ಅಥಣಿ: ಡಿಸೆಂಬರ್ 28 ಶನಿವಾರದಂದು ತಾಲೂಕಿನ ಯಕ್ಕಂಚಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಅನಾಮಧೇಯ ತಾಯಿ ಹೆಣ್ಣು ಮಗುವಿಗೆ ಜನನ ನೀಡಿ ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆಗೆ ಹೊಸ ತಿರುವು ಪಡೆದುಕೊಂಡಿದೆ.
ಅಪ್ರಾಪ್ತ ಬಾಲಕಿ ಹಾಗೂ ಅವಿವಾಹಿತೆ ಆಗಿರುವ ಬಾಲಕಿ ಕಳೆದ ಡಿಸೆಂಬರ್ 28ರಂದು ಯಕ್ಕಂಚಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ನಾಪತ್ತೆಯಾಗಿದ್ದಳು. ಈ ಘಟನೆಗೆ ಕಾರಣರಾದವರನ್ನು ಕಂಡು ಹಿಡಿಯಲು ಪೊಲೀಸ್ ಅಧಿಕಾರಿಗಳು ಜಾಲ ಬೀಸಿದ್ದರು. ಅದರಂತೆ ಇದೀಗ ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೇ ಆ ಮಗುವಿನ ತಾಯಿ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಕೋಹಳ್ಳಿ ಗ್ರಾಮದ ನಿವಾಸಿ ಹಾಗೂ ಅದೇ ಶಾಲೆಯ ಶಿಕ್ಷಕನಾದ ಭೀಮಪ್ಪ ಬಸಪ್ಪ ಕುಂಬಾರ ಬಂಧಿತ ಆರೋಪಿ. ಇತನನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ವಿದ್ಯಾರ್ಥಿನಿ ಹಾಗೂ ಪಾಲಕರ ದೂರಿನನ್ವಯ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.