ETV Bharat / state

Facebookನಲ್ಲಿ ಬೆತ್ತಲಾಗಿ ಹಣ ಕೀಳ್ತಾರೆ ಚೆಂದುಳ್ಳಿ ಚೆಲುವೆಯರು; ಬೆಳಗಾವಿಯಲ್ಲಿ Online​ ಹನಿಟ್ರ್ಯಾಪ್ ಗ್ಯಾಂಗ್! - ಆನ್​ಲೈನ್​ ಹನಿಟ್ರ್ಯಾಪ್

ಬೆಳಗಾವಿಯಲ್ಲಿ ಆನ್​ಲೈನ್​ ಹನಿಟ್ರ್ಯಾಪ್ ಪ್ರಕರಣಗಳು ಬೆಳಕಿಗೆ ಬಂದಿವೆ. ಫೇಸ್​ಬುಕ್​ನಲ್ಲಿ ಪರಿಚಯವಾಗುವ ಸುಂದರಿಯರು ನಂತರ ವಾಟ್ಸ್​​ಆ್ಯಪ್​ ನಂಬರ್​ ಪಡೆದು ವಿಡಿಯೋ ಕಾಲ್ ಮಾಡಿ ನಗ್ನವಾಗಿ ಕಾಣಿಸಿಕೊಂಡು, ಆ ಬಳಿಕ ಹಣ ಕೀಳುತ್ತಿದ್ದಾರೆ.

Online Honeytrap Gang
ಆನ್​ಲೈನ್​ ಹನಿಟ್ರ್ಯಾಪ್ ಗ್ಯಾಂಗ್
author img

By

Published : Aug 2, 2021, 3:14 PM IST

ಬೆಳಗಾವಿ:ಗಣ್ಯ ವ್ಯಕ್ತಿಗಳು ಹಾಗೂ ಅಮಾಯಕ ಯುವಕರನ್ನೇ ಟಾರ್ಗೆಟ್ ಮಾಡಿ ಫೇಸ್​​​ಬುಕ್​ನಲ್ಲಿ ಬೆತ್ತಲಾಗುವ ಚೆಂದುಳ್ಳಿ ಚೆಲುವೆಯರು ಬಳಿಕ ಬ್ಲ್ಯಾಕ್ ಮಾಡಿ ಹಣ ಕೀಳ್ತಿರುವ ಆನ್​ಲೈನ್​ ಹನಿಟ್ರ್ಯಾಪ್ ಗ್ಯಾಂಗ್ ಬೆಳಗಾವಿಯಲ್ಲಿ ಸಕ್ರಿಯವಾಗಿದೆ.

ಈಗಾಗಲೇ ನಾಲ್ಕೈದು ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿವೆ. ಯಾಮಾರಿ ಸಾವಿರಾರು ರೂಪಾಯಿ ಕಳೆದುಕೊಂಡಿರುವವರ ಬಳಿ ಮತ್ತೆ ಹಣ ನೀಡುವಂತೆ ಈ ಗ್ಯಾಂಗ್​ ಸತಾಯಿಸುತ್ತಿದೆ. ಇದರಿಂದ ರೋಸಿ ಹೋಗಿರುವ ಸಂತ್ರಸ್ತರು ಬೆಳಗಾವಿಯ ಸಿಇಎನ್ ಠಾಣೆ ಮೆಟ್ಟಿಲೇರಿದ್ದಾರೆ.

ಡಿಸಿಪಿ ಡಾ. ವಿಕ್ರಂ ಆಮಟೆ

ಗಣ್ಯ ವ್ಯಕ್ತಿಗಳು, ಯುವಕರೇ ಟಾರ್ಗೆಟ್!

ಫೇಸ್ಬುಕ್​ನಲ್ಲಿ ಚೆಂದದ ಫೋಟೋಗಳನ್ನು ಹರಿಬಿಡುವ ಮೂಲಕ ಗಣ್ಯ ವ್ಯಕ್ತಿಗಳು ಹಾಗೂ ಯುವಕರನ್ನೇ ಈ ಚೆಲುವೆಯರ ಗ್ಯಾಂಗ್ ಟಾರ್ಗೆಟ್ ಮಾಡ್ತಿದೆ. ಫ್ರೆಂಡ್ ರಿಕ್ವೆಸ್ಟ್ ಕಳಿಸುವ ಚೆಂದುಳ್ಳಿಯರು ಅಕ್ಸೆಪ್ಟ್​ ಆಗ್ತಿದ್ದಂತೆ ಮೆಸೇಂಜರ್​ನಲ್ಲಿ ಚಾಟ್ ಶುರು ಹಚ್ಚಿಕೊಳ್ಳುತ್ತಾರೆ. ಕೆಲ ದಿನಗಳ ಕಾಲ ಚಾಟ್ ಮಾಡಿ ವಿಶ್ವಾಸಗಳಿಸುವ ಯುವತಿಯರು, ಬಳಿಕ ವಾಟ್ಸ್​​ಆ್ಯಪ್​ ನಂಬರ್ ಶೇರ್ ಆಗುವಂತೆ ನೋಡಿಕೊಳ್ಳುತ್ತಾರೆ.

ಬಳಿಕ ವಿಡಿಯೋ ಕಾಲ್ ಮಾಡಿ ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಎದುರಿನವರನ್ನು ನಗ್ನವಾಗುವಂತೆ ಪ್ರಚೋದಿಸುತ್ತಾರೆ. ಆಗ ನಗ್ನವಾಗಿದ್ದುಕೊಂಡು ಸಂಭಾಷಣೆಯ ದೃಶ್ಯವನ್ನು ಸ್ಕ್ರೀನ್​ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ನಂತರ ತಮ್ಮ ಅಸಲಿ ಆಟ ಶುರು ಮಾಡುವ ಈ ನಾರಿಮಣಿಯರು ಮೊದಲು ಸಣ್ಣ ಪ್ರಮಾಣದ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡಲು ನಿರಾಕರಿಸಿದರೆ ನಗ್ನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಾರೆ.

ಆಗ ಸಾಕಷ್ಟು ಜನರು ಮರ್ಯಾದೆಗೆ ಅಂಜಿ ಹಣ ನೀಡುತ್ತಾರೆ. ಇಷ್ಟಕ್ಕೆ ಸುಮ್ಮನಿರದ ಈ ಆನ್​​ಲೈನ್​ ಹನಿಟ್ರ್ಯಾಪ್ ಗ್ಯಾಂಗ್​ನವರು ಪದೇ ಪದೆ ಹಣ ನೀಡುವಂತೆ ಕಾಟ ನೀಡುತ್ತಾರೆ.

ಪೊಲೀಸರ ಮನವಿ ಏನು?

ಫೇಸ್ಬುಕ್​ನಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್​ ಮಾಡಿಕೊಳ್ಳದಂತೆ ಮಹಾನಗರ ಡಿಸಿಪಿ ಡಾ. ವಿಕ್ರಂ ಆಮಟೆ ಮನವಿ ಮಾಡಿದ್ದಾರೆ. ರಿಕ್ವೆಸ್ಟ್ ಸ್ವೀಕರಿಸಿದ್ರೂ ಮೆಸೇಂಜರ್​ನಲ್ಲಿ ಚಾಟ್ ಮಾಡಬಾರದು. ಆಗ ಮಾತ್ರ ಆನ್​ಲೈನ್​ ಹನಿಟ್ರ್ಯಾಪ್ ಗ್ಯಾಂಗ್​ನಿಂದ ಬಚಾವ್ ಆಗಲು ಸಾಧ್ಯ. ಇಲ್ಲವಾದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಯಾರಿಗಾದರೂ ಈ ರೀತಿಯ ವಂಚನೆ ಆಗ್ತಿದ್ದರೆ ದಯವಿಟ್ಟು ಪೊಲೀಸರಿಗೆ ದೂರು ನೀಡಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.