ಚಿಕ್ಕೋಡಿ : ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಕಾರ್ಯನಿರತ ಪೊಲೀಸ್, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ ಮತ್ತು ಪತ್ರಕರ್ತರ ಸುರಕ್ಷತೆ ಒದಗಿಸಲು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ದೇಣಿಗೆ ಸಂಗ್ರಹದ ವಿರುದ್ದ ಸಾರ್ವಜನಿಕರು ಸಮರ ಸಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಜನರ ಧ್ವನಿ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಶಾಸಕರ ಕುದುರೆ ವ್ಯಾಪಾರಕ್ಕೆ ಹಣ ಬರುತ್ತೆ. ಆದರೆ ಸಾರ್ವಜನಿಕರ ರಕ್ಷಣೆಗೆ ಹಣ ಇಲ್ಲ. ತೆರಿಗೆ ಸಂಗ್ರಹ ಮಾಡಿದ ಹಣ ಎಲ್ಲಿ ಹೋಯಿತು ಎಂದು ವಾಟ್ಸ್ಆ್ಯಪ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.