ಬೆಳಗಾವಿ: ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ತನ್ನ ಗಂಡನ ಜೊತೆಗೆ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಹಿಳೆ ಪತಿಯೊಂದಿಗೆ ಪತ್ತೆಯಾಗಿದ್ದು, ಸಿಕ್ಕಿಬಿದ್ದ ಇಬ್ಬರನ್ನು ಪೊಲೀಸರು ಬೆಲ್ಲದ ಬಾಗೇವಾಡಿಯ ಕ್ವಾರಂಟೈನ್ ಕೇಂದ್ರಕ್ಕೆ ಕರೆತಂದು ಕ್ವಾರಂಟೈನ್ ಮಾಡಿದ್ದಾರೆ.
ಗೋಕಾಕ್: ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಪತಿ ಜತೆಗೆ ಕ್ವಾರಂಟೈನಲ್ಲಿದ್ದ ಪತ್ನಿ ಪರಾರಿ!
ಗೋಕಾಕ್ ತಾಲೂಕಿನ ಪಂಜಾನಟ್ಟಿ ಗ್ರಾಮದ ಮಹಿಳೆ ಮಹಾರಾಷ್ಟ್ರದಿಂದ ಮರಳಿದ್ದರು. ಈ ಕಾರಣಕ್ಕೆ ಮಹಿಳೆಯನ್ನು ಗೋಕಾಕ್ ನಗರದ ಆಶ್ರಯ ಕಾಲನಿಯ ಹಾಸ್ಟೇಲಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ತನ್ನ ಗಂಡನ ಜೊತೆಗೆ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದಳು. ಕ್ವಾರಂಟೈನ್ ಕೇಂದ್ರದಿಂದ ಮಹಿಳೆ ಪರಾರಿ ಪ್ರಕರಣ ಆತಂಕ ಸೃಷ್ಟಿಸಿತ್ತು.