ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳ ರೈತರು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆ ಆಡಳಿತ ಸೌಧದ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ತಾಲೂಕಿನ ಹಲಗಾ ಗ್ರಾಮದ ಬಳಿ ಸುವರ್ಣ ಸೌಧವಿದೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮುತ್ತಿಗೆ ಹಾಕಲಿರುವ ಕಾರಣ ನೂರಾರು ಪೊಲೀಸ್ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ಈಗಾಗಲೇ ಮಹಾನಗರ ಪೊಲೀಸ್ ಆಯುಕ್ತರು ಸುವರ್ಣಸೌಧದ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಓದಿ: ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ: ಹೆಂಡತಿ ಮಕ್ಕಳೊಂದಿಗೆ ಸಾರಿಗೆ ಸಿಬ್ಬಂದಿ ಕಾಲ್ನಡಿಗೆ ಜಾಥಾ
ಇಬ್ಬರು ಎಸಿಪಿ, ಐವರು ಸಿಪಿಐ, ಎಂಟು ಪಿಎಸ್ಐ, 16 ಎಎಸ್ಐ ಸೇರಿ ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆ ಇಲ್ಲಿ ಕಾಣುತ್ತಿದೆ. ಸ್ಥಳದಲ್ಲಿ ಮೂರು ಸಿಎಆರ್ ತುಕಡಿಯೂ ಇದೆ.