ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ಕುಳಿತಿರುವ ಹಡಗು ಈಗ ಮುಳುಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗ್ರಾಮೀಣ ಮತಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದೇನೆ. ನಮ್ಮ ನಿರೀಕ್ಷೆಗೂ ಮೀರಿ ಜನ ರೆಸ್ಪಾನ್ಸ್ ಮಾಡುತ್ತಿದ್ದಾರೆ. ನೂರಕ್ಕೆ ನೂರು ನಾವು ಇಲ್ಲಿ ಗೆಲ್ಲುತ್ತೇವೆ. ಇತಿಹಾಸ ಬರೆಯುತ್ತೇವೆ ಎಂದರು.
ಸತೀಶ್ ಜಾರಕಿಹೊಳಿಯನ್ನ ಹರಕೆಯ ಕುರಿ ಮಾಡಿದ್ದಾರೆ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ, ಬಿಜೆಪಿಯವರು ಮಂಗಳಾ ಅವರಿಗೆ ಏನು ಮಾಡಿದರು ಎಂದು ಮರು ಪ್ರಶ್ನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿ.ಟಿ ರವಿಗೆಲ್ಲ ನಾವು ಉತ್ತರ ಕೊಡಬೇಕೇ? ಮೊದಲೆಲ್ಲ ಯಾರ ಹೆಸರು ಓಡಾಡುತ್ತಿತ್ತು. ರವಿ ಯಾವಾಗಲೂ ಸುಳ್ಳೇ ಹೇಳೋದು ಎಂದು ತಿವಿದರು.
ಇದೇ ವೇಳೆ, ಕಾಂಗ್ರೆಸ್ ಮುಳುಗುವ ಹಡಗು ಎಂಬ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರೇ ಸದ್ಯ ಮುಳುಗುತ್ತಿದ್ದಾರೆ. ಅವರು ಕುಳಿತಿರುವ ಹಡಗೇ ಈಗ ಮುಳುಗುತ್ತಿದ್ದೆ ಅದನ್ನ ಬಿಜೆಪಿಯ ಹಿರಿಯ ನಾಯಕ ಯತ್ನಾಳ ಹೇಳ್ತಾರೆ ಗೊತ್ತಾ ನಿಮಗೆ ಎಂದರು.