ETV Bharat / state

ಡಿಸಿಸಿ ಬ್ಯಾಂಕ್ ಅವ್ಯವಹಾರ ತನಿಖೆಗೆ ಅಧಿಕಾರಿಗಳು ತೆರಳುತ್ತಿಲ್ಲ: ಎಸ್ ಟಿ ಸೋಮಶೇಖರ್ - ಡಿಸಿಸಿ ಬ್ಯಾಂಕ್ ಅವ್ಯವಹಾರ

ಡಿಸಿಸಿ ಬ್ಯಾಂಕ್​​ನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್​ನಲ್ಲಿ ಚರ್ಚೆ ನಡೆದಿದೆ. ಈ ವೇಳೆ, ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಹಾಸನ ಎಂದರೆ ಅಧಿಕಾರಿಗಳು ಭಯಪಡುತ್ತಿದ್ದಾರೆ. ರಕ್ಷಣೆ ಕೊಡುತ್ತೇವೆ ಎಂದರೂ ಹೋಗುತ್ತಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.

Cooperation Minister ST Somashekhar
ಸಹಕಾರ ಸಚಿವ ಎಸ್ ಟಿ ಸೋಮಶೇಖರ್
author img

By

Published : Dec 27, 2022, 2:14 PM IST

ಸಹಕಾರ ಸಚಿವ ಎಸ್ ಟಿ ಸೋಮಶೇಖರ್

ಬೆಳಗಾವಿ: ಹಾಸನ ಡಿಸಿಸಿ ಬ್ಯಾಂಕ್​​ನಲ್ಲಿನ ಅವ್ಯವಹಾರ ಆರೋಪ ಕುರಿತ ತನಿಖೆ ನಡೆಸಲು ಅಧಿಕಾರಿಗಳು ಭಯಭೀತರಾಗಿದ್ದಾರೆ. ಹಾಗಾಗಿ ವಿಶೇಷವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮೋಹನ್ ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೀಡುತ್ತಿರುವ ಸಾಲಗಳ ಕುರಿತು ಹಾಗೂ ಡಿಸಿಸಿ ಬ್ಯಾಂಕ್ ಅವ್ಯವಹಾರ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಸದಸ್ಯತ್ವ ಕೊಡಲು ಕೆಲ ಡಿಸಿಸಿ ಬ್ಯಾಂಕ್​ನವರು ಅಡ್ಡಿಪಡಿಸುತ್ತಿದ್ದಾರೆ. ತಿಂಗಳ ಒಳಗೆ ಕೊಡದೇ ಇದ್ದಲ್ಲಿ ಡಿಸಿಸಿ ಬ್ಯಾಂಕ್ ಎಂಡಿಯನ್ನು ಅಮಾನತು ಮಾಡಲಾಗುತ್ತದೆ ಎಂದು ಹೇಳಿದರು.

ಹಾಸನಕ್ಕೆ ಹೋಗಲು ಅಧಿಕಾರಿಗಳಿಗೆ ಭಯ: ಡಿಸಿಸಿ ಬ್ಯಾಂಕ್​ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಹಾಸನ ಎಂದರೆ ಎಲ್ಲ ಅಧಿಕಾರಿಗಳು ಭಯಪಡುತ್ತಾರೆ. ಹಾಸನ ಡಿಸಿಸಿ ಬ್ಯಾಂಕ್ ವಿಚಾರಣೆಗೆ ಹೋಗಲು ಹೆದರುತ್ತಿದ್ದಾರೆ. ಯಾಕೆ ಎಂದು ನಾನು ಹೇಳುವುದಿಲ್ಲ. ಈ ವೇಳೆ ಸರ್ಕಾರವೇ ಹೆದರುತ್ತಿದೆಯೇ? ಎಂದು ಪ್ರತಿಪಕ್ಷ ಸದಸ್ಯರು ತಿವಿದರು.

ಓರ್ವ ಅಧಿಕಾರಿ ನೇಮಕ: ಇದಕ್ಕೆ ತಿರುಗೇಟು ನೀಡಿದ ಸಚಿವರು, ಸರ್ಕಾರ ಹೆದರುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಭಯಭೀತರಾಗುತ್ತಿದ್ದಾರೆ. ರಕ್ಷಣೆ ಕೊಡುತ್ತೇವೆ ಎಂದರೂ ಹೋಗಲು ಒಪ್ಪುತ್ತಿಲ್ಲ. ಹೀಗಾಗಿ ಒಬ್ಬ ಅಧಿಕಾರಿ ನೇಮಿಸುತ್ತಿದ್ದೇವೆ. ಮೂರು ತಿಂಗಳಿನಲ್ಲಿ ವರದಿ ಕೊಡುವಂತೆ ಸೂಚಿಸಿದ್ದೇವೆ. ಸಹಕಾರ ಇಲಾಖೆ ಈಗಾಗಲೇ ಈ ಸಂಬಂಧ ಆದೇಶವನ್ನ ಮಾಡಿದೆ ಎಂದರು. ಇದಕ್ಕೆ ಪ್ರಶ್ನೆ ಕೇಳಿದ್ದ ಮೋಹನ್ ಕೊಂಡಜ್ಜಿ ಇಲ್ಲಿ ಇಂತಹ ಸಮಸ್ಯೆ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಯಶಸ್ವಿನಿ ನೋಂದಣಿ ದಿನಾಂಕ ವಿಸ್ತರಣೆ ಇಲ್ಲ: ಯಶಸ್ವಿನಿ ಯೋಜನೆಯ ನೋಂದಣಿ ದಿನಾಂಕ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಡಿಸೆಂಬರ್ 31ಕ್ಕೆ 30 ಲಕ್ಷ ಸಹಕಾರಿಗಳ ನೋಂದಣಿ ಗುರಿ ತಲುಪದೇ ಇದ್ದಲ್ಲಿ, ಆಗ ಸಮಯ ವಿಸ್ತರಣೆ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಂಜೇಗೌಡ ಕೇಳಿದ ಯಶಸ್ವಿನಿ ಯೋಜನೆ ಜಾರಿಗೆ ತರುತ್ತಿರುವ ಬಗ್ಗೆ ಹಾಗೂ ಸಮಯ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಯಶಸ್ವಿನಿ ಯೋಜನೆ ತಂದಿದ್ದೇ ಸಹಕಾರಿಗಳಿಗಾಗಿ, ಸಹಕಾರಿಗಳು ಯಾವುದಾದರೂ ಸಹಕಾರಿ ಸಂಘದ ಸದಸ್ಯರಾಗಿ ಇದ್ದೇ ಇರುತ್ತಾರೆ. ಎಲ್ಲರನ್ನೂ ಈ ಯೋಜನೆಗೆ ತರಲು ಸಾಧ್ಯವಿಲ್ಲ. 30 ಲಕ್ಷ ಜನರ ನೋಂದಣಿ ಗುರಿ ವಹಿಸಲಾಗಿದೆ.

ಸಮಿತಿ ವರದಿ ಬಳಿಕ ವಿಸ್ತರಣೆ ಬಗ್ಗೆ ಸೂಚನೆ: ಈಗಾಗಲೇ 19 ಲಕ್ಷ ನೋಂದಣಿಯಾಗಿದೆ. ನಮ್ಮ ಗುರಿ ತಲುಪಲಿದ್ದೇವೆ. ಹಾಗಾಗಿ ಸಮಯ ವಿಸ್ತರಣೆ ಮಾಡುವ ಪ್ರಸ್ತಾಪ ಇಲ್ಲ. ಗುರಿ ತಲುಪದೇ ಇದ್ದಲ್ಲಿ ಆಗ ಇದಕ್ಕಾಗಿಯೇ ಇರುವ ಸಮಿತಿ ಇದೆ. ಆ ಸಮಿತಿ ಸಮಯ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾವು ಕೂಡ ಸಮಯ ವಿಸ್ತರಣೆ ಮಾಡುವ ಸೂಚನೆ ನೀಡುತ್ತೇವೆ ಎಂದರು.

ಈ ಹಿಂದೆ ಇದ್ದ ಯಶಸ್ವಿನಿ ಯೋಜನೆಯಲ್ಲಿನ ಲೋಪದೋಷ ಸರಿಪಡಿಸಿ, ವೈದ್ಯರ ಜೊತೆ ಚರ್ಚಿಸಿಯೇ ಯೋಜನೆ ಮರು ಜಾರಿ ಮಾಡಲಾಗುತ್ತಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರ್ಕಾರವೇ ಶುಲ್ಕ ಭರಿಸಲಿದೆ. ಮಾಜಿ ಸೈನಿಕರು ಹಲವು ಸಂಘದಲ್ಲಿ ಸದಸ್ಯರಿದ್ದಾರೆ. ಹಾಗಾಗಿ ಅವರನ್ನು ಮತ್ತೆ ಸೇರಿಸುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.