ETV Bharat / state

ಮದ್ಯದಂಗಡಿ ಓಪನ್....ವೈನ್ ಶಾಪ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮದ್ಯಪ್ರಿಯರು

author img

By

Published : May 4, 2020, 10:06 AM IST

ಇಂದಿನಿಂದ ಎಣ್ಣೆ ಅಂಗಡಿಗಳು ಓಪನ್​ ಆದ ಹಿನ್ನೆಲೆ ಮದ್ಯಪ್ರಿಯರು ಬಾರ್​ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

people  bursting crackers near wine stores
ಪಟಾಕಿ ಸಿಡಿಸಿ ಸಂಭ್ರಮ

ಬೆಳಗಾವಿ: 40 ದಿನಗಳ ಬಳಿಕ ಇಂದಿನಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಆಗುತ್ತಿವೆ. ಇದರಿಂದ ಸಂಭ್ರಮದಲ್ಲಿರುವ ಮದ್ಯಪ್ರಿಯರು ವೈನ್ ಶಾಪ್ ಮುಂದೆ ಪಟಾಕಿ ಸಿಡಿಸಿದ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ.

ಪಟಾಕಿ ಸಿಡಿಸಿ ಸಂಭ್ರಮ

ಘಟಪ್ರಭಾದ ವಿಷ್ಣು ವೈನ್ ಶಾಪ್ ಎದುರು ಮದ್ಯಪ್ರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೈನ್ ಶಾಪ್ ಮಾಲೀಕರು ಬರುವ ಮುಂಚೆಯೇ ಮದ್ಯದಂಗಡಿ ಮುಂದೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ರು. ಮಾಲೀಕರು ಬರುತ್ತಿದ್ದಂತೆ ಮದ್ಯಪ್ರಿಯರು ಪಟಾಕಿ ಸಿಡಿಸಿದರು. ಮದ್ಯ ಖರೀದಿಗೆ ನೂರಾರು ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಚೀಲ ಇಟ್ಟು ನಂಬರ್ ಹಚ್ಚಿದ ಮದ್ಯಪ್ರಿಯರು:
ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ವೈನ್‌ಶಾಪ್‌ ಎದುರು ಚೀಲಗಳದ್ದೇ ದರ್ಬಾರ್ ಆಗಿದೆ. ಬೆಳಗಾವಿ ನಗರದ ಆರ್‌ಪಿಡಿ ವೃತ್ತದ ಲಿಕ್ಕರ್ ಟೌನ್ ಮಳಿಗೆ ಎದುರು ಸೋಷಿಯಲ್ ಡಿಸ್ಟನ್ಸ್ ಮಾರ್ಕಿಂಗ್‌ನಲ್ಲಿ ಬ್ಯಾಗ್​​ಳನ್ನಿಟ್ಟು ಮದ್ಯಪ್ರಿಯರು ದೂರ ನಿಂತಿದ್ದಾರೆ.

ವೈನ್ ಶಾಪ್ ಗಳ ಮುಂದೆ ಔಷಧ ಸಿಂಪಡಣೆ:
40 ದಿನಗಳ ಬಳಿಕ ಮದ್ಯದಂಗಡಿ ಇಂದಿನಿಂದ ಆರಂಭವಾದ ಹಿನ್ನೆಲೆ ಮದ್ಯಪ್ರಿಯರು ಬಾರ್ ಮುಂದೆ ಜಮಾಯಿಸುತ್ತಿದ್ದಾರೆ. ಬಾರ್ ಮುಂಭಾಗದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದ್ದಾರೆ. ಬೆಳಗಾವಿಯ ನೆಹರು ನಗರದಲ್ಲಿರುವ ವೈನ್ ಶಾಪ್ ಮುಂಭಾಗದ ನೆಲ ಮತ್ತು ಬ್ಯಾರಿಕೇಡ್​​ಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು.

ಬೆಳಗಾವಿ ಜಿಲ್ಲೆಯಲ್ಲಿ 270 ವೈನ್ ಶಾಪ್, 66 MSIL ಗಳಿವೆ. ಬೆಳಗ್ಗೆಯಿಂದ ಇಬ್ಬರು ಸಬ್ ಇನ್ಸ್ಪೆಕ್ಟರ್ ನಿರಂತರವಾಗಿ ಓಡಾಟ ನಡೆಸಿ ಬಾರ್ ಗಳಲ್ಲಿನ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ. ಒಬ್ಬರಿಗೆ 2.3 ಲೀಟರ್ ಮಾತ್ರ ಅವಕಾಶವಿದ್ದು, ಅದನ್ನು ಮೀರಿ ಮಾರಾಟ ಮಾಡಿದ್ರೆ ಅಂತಹ ಅಂಗಡಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.