ಉಲ್ಲಂಘಿಸಿದ 65 ಜನರ ವಿರುದ್ಧ ಕೇಸ್, 6,500 ರೂ., ಸಾಮಾಜಿಕ ಅಂತರ ಕಾಯ್ದುಕೊಳ್ಳದ ಇಬ್ಬರ ವಿರುದ್ಧ ದೂರು, 200 ರೂ. ದಂಡ ಹಾಗೂ 48 ಬೈಕ್ ಸೀಜ್ ಮಾಡಿದ್ದಾರೆ.
ಮೇ 1ರಿಂದ 9ರವರೆಗೆ ಬೆಳಗಾವಿಯಲ್ಲಿ 1,767 ಬೈಕ್ ಸೀಜ್ ಮಾಡಲಾಗಿದೆ. ಮಾಸ್ಕ್ ಧರಿಸದ 12,058 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 16,42,400 ರೂ. ದಂಡ ಹಾಕಲಾಗಿದ್ದು, ಸಾಮಾಜಿಕ ಅಂತರ ಉಲ್ಲಂಘನೆಯಡಿ 849 ಪ್ರಕರಣ ದಾಖಲಾಗಿವೆ.