ಚಿಕ್ಕೋಡಿ: ರಾಜ್ಯ ಪೊಲೀಸರ ಕಣ್ಣು ತಪ್ಪಿಸಿ ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲರನ್ನು ವಶಕ್ಕೆ ಪಡೆದಿದ್ದ ನಗರ ಪೊಲೀಸರು, ಮಹಾರಾಷ್ಟ್ರದ ಗಡಿವರೆಗೆ ಬಿಟ್ಟು ಬಂದಿದ್ದಾರೆ.
ಎಂಇಎಸ್, ಬೆಳಗಾವಿಯಲ್ಲಿ ಹುತಾತ್ಮ ದಿನ ಕಾರ್ಯಕ್ರಮ ಆಯೋಜಿಸಿತ್ತು. ಈ ಹಿನ್ನೆಲೆ ರಾಜ್ಯ ಪೊಲೀಸರ ಸೂಚನೆ ಉಲ್ಲಂಘಿಸಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ನಗರಕ್ಕೆ ಆಗಮಿಸಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಈಗ ಮಹಾರಾಷ್ಟ್ರದ ಗಡಿವರೆಗೆ ಬಿಟ್ಟು ಬಂದಿದ್ದಾರೆ.
ನಿಪ್ಪಾಣಿ ತಾಲೂಕಿನ ಕುಗನೋಳ್ಳಿ ಚೆಕ್ ಪೋಸ್ಟ್ವರೆಗೆ ಶಾಸಕರನ್ನು ಕರೆದೋಯ್ದು ಬಿಟ್ಟುಬರಲಾಗಿದೆ.