ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಹಾಸಿಗೆ ಒಗೆಯಲು ಹೋಗಿ ಕೃಷ್ಣಾ ನದಿ ಪಾಲಾಗಿರುವ ನಾಲ್ಕು ಜನ ಸಹೋದರರಲ್ಲಿ ಓರ್ವನ ಶವ ಪತ್ತೆಯಾಗಿದೆ. ಪರಶುರಾಮ ಗೋಪಾಲ ಬನಸೋಡೆ (24) ಎಂಬಾತನ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರು ಸಹೋದರರ ಮೃತದೇಹಗಳ ಹುಡುಕಾಟಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ.
ಒಂದು ದಿನದಿಂದ ಸಹೋದರರ ಹುಡುಕಾಟಕ್ಕೆ ತಾಲೂಕು ಆಡಳಿತ ಹಾಗೂ ಎನ್‌ಡಿಆರ್‌ಎಫ್ ಮತ್ತು ಪಕ್ಕದ ರಾಜ್ಯ ಮಹಾರಾಷ್ಟ್ರದ ಸ್ಕೂಬಾ ಡೈವಿಂಗ್ ತಂಡದಿಂದ ಶೋಧ ಕಾರ್ಯ ಮುಂದುವರೆಸಲಾಗಿದೆ.
ಪರಶುರಾಮ ಗೋಪಾಲ ಬನಸೋಡೆ ಶವ ನೋಡಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗೆ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಶವವನ್ನ ರವಾನಿಸಲಾಗಿದೆ. ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ದೂರವಾಣಿ ಮೂಲಕ ಪಡೆದುಕೊಳ್ಳುತ್ತಿದ್ದಾರೆ.
ಓದಿ: ಕೃಷ್ಣಾ ನದಿ ಪಾಲಾದ ನಾಲ್ವರು ಸಹೋದರರು: ಶೋಧ ಕಾರ್ಯಕ್ಕೆ ಸ್ಕೂಬಾ ಡೈವಿಂಗ್ ತಂಡ ಸಾಥ್