ETV Bharat / state

ಬೆಳೆದ ಈರುಳ್ಳಿ ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟ; ಪರಿಹಾರದ ನಿರೀಕ್ಷೆಯಲ್ಲಿ ರೈತ - ದೇಶಾದ್ಯಂತ ಲಾಕ್ ಡೌನ್

ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಬೆಳಗಾವಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

onion farmers facing market problem in vijayapura
ಲಾಕ್​ಡೌನ್​​ ಎಫೆಕ್ಟ್​​:ಕಣ್ಣೀರು ತಂದ ಈರುಳ್ಳಿ ಬೆಳೆ
author img

By

Published : Apr 8, 2020, 4:28 PM IST

ಬೆಳಗಾವಿ: ಕೆಲ ತಿಂಗಳ ಹಿಂದಷ್ಟೇ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಈರುಳ್ಳಿ ಇಂದು‌ ಕಣ್ಣೀರು ತರಿಸಿದೆ. ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಮೂರು ತಿಂಗಳ ಹಿಂದೆ ಈರುಳ್ಳಿ ಬೆಳೆದ ಬೆಳೆಗಾರರು ಲಕ್ಷಾಂತರ ರೂಪಾಯಿ ದುಡ್ಡು ಸಂಪಾದಿಸಿದ್ದರು. ಆದ್ರೀಗ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಪರದಾಡುತ್ತಿದ್ದಾರೆ.

ಕಣ್ಣೀರು ತರಿಸಿದ ಈರುಳ್ಳಿ ಬೆಳೆ

ರಾಮದುರ್ಗ ತಾಲೂಕಿನ ಹಾಲೋಳ್ಳಿ ಗ್ರಾಮದ ರೈತ ಶಿವಪುತ್ರಪ್ಪ ಹಂಗಿ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಬೆಳೆಯೇನೋ ಚೆನ್ನಾಗಿಯೇ ಬಂದಿದೆ. ಆದ್ರೆ, ಮಾರುಕಟ್ಟೆಗೆ ಸಾಗಿಸಲಾಗದೆ ಅವರು ಪರದಾಡುತ್ತಿದ್ದಾರೆ. ಹಾಗಾಗಿ ಈರುಳ್ಳಿ ಹಾಳಾಗುತ್ತಿದೆ. ಈರುಳ್ಳಿಯನ್ನು ಮಾರಾಟ ಮಾಡೋಕಂತೂ ಆಗುತ್ತಿಲ್ಲ. ಕನಿಷ್ಠ ಪಕ್ಷ ಪರಿಹಾರವಾದರೂ ಕೊಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.