ETV Bharat / state

ಬರಿದಾಯ್ತು ಕೃಷ್ಣೆಯ ಒಡಲು, 'ಮಹಾ' ಜೊತೆ ಮಾತುಕತೆ ನಡೆಸಿ ನೀರು ಬಿಡಿಸಿ-ರೈತರಿಂದ ಹೋರಾಟದ ಎಚ್ಚರಿಕೆ - kannada news

ಕೃಷ್ಣಾ ನದಿಗೆ ನೀರು ಬಿಡದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಕೃಷ್ಣಾ ನದಿಗೆ ನೀರು ಬಿಡದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರು
author img

By

Published : Apr 27, 2019, 10:13 PM IST

ಚಿಕ್ಕೋಡಿ: ರಾಜ್ಯ ಸರ್ಕಾರ, ಮಹಾರಾಷ್ಟ್ರದ ಜೊತೆಗೆ ಮಾತುಕತೆ ನಡೆಸಿ ಕೃಷ್ಣಾ ನದಿಗೆ ತಕ್ಷಣ ನೀರು ಬಿಡಿಸಬೇಕು, ಇಲ್ಲವಾದ್ರೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ರೈತ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.

ನದಿ ತೀರದ ಸುತ್ತಮುತ್ತಲ ಜನರು ಕುಡಿಯುವ ನೀರು ಸಿಗದೆ ಕಿ.ಮೀ ಗಳಷ್ಟು ದೂರ ಅಲೆದಾಡುವ ಪರಿಸ್ಥಿತಿ ತಲೆದೋರಿದೆ. ಹಾಗಾಗಿ, ಆದಷ್ಟು ಬೇಗ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದ ಮುಖಾಂತರ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿದುಬರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕೃಷ್ಣಾ ನದಿಗೆ ನೀರು ಬಿಡಿಸಿ, ಇಲ್ಲವೇ ಪ್ರತಿಭಟನೆ ಬಿಸಿ ಎದುರಿಸಲು ಸಿದ್ಧರಾಗಿ-ರೈತರ ಆಗ್ರಹ

ಕೃಷ್ಣಾ ತೀರದ ಮಾಂಜರಿ, ಯಡೂರ, ಚಂದೂರ, ಇಂಗಳಿ ಹಾಗೂ ರಾಯಬಾಗ ತಾಲೂಕಿನ ನಸಲಾಪುರ, ಭಾವನಾ, ಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಗ್ರಾಮದ ರೈತರು ಬರುವ ಮೇ 2 ರಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಹತ್ತಿರ ಇರುವ ಚಿಕ್ಕೋಡಿ ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Intro:ಕೃಷ್ಣಾ ನದಿಗೆ ನೀರು ಬಿಡದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರುBody:

ಚಿಕ್ಕೋಡಿ :

ನದಿ ತೀರದ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಸಿಗದೆ ಕಿ.ಮೀ ಗಳಷ್ಟು ದೂರ ಹೋಗಿ ಕುಡಿಯಲು ನೀರು ತರಬೇಕಾಗಿದೆ. ಈ ತೊಂದರೆಗೆ ಪರಿಹಾರವಾಗಿ ಕರ್ನಾಟಕ ಸರಕಾರವು ಬೇಗನೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದ ಮುಖಾಂತರ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿದು ಬಿಡಬೇಕು ಇಲ್ಲವಾದರೆ ಚಿಕ್ಕೋಡಿ ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ನಡೆಸಲಾಗುವುದೆಂದು ಹೋರಾಟಗಾರರು ಚಿಕ್ಕೋಡಿ ತಹಶೀಲ್ದಾರ ಅವರಿಗೆ ಮನವಿ ಕೊಟ್ಟು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಮಾಂಜರಿ ಯಡೂರ ಚಂದೂರ ಇಂಗಳಿ ಹಾಗೂ ರಾಯಬಾಗ ತಾಲೂಕಿನ ನಸಲಾಪುರ ಭಾವನಾ ಸೌಂದತ್ತಿ ದಿಗ್ಗೇವಾಡಿ ಜಲಾಲಪುರ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ನದಿ ತೀರದ ಗ್ರಾಮಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲ ಈ ಎಲ್ಲ ಗ್ರಾಮದ ರೈತರು ಬರುವ ಮೇ 2 ರಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಹತ್ತಿರ ಇರುವ ಚಿಕ್ಕೋಡಿ ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ನಡೆಸಲಾಗುವುದೆಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.