ETV Bharat / state

ಕಾಂಗ್ರೆಸ್​ನವರ ಭ್ರಷ್ಟಾಚಾರದ ಹಣಕ್ಕೆ ನಾನು ತಡೆ ನೀಡಿದ್ದೇನೆ: ಪ್ರಧಾನಿ ಮೋದಿ - etv bharat kannada

ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್​​ ಮಾಡುವುದಕ್ಕೆ ನೀವು ಮತ್ತೊಮ್ಮೆ ಬಿಜೆಪಿಗೆ ಅವಕಾಶ ಮಾಡಿ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

narendra-modi-reaction-on-congress
ಕಾಂಗ್ರೆಸ್ ನವರ ಭ್ರಷ್ಟ ಹಣಕ್ಕೆ ನಾನು ತಡೆ ನೀಡಿದ್ದೇನೆ: ಪ್ರಧಾನಿ ಮೋದಿ
author img

By

Published : Apr 29, 2023, 6:54 PM IST

ಚಿಕ್ಕೋಡಿ(ಬೆಳಗಾವಿ): ಕಾಂಗ್ರೆಸ್ ಸರ್ಕಾರದ ಕಪ್ಪು ಹಣದಿಂದ ಕರ್ನಾಟಕಕ್ಕೆ ತುಂಬಾ ನಷ್ಟ ಸಂಭವಿಸಿದೆ. ಕಾಂಗ್ರೆಸ್​ನಿಂದ ಯುವಕರ ಕನಸು ಚೂರು ಚೂರು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಕಾಸ ಹೊಸ ದಾರಿಯಲ್ಲಿ ಹೋಗುವಂತೆ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ವಿಶ್ವಗುರು ಬಸವೇಶ್ವರ ನಮಗೆ ಕೇಂದ್ರ ಬಿಂದು 2014 ರಿಂದ ನಮಗೆ ನೀವು ಅವಕಾಶ ಮಾಡಿ ಕೊಟ್ಟಿದ್ದೀರಿ. ಒಳ್ಳೆಯ ಜನಸೇವೆ ನಾವು ನೀಡಿದ್ದೇವೆ ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಯುತಿತ್ತು, ಬಸವೇಶ್ವರ ದಾರಿಯಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್ ನವರ ಭ್ರಷ್ಟ ಹಣಕ್ಕೆ ನಾನು ತಡೆ ನೀಡಿದ್ದೇನೆ. ಇದರಿಂದ ಕಾಂಗ್ರೆಸ್ ನವರು ನನ್ನ ಬೈಯುತ್ತಾರೆ, ಮೋದಿಗೆ ಗೋರಿ ತೊಡುತ್ತಿದ್ದಾರೆ ಇದರಿಂದ ಅವರಿಗೆ ನೀವು ಅವಕಾಶ ಮಾಡಿ ಕೊಡಬೇಡಿ ಅವರು ಬೆಣ್ಣೆ ಎಲ್ಲಿ ಸಿಗುತ್ತೆ ಎಂದು ನೊಡುತ್ತಿದ್ದಾರೆ. ಅದಕ್ಕೆ ನೀವು ಅವಕಾಶ ಮಾಡಿ ಕೊಡಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.

ಸಕ್ಕರೆ ಜಿಲ್ಲೆ ಬೆಳಗಾವಿ ಇಲ್ಲಿ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ ನಿಮ್ಮ ಶ್ರಮಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಕಬ್ಬಿಗೆ ಎಫ್​ಆರ್​ಪಿ ದರವನ್ನು ಹೆಚ್ಚು ಮಾಡಿ ರೈತರ ಏಳಿಗೆ ಹೊಂದಲು ನಮ್ಮ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ. ಈಗಾಗಲೇ ಬಜೆಟ್​ನಲ್ಲಿ ಎಫ್​ಆರ್​ಪಿಗೆ ಹತ್ತು ಸಾವಿರ ಕೋಟಿ ರೂಪಾಯಿಯನ್ನು ಮೀಸಲು ಇಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಳೆದ ಕಬ್ಬು ಒಣಗಿ ಹಾಳಾಗುತಿತ್ತೂ, ಆ ಸರ್ಕಾರದಲ್ಲಿ ಎಫ್​ಆರ್​ಪಿ ಅತಿ ಕಡಿಮೆ ಕೊಡುತಿದ್ದರು ಆದರೆ ಬಿಜೆಪಿ ಸರ್ಕಾರ ಇನ್ನು ಮುಂದೆ ಕಬ್ಬು ಬೆಳೆಗಾರರಿಗೆ ಹೇಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ತಿಳಿಸಿದರು.

ವಿರಾಟ್ ಜನಸಾಗರ ನೋಡಿ ನಾನು ಧನ್ಯೋಸ್ಮಿಯಾಗಿದ್ದೇನೆ. ನೀವು ಇಷ್ಟು ಜನ ನನಗೆ ಬೆಂಬಲ ನೀಡಿದ್ದೀರಿ ಈ ಬಾರಿ ನಿಮ್ಮ ನಿರ್ಧಾರದಿಂದ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಬೇಕು. ಇದರೊಂದಿಗೆ ರಾಷ್ಟ್ರೀಯ ವಿಕಾಸ ನಿರ್ಮಾಣ ಆಗಬೇಕು ಎಂದು ಹೇಳಿದರು. ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರು ಎಲ್ಲಾ ರಾಷ್ಟ್ರ ಪ್ರೇಮಿಗಳಿಗೆ ವಂದನೆ ಸಲ್ಲಿಸಿ, ರಾಜಹಂಸಗಡ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ನಮಗೆ ಸಿಕ್ಕ ಸುವರ್ಣ ಅವಕಾಶವಾಗಿದೆ ಎಂದರು.

ಇವತ್ತು ಬಿಜೆಪಿ ರಾಷ್ಟ್ರದ ದೊಡ್ಡ ಪಕ್ಷವಾಗಿದೆ ಬೆಳಗಾವಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧಿಸಬೇಕು. ಇವತ್ತು ಡಬಲ್ ಇಂಜಿನ್ ಸರ್ಕಾರ ಇದೆ ಅನೇಕ ಯೋಜನೆ ರೂಪಿಸಲಾಗಿದೆ. ಇಲ್ಲಿನ ಸಂಸ್ಕೃತಿ ವಿಶೇಷವಾಗಿದೆ. ಡಬಲ್ ಇಂಜಿನ್ ಸರ್ಕಾರ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ನಾನು ಇವತ್ತು ಬೆಳಗಾವಿಗೆ ಬಂದಿದ್ದೇನೆ. ಮತದಾನಕ್ಕೆ ಇನ್ನು ಹತ್ತು ದಿನ ಮಾತ್ರ ಉಳಿದಿದೆ. ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್​​ ಮಾಡುವುದಕ್ಕೆ ನೀವು ಮತ್ತೊಮ್ಮೆ ಬಿಜೆಪಿಗೆ ಅವಕಾಶ ಮಾಡಿ ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅವಧಿಯಲ್ಲಿ ಪಡಿತರ ಅಕ್ಕಿ ಬೇರೆಯವರ ಪಾಲಾಗುತ್ತಿತ್ತು ಆದರೆ ಡಬಲ್ ಇಂಜಿನ್ ಸರ್ಕಾರ ಇದಕ್ಕೆ ಕಡಿವಾಣ ಹಾಕಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಬರಿ ಭ್ರಷ್ಟಾಚಾರ ಇತ್ತು, ಇವತ್ತು ಈ ಅನ್ಯಾಯವನ್ನು ತಡೆಯಲಾಗಿದೆ ಕರ್ನಾಟದಲ್ಲಿ ಬಡವರಿಗೆ 7 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿ ವೇಗದಿಂದ ಕಾರ್ಯಗಳನ್ನು ನಡೆಸಲಾಗುತ್ತಿದೆ. ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಏನು ಯೋಜನೆ ರೂಪಿಸಲಿಲ್ಲ. ಬಿಜೆಪಿ ಸರ್ಕಾರ ಅವರಿಗೆ ನ್ಯಾಯವನ್ನು ನೀಡಿದೆ. ಇಷ್ಟು ದಿನ ಕಾಂಗ್ರೆಸ್ ಸರ್ಕಾರ ಏನು ಮಾಡಲಿಲ್ಲ ಅವರ ಜೀವನ ಬದಲು ಮಾಡುವುದಕ್ಕೆ ಬಿಜೆಪಿ ಸರ್ಕಾರ ಬೇಕಾಯ್ತು ಎಂದರು.

ವಿದ್ಯುತ್, ನೀರು, ಮನೆ, ಮೂಲ ಭೂತ ಸೌಲಭ್ಯ ಕೊಡಲಾಗಿದೆ ಹಕ್ಕು ಪತ್ರ ವನ್ನು ನೀಡಲಾಗಿದೆ ಇದರಿಂದ ಅವರಿಗೆ ತುಂಬ ಅನುಕೂಲಕರವಾಗಿದೆ ನಾವು ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಏನು ಮಾಡಿದೆ? ಕಾಂಗ್ರೆಸ್ ಕಾರ್ಯ ಒಂದೇ ಅದು ಪ್ರಧಾನಿ ನರೇಂದ್ರ ಮೋದಿ ಬೈಯುದು. ಕಾಂಗ್ರೆಸ್ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಏನು ಮಾಡಿದ್ದಾರೆ ಎಂದು ಗೊತ್ತಿದ್ದೆ ನಿಮಗೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನವರು ಅಸೂರ ಎಂದು ಟಿಕೆಟ್ ಮಾಡಿದ್ದರು. ಡಿಕ್ಷನರಿಯ ಎಲ್ಲಾ ಪದಗಳಿಂದ ಅವರನ್ನು ನಿಂದನೆ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ಹರಿಹಾಯ್ದರು.

ಕಾಂಗ್ರೆಸ್ ಅವಧಿ ಸರ್ಕಾರದಲ್ಲಿ ನಮ್ಮ ಹೆಣ್ಣು ಮಕ್ಕಳು ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗುತಿದ್ದರು, ನಮ್ಮ ಸರ್ಕಾರ ನಾಲ್ಕು ಕೋಟಿ ಮನೆಗಳು ಮಂಜೂರು ಮಾಡಿದೆ. ಮೂರು ಕೋಟಿ ಮನೆಗಳು ಮಹಿಳೆಯರ ಹೆಸರಿನಲ್ಲಿ ಇದ್ದಾವೆ. ಬೆಲೆಬಾಳುವ ಮನೆಗಳು ನಿರ್ಮಾಣ ಆಗುತ್ತಿವೆ, ಆರೋಗ್ಯ ವಿಚಾರಕ್ಕೆ ಬಿಜೆಪಿ ಸರ್ಕಾರ ಪ್ರಾಧಾನ್ಯತೆ ನೀಡಿದೆ ಎಂದು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ವಿವರಣೆ ನೀಡಿದ್ರು.

ಕಾಂಗ್ರೆಸ್​ನದ್ದು ಭ್ರಷ್ಟಾಚಾರ ಸಂಸ್ಕೃತಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಣ್ಣ ರೈತರು ಬ್ಯಾಂಕ್ ವ್ಯವಹಾರ ಗೊತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಲ್ಲರಿಗೂ ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿದೆ. ಬೆಳಗಾವಿ ಜಿಲ್ಲೆಗೆ ಕಿಸಾನ್ ಸಮ್ಮಾನ್​ ಯೋಜನೆಯಲ್ಲಿ 13 ಕೋಟಿ ರೂಪಾಯಿ ಬರುತ್ತೆ. ಕಾಂಗ್ರೆಸ್ ಸರ್ಕಾರ ಇತ್ತು ಎಂದರೆ ಇದನ್ನು ಕೊಳ್ಳೆ ಹೊಡೆತ ಇತ್ತು ಎಂದು ಹೇಳಿದ್ರು. 10ನೇ ತಾರೀಕು ಎಲ್ಲರೂ ಬಿಜೆಪಿಗೆ ಮತ ನೀಡಿ ಮೋದಿ ಮನವಿ ಮಾಡಿದರು.

ಇದನ್ನೂ ಓದಿ:ಕುಂದಗೋಳದಲ್ಲಿ ಭರ್ಜರಿ ರೋಡ್​ ಶೋ ನಡೆಸಿದ ಪ್ರಿಯಾಂಕಾ ಗಾಂಧಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.