ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕೀಡಾಗಿದ್ದರಿಂದ ನಿಗದಿತ ಆಸ್ಪತ್ರೆಗೆ ತೆರಳದೆ ಸ್ಥಳದಲ್ಲೇ ನಿಂತಿದ್ದ ಆಕ್ಸಿಜನ್ ತುಂಬಿದ್ದ ಟ್ಯಾಂಕರ್‌ನಿಂದ ಬೇರೊಂದು ಟ್ಯಾಂಕರ್‌ಗೆ ಆಕ್ಸಿಜನ್ ಫಿಲ್ ಮಾಡಲಾಗಿದೆ.
ಬೆಳಗಾವಿ ಮುತ್ನಾಳ ಗ್ರಾಮದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿನ್ನೆ ರಾತ್ರಿ ಆಕ್ಸಿಜನ್ ಟ್ಯಾಂಕರ್ ಅಪಘಾತವಾಗಿತ್ತು. ಇದೀಗ 17 ಗಂಟೆಗಳ ಬಳಿಕ ಮಹಾರಾಷ್ಟ್ರದಿಂದ ಬಂದಿದ್ದ ಪರ್ಯಾಯ ಟ್ಯಾಂಕರ್ ಮೂಲಕ ಲಿಕ್ವಿಡ್ ಆಕ್ಸಿಜನ್ ಶಿಫ್ಟ್ ಮಾಡಲಾಗಿದೆ.
ಸದ್ಯ 16 KL ಸಾಮರ್ಥ್ಯದ ಟ್ಯಾಂಕರ್‌ನಿಂದ 5KL ಟ್ಯಾಂಕರ್‌ಗೆ ಆಕ್ಸಿಜನ್ ಸರಬರಾಜು ಮಾಡಲಾಗಿದ್ದು, 5KL ಟ್ಯಾಂಕರ್ ಆಗಿರುವುದರಿಂದ ಮೂರು ಟ್ರಿಪ್ನಲ್ಲಿ ಆಕ್ಸಿಜನ್ ಅನ್ನು ಕಾಕತಿಯ 'ಬೆಳಗಾವಿ ಆಕ್ಸಿಜನ್' ಘಟಕಕ್ಕೆ ರವಾನಿಲಾಗಿದೆ.
ಇದನ್ನೂ ಓದಿ: ಎಸ್ಕಾರ್ಟ್‌ನಲ್ಲಿ ಖಾಲಿ ಆಕ್ಸಿಜನ್ ಟ್ಯಾಂಕರ್ ತರಲು ಎಸ್‌ಪಿಗೆ ಕಾರಜೋಳ ಸೂಚನೆ