ETV Bharat / state

ರಮೇಶ್​ ಜಾರಕಿಹೊಳಿ‌ ಚೈಲ್ಡಿಶ್ ಹೇಳಿಕೆಗೆ ಪ್ರತಿಕ್ರಿಯಿಸಲು ಟೈಮ್​​​ ಇಲ್ಲ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

author img

By

Published : Jun 29, 2020, 6:35 PM IST

ಜನಸಾಮಾನ್ಯರ ಧ್ವನಿಯಾಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್​ ವಾಗ್ದಾಳಿ ನಡೆಸಿದರು.

ಶಾಸಕಿ ಹೆಬ್ಬಾಳ್ಕರ್ ವಾಗ್ದಾಳಿ
ಶಾಸಕಿ ಹೆಬ್ಬಾಳ್ಕರ್ ವಾಗ್ದಾಳಿ

ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ‌ ಅವರು ನೀಡುವ ಚೈಲ್ಡಿಶ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಯುವರಾಜ ಕದಂ ಅವರು ಬೆಳಗಾವಿ ಎಪಿಎಂಸಿಗೆ ಅಧ್ಯಕ್ಷರಾಗಲು ನಾನೇ ಕಾರಣ ಎಂಬ ಸಚಿವ ರಮೇಶ್​ ಜಾರಕಿಹೊಳಿ‌ ಹೇಳಿಕೆಗೆ ಟಾಂಗ್​ ‌ನೀಡಿದ ಶಾಸಕಿ ಹೆಬ್ಬಾಳ್ಕರ್, ಇದು ಸಚಿವರ ಬೇಜವಾಬ್ದಾರಿ ಹೇಳಿಕೆ. ಯುವರಾಜ್ ಕದಂ ಅಧ್ಯಕ್ಷರಾಗಲು ಎಂಇಎಸ್‌ನವರು ಸಹಾಯ ಮಾಡಿದ್ದರು. ಹೀಗಾಗಿ ಕಾಣದ ಕೈಗಳು ಕೆಲಸ ಮಾಡಿವೆ ಎಂದು ನಾನವತ್ತು ಹೇಳಿದ್ದೆ. ಆ ಕಾಣದ ಕೈ ನಾನೇ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ಚೈಲ್ಡಿಶ್ ಆಗಿದೆ. ಇಂತಹ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ನಾನು ಬ್ಯುಸಿ ಇದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತುಂಬಾ ಕೆಲಸ ಕೊಟ್ಟಿದ್ದಾರೆ ಎಂದರು.

ಜನಸಾಮಾನ್ಯರ ಧ್ವನಿಯಾಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಪ್ರತಿಭಟನೆ ಮಾಡಿ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿಲ್ಲ. ಜನಸಾಮಾನ್ಯರ ಧ್ವನಿಯಾಗಿ ಸರ್ಕಾರದ ಕಣ್ಣು ತೆರೆಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದೆ. ಕೋವಿಡ್ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುತ್ತಿದ್ದಾರೆ. ಒಂದು ಕಡೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸುತ್ತಾರೆ. ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.