ETV Bharat / state

ಸಮನ್ವಯತೆ ಕೊರತೆಯಿಂದ ನಿನ್ನೆ ಸದನದಲ್ಲಿ ಗೊಂದಲ ಆಗಿದೆ: ಆರ್.ಅಶೋಕ್ ಸ್ಪಷ್ಟನೆ - ಬಿಜೆಪಿ ನಾಯಕರ ಅಸಮಧಾನ

Opposition leader R Ashok clarification: ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಕೊರತೆ ಬಗ್ಗೆ ವಿಪಕ್ಷ ನಾಯಕ‌ ಆರ್.ಅಶೋಕ ಹೇಳಿದ್ದೇನು..?

Opposition leader R Ashok
ವಿಪಕ್ಷ ನಾಯಕ ಆರ್​ ಅಶೋಕ್​
author img

By ETV Bharat Karnataka Team

Published : Dec 8, 2023, 1:31 PM IST

Updated : Dec 8, 2023, 2:01 PM IST

ವಿಪಕ್ಷ ನಾಯಕ ಆರ್​ ಅಶೋಕ್​

ಬೆಳಗಾವಿ: ಸಮನ್ವಯತೆ ಕೊರತೆಯಿಂದ ನಿನ್ನೆ ಸದನದಲ್ಲಿ ಗೊಂದಲ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ನಡೆದ ಘಟನೆ ಬಗ್ಗೆ ಮಾಧ್ಯಮದಲ್ಲಿ ಗೊಂದಲ ಎಂದು ಸುದ್ದಿಯಾಗಿದೆ. ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರದಿಂದ ಉತ್ತರ ಕರ್ನಾಟಕ ವಿಚಾರ ಚರ್ಚೆಗೆ ಬರಬೇಕಿತ್ತು. ಆದರೆ ಧರಣಿಯಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ.‌ ಮತ್ತೆ ನೀವು ಧರಣಿ ಮಾಡಿದರೆ ಅವಕಾಶ ಸಿಗಲ್ಲ. ಸಭಾತ್ಯಾಗ ಮಾಡಬೇಕು ಎಂದು ಅವರೇ ನನ್ನ ಬಳಿ ಬಂದು ಚರ್ಚೆ ಮಾಡಿದ್ದರು ಎಂದು ಸ್ಪಷ್ಟಪಡಿಸಿದರು.

ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು, ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಆಗ್ತಿಲ್ಲ. ನೀವು ಸದನದ ಬಾವಿಗೆ ಇಳಿದರೂ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು ಎಂದಿದ್ದರು. ಉತ್ತರ ಕರ್ನಾಟಕ ಬಗ್ಗೆ ನಾನು ಮಾತಾಡಬೇಕು. ಹೀಗಾಗಿ ಧರಣಿ ಬೇಡಾ ಅಂತಾ ಯತ್ನಾಳ ಹೇಳಿದ್ದರು. ಆಗ ನಾನು ಅದಕ್ಕೆ ಮುಂದಿರೋರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದೆ ಇದ್ದವರು ಮತ್ತು ಮುಂದೆ ಇದ್ದವರ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಸಣ್ಣ ಗೊಂದಲ ಆಗಿದೆ ಅಷ್ಟೇ: ಬೆಳಗಾವಿ ಪೊಲೀಸರ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದ್ದೇವೆ.‌ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಮಾತಕತೆ ನಡೆಸಿದ್ದೆವು. ನಾವು, ಬಸನಗೌಡ ಪಾಟೀಲ್​ ಯತ್ನಾಳ್, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಅಶ್ವತ್ ನಾರಾಯಣ್ ಅವರು ಸೇರಿ ಎಲ್ಲರೂ ಈ ಬಗ್ಗೆ ತೀರ್ಮಾನ ಮಾಡಿದ್ದೆವು. ಆದರೆ ನಮ್ಮ ತೀರ್ಮಾನ ಹಿಂದಿನ ಸಾಲಿನಲ್ಲಿ ಇದ್ದವರಿಗೆ ತಲುಪಿಸಿಲ್ಲ. ಸಮನ್ವಯತೆ ಕೊರತೆ ಇರೋದ್ರಿಂದ ಆ ರೀತಿ ಆಗಿದೆ ಎಂದು ತಿಳಿಸಿದರು.

ಈ ವಿಚಾರವಾಗಿ ಯಾರು ಏನೇ ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ.‌ ಅವರನ್ನು ಕರೆಯಿಸಿ ನಾನು ಮಾತನಾಡುತ್ತೇನೆ. ಪ್ರತಿ ದಿನ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ಬರಗಾಲದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸೋಮವಾರ ಮತ್ತು ಮಂಗಳವಾರ ಭ್ರೂಣ ಹತ್ಯೆ, ಡಿಕೆಶಿ ಪ್ರಕರಣ ಸಿಬಿಐ ತನಿಖೆಯಿಂದ ಹಿಂಪಡೆದಿರುವ ವಿಚಾರ, ಜಮೀರ್ ಅಹ್ಮದ್ ಸ್ಪೀಕರ್ ಹೇಳಿಕೆ, ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಬಿಜೆಪಿ ಮುಖಂಡನ ಮೇಲೆ ಹಲ್ಲೆ ವಿಚಾರ- ಹೋರಾಟ ಮುಂದುವರೆಯುತ್ತೆ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರ ದೂರನ್ನು ತಿರುಚುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ನಾನು ಕೊಟ್ಟ ದೂರನ್ನು ತಮಗೆಷ್ಟು ಬೇಕು ಅಷ್ಟು ಮಾತ್ರ ತೆಗೆದುಕೊಂಡಿದ್ದು, ನನಗೆ ರಕ್ಷಣೆಯಿಲ್ಲ ಎಂದು ಪೃಥ್ವಿ ಸಿಂಗ್ ಹೇಳಿದ್ದಾರೆ. ಮೊನ್ನೆ ಸದನದಲ್ಲಿ ಎಷ್ಟು ಬೇಕಿದೆ ಅಷ್ಟನ್ನೇ ಗೃಹ ಸಚಿವರು ಓದಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು‌ ಹೋರಾಟ ಮಾಡುತ್ತೇವೆ ಎಂದರು.

ವಿಪಕ್ಷ ನಾಯಕನ ಆಯ್ಕೆಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ಇನ್ನೊಬ್ಬರು ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಈ ರೀತಿಯ ಮಾತುಗಳು ಬರುತ್ತವೆ. ಆ ರೀತಿ ಕಾಂಗ್ರೆಸ್​ನಲ್ಲೂ ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ ಪರ ಮತ್ತು ವಿರೋಧವೂ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಸಾಮಾನ್ಯ ಎಂದು ಆರ್.ಅಶೋಕ್​ ಸಮಜಾಯಿಷಿ‌ ನೀಡಿದರು.

ಇದನ್ನೂ ಓದಿ: ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಿದ್ರೆ 7 ಜನ್ಮದ ಪಾಪ ಅಂಟುತ್ತೆ: ಗೂಳಿಹಟ್ಟಿ ಶೇಖರ್​​ಗೆ ಸಿಟಿ ರವಿ ಟಾಂಗ್​

Last Updated : Dec 8, 2023, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.