ಬೆಳಗಾವಿ: ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ನಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದ್ದರಿಂದ ಇದೀಗ ಕೇಂದ್ರ ಸರ್ಕಾರ ಲಸಿಕೆ ಬಳಸಲು ತುರ್ತಾಗಿ ಅನುಮತಿ ನೀಡಿರುವುದು ಸಂತಸ ತಂದಿದೆ ಎಂದು ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಸುತ್ತಿರುವ ಜೀವನ್‌ರೇಖಾ ಆಸ್ಪತ್ರೆಯ ವೈದ್ಯ ಅಮಿತ್ ಭಾತೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಐಸಿಎಂಆರ್ ಆಶ್ರಯದಲ್ಲಿ ಭಾರತ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆ ಹಾಗೂ ಪುಣೆಯ ಕೋವಿಡ್ಶೀಲ್ಡ್ಗೆ ಡ್ರಗ್ ಕಂಟ್ರೋಲ್‌ರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿರುವುದು ಸಂತೋಷ ತಂದಿದೆ ಎಂದರು.
ಭಾರತ ಬಯೋಟೆಕ್ ಸಂಸ್ಥೆ ಐಸಿಎಂಆರ್ ಸಹಯೋಗದಲ್ಲಿ ಕೋವ್ಯಾಕ್ಸಿನ್ ಟ್ರಯಲ್ ಈಗಾಗಲೇ ಮೂರು ಹಂತವನ್ನು ಮುಗಿಸಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ 54 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅವರೆಲ್ಲರಲ್ಲೂ ರೋಗನಿರೋಧಕ ಶಕ್ತಿ ವೃದ್ಧಿಸಿದೆ. ಇನ್ನು ಮೂರನೇ ಹಂತದಲ್ಲಿ 2 ಸಾವಿರ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗ ಕೂಡ ಉತ್ತಮ ಫಲಿತಾಂಶ ಕಂಡು ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ತುರ್ತಾಗಿ ಕೋವ್ಯಾಕ್ಸಿನ್ ಲಸಿಕೆ ಹಾಗೂ ಪುಣೆಯ ಕೋವಿಶೀಲ್ಡ್ಗೆ ಅನುಮತಿ ನೀಡಿದೆ.
ಮೊದಲ ಹಂತದಲ್ಲಿ ಈಗ ಆರೋಗ್ಯ ಇಲಾಖೆ ಸಿಬ್ಬಂದಿಗೆ, ಡಾಕ್ಟರ್ಸ, ಪೊಲೀಸರಿಗೆ, ಸರ್ಕಾರಿ ನೌಕರರಿಗೆ, ರಾಜಕಾರಣಿಗಳಿಗೆ ಕೊರೊನಾ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟಿರುವ ಬಿಪಿ, ಶುಗರ್ ಇರುವ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಮೂರನೇ ಹಂತದಲ್ಲಿ 50 ವರ್ಷ ಕೆಳಗಿರುವ ಜನರಿಗೆ ನೀಡಲಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಆತ್ಮನಿರ್ಭರ ಯೋಜನೆಯಡಿ ಐಸಿಎಂಆರ್ ಆಶ್ರಯದಲ್ಲಿ ಬಯೋಟೆಕ್ ಸಂಸ್ಥೆ ತಯಾರಿಸಲಾಗಿದ್ದ ಕೋವ್ಯಾಕ್ಸಿನ್ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ 26 ಸಾವಿರಕ್ಕೂ ಹೆಚ್ಚಿನ ಜನರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ. ಈವರೆಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗಿಲ್ಲ. ಯಾರೂ ಕೂಡ ಕೋವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಸಮಸ್ಯೆ ಆಗಿರುವ ಕುರಿತು ಹೇಳಿಕೊಂಡಿಲ್ಲ ಎಂದರು.
ನಮ್ಮ ಜೀವನರೇಖಾ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಟ್ರಯಲ್ ಕೊಡಲಾಗುತ್ತಿದ್ದು, ತುರ್ತು ಅನುಮತಿ ಇರುವ ಹಿನ್ನೆಲೆ ಇನ್ನೂ 2 ಸಾವಿರ ಜನರಿಗೆ ಕೋವ್ಯಾಕ್ಸಿನ್ ನೀಡುವ ತಯಾರಿ ಮಾಡಿಕೊಳ್ಳಲಾಗಿದೆ. ನಮ್ಮ ಆಸ್ಪತ್ರೆಗೂ ಅನುಮತಿ ಸಿಕ್ರೆ ಕೋವ್ಯಾಕ್ಸಿನ್ ನೀಡಲಾಗುವುದು. ಸದ್ಯಕ್ಕೆ ಟ್ರಯಲ್ ಮುಂದಯವರೆಯುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕೋವ್ಯಾಕ್ಸಿನ್ ಟ್ರಯಲ್ ಇನ್ನು ಆರು ತಿಂಗಳು ನಡೆಯಲಿದೆ. ಮೂರನೇ ಹಂತದಲ್ಲಿ 28 ದಿನಗಳಾದ್ಮೇಲೆ 2 ಸಾವಿರ ಜನರಿಗೆ ಕೊಡಲಾಗುವುದು. ಇದೀಗ ಕೇಂದ್ರ ಸರ್ಕಾರ ಎಮರ್ಜೆನ್ಸಿ ಅನುಮತಿ ಮೇರೆಗೆ ಫ್ರಂಟ್ ಲೈನ್ ವರ್ಕರ್ಸ್ಗೆ ಕೊಡಲಾಗುತ್ತಿದೆ ಎಂದರು.