ETV Bharat / state

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು-ಪೊಲೀಸರ ಮಧ್ಯೆ ವಾಗ್ವಾದ.. - parking issue

ಸ್ಥಳಕ್ಕೆ ಆಗಮಿಸಿದ ಎಸಿಪಿ ನಾರಾಯಣ ಭರಮಣಿ, ಟ್ರಾಫಿಕ್ ಸಿಪಿಐ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ ನಂತರ ಪೊಲೀಸ್ ಕಾನ್ಸ್​​ಸ್ಟೇಬಲ್‌ನ ಸ್ಥಳಕ್ಕೆ ಕರೆಯಿಸಿ ಕ್ಷಮೆ ಕೇಳಿಸಿದರು..

parking issue; dispute between police and advocates at Belgavi
ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು - ಪೊಲೀಸರ ಮಧ್ಯೆ ವಾಗ್ವಾದ..
author img

By

Published : Jul 10, 2020, 7:25 PM IST

ಬೆಳಗಾವಿ : ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಜಿಲ್ಲಾ ನ್ಯಾಯಾಲಯದಲ್ಲಿನ ರಸ್ತೆ ಪಕ್ಕದಲ್ಲಿ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು-ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

ನಗರದ ಜಿಲ್ಲಾ ನ್ಯಾಯಾಲಯದ ಎದುರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರೊಬ್ಬರು ರಸ್ತೆ ಪಕ್ಕದಲ್ಲಿ ಕಾರ್​​ ಪಾರ್ಕಿಂಗ್ ಮಾಡಲು ಮುಂದಾದ ವೇಳೆ ಪಾರ್ಕಿಂಗ್ ಮಾಡದಂತೆ ಪೊಲೀಸ್ ಕಾನ್ಸ್​​ಸ್ಟೇಬಲ್​​​​ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ವಕೀಲರು ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಇದೇ ಸ್ಥಳದಲ್ಲಿ ಕಾರು ನಿಲ್ಲಿಸುವುದಾಗಿ ತಿಳಿಸಿದ್ದಾರೆ.

ವಕೀಲರು - ಪೊಲೀಸರ ಮಧ್ಯೆ ವಾಗ್ವಾದ..

ಅವಾಚ್ಯ ಶಬ್ಧಗಳಿಂದ ವಕೀಲರಿಗೆ ನಿಂದನೆ : ಆಗ ಪೊಲೀಸ್ ಪೇದೆ ಹಾಗೂ ವಕೀಲರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ವಕೀಲರಿಗೆ ಅವಾಚ್ಯ ಶಬ್ಧಗಳಿಂದ ಪೊಲೀಸ್ ಕಾನ್ಸ್​​ಸ್ಟೇಬಲ್‌ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಸ್ಥಳಕ್ಕೆ ಸಿಬ್ಬಂದಿಯನ್ನು ಕರೆಯಿಸುವಂತೆ ಒತ್ತಾಯಿಸಿ ಎಲ್ಲ ವಕೀಲರು ರಸ್ತೆ ತಡೆದು ಪ್ರತಿಭಟಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚೆನ್ನಮ್ಮ ವೃತ್ತದಿಂದ ಜಿಲ್ಲಾ ನ್ಯಾಯಾಲಯದವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಪಿ ನಾರಾಯಣ ಭರಮಣಿ, ಟ್ರಾಫಿಕ್ ಸಿಪಿಐ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ ನಂತರ ಪೊಲೀಸ್ ಕಾನ್ಸ್​​ಸ್ಟೇಬಲ್‌ನ ಸ್ಥಳಕ್ಕೆ ಕರೆಯಿಸಿ ಕ್ಷಮೆ ಕೇಳಿಸಿದರು. ಈ ವೇಳೆ ಮತ್ತೊಬ್ಬ ವಕೀಲ, ಕಾನ್ಸ್​​ಸ್ಟೇಬಲ್‌ಗೆ ಕೈಜೋಡಿಸಿ ಸಾರಿ ಕೇಳು ಎಂದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪರಿಸ್ಥಿತಿ ತಿಳಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.