ETV Bharat / state

ಸೇವೆಗೆ ಹಾಜರಾಗಲು ಹೊರಟಿದ್ದಾಗ ಅಪಘಾತ: ಅಗಲಿದ ವೀರ ಯೋಧನಿಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ - Mortal remains of soldier

ರಾಯಬಾಗ ತಾಲೂಕಿನ ದೇವನಕಟ್ಟಿ ನಿವಾಸಿಯಾದ ಯಲ್ಲಪ್ಪಾ, ಕಳೆದ 9 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ರಾತ್ರಿ ಸೇವೆಗೆ ಹಾಜರಾಗಲು ಸ್ವ-ಗ್ರಾಮದಿಂದ ಜಮ್ಮು-ಕಾಶ್ಮೀರಕ್ಕೆ ಹೊರಟಿರುವಾಗ ಮಾರ್ಗ ಮಧ್ಯೆ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದರು.

Soldier death
Soldier death
author img

By

Published : Sep 3, 2021, 2:16 AM IST

ಚಿಕ್ಕೋಡಿ: ರಜೆ ಮುಗಿಸಿಕೊಂಡು ಸೇವೆಗೆ ಹಾಜರಾಗಲು ಹೊರಟಿರುವಾಗ ಸೆಪ್ಟೆಂಬರ್ 1ರಂದು ಮಾರ್ಗ ಮಧ್ಯೆ ಮುಂಬೈ ನಗರದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಯಭಾಗ ತಾಲೂಕಿನ ಯೋಧ ಯಲ್ಲಪ್ಪಾ ಬಾಲಪ್ಪಾ ನಾಯಿಕ ಅವರ ಅಂತ್ಯಸಂಸ್ಕಾರವನ್ನು ತಾಲೂಕಿನ ದೇವನಕಟ್ಟಿಯಲ್ಲಿ ಗುರುವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಹುಟ್ಟೂರಿನಲ್ಲಿ ವೀರ ಯೋಧನ ಅಂತ್ಯಕ್ರಿಯೆ

ರಾಯಬಾಗ ತಾಲೂಕಿನ ದೇವನಕಟ್ಟಿ ನಿವಾಸಿಯಾದ ಯಲ್ಲಪ್ಪಾ, ಕಳೆದ 9 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ರಾತ್ರಿ ಸೇವೆಗೆ ಹಾಜರಾಗಲು ಸ್ವ-ಗ್ರಾಮದಿಂದ ಜಮ್ಮು-ಕಾಶ್ಮೀರಕ್ಕೆ ಹೊರಟಿರುವಾಗ ಮಾರ್ಗ ಮಧ್ಯೆ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದರು. ಯಲ್ಲಪ್ಪ ಅವರ ಪಾರ್ಥಿವ ಶರೀರವು ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಳಗಾವಿಗೆ ಆಗಮಿಸಿತ್ತು. ರಸ್ತೆಯ ಮೂಲಕ ಬೆಳಗಾವಿಯಿಂದ ಸ್ವ-ಗ್ರಾಮಕ್ಕೆ ಕರೆತರಲಾಯಿತು. ಮಾಜಿ ಸೈನಿಕರು ಮತ್ತಿತರರು ಸ್ಥಳಕ್ಕೆ ಬಂದು ಹೂ ಮಾಲೆಗಳನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳು ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಸರ್ಕಾರಕ್ಕೆ ಸೇರಿದ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯೋಧ ಯಲ್ಲಪ್ಪನ ಪ್ರಾರ್ಥಿವ ಶರೀರ ಗುರುವಾರ ದೇವನಕಟ್ಟಿಗೆ ಬಂದಾಗ ಸುತ್ತಲಿನ ಗ್ರಾಮಸ್ಥರು, ಜನ ಪ್ರತಿನಿಧಿಗಳು ಪಾರ್ಥಿವ ಶರೀರದ ಅಂತಿಮ ನಮನ ಮಾಡಿದರು. ಮಗನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

Soldier death
ಅಗಲಿದ ವೀರ ಯೋಧನಿಗೆ ಅಂತಿಮ ವಿದಾಯ ಹೇಳಿದ ದೇವನಕಟ್ಟಿ ಗ್ರಾಮಸ್ಥರು!

ಇದನ್ನೂ ಓದಿರಿ: ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ: ಡಿಕೆಶಿ

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಸರ್ಕಾರಿ ಜಮೀನಿನಲ್ಲಿ ಶವಪೆಟ್ಟಿಗೆಯನ್ನಿಟ್ಟು ಸರ್ಕಾರಿ ಗೌರವ ಸಲ್ಲಿಸಿ ಚಿತೆಗೇರಿಸಲಾಯಿತು. ಯೋಧನ ಮಡದಿ, ತಾಯಿ ಬಂಧುಗಳ ಅಂತಿಮ ನಮನ ಸಲ್ಲಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂದರ್ಭದಲ್ಲಿ ಮೃತ ಯೋಧನ ಮಗ ಬಾಲಚಂದ್ರ ‘ನನ್ನಪ್ಪನನ್ನು ಮಲಗಿಸಿ ಬೆಂಕಿ ಹಚ್ಚುತ್ತಿದ್ದೀರಿ ಅವರಿಗೆ ನೋವಾಗುತೆ ಎಂದಾಗ ನೆರೆದಿದ್ದವರಲ್ಲಿ ದುಃಖ ಉಮ್ಮಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.