ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಬಳಸುತ್ತಿದ್ದ ಮೊಬೈಲ್ ದುರ್ಬಳಕೆಯಾದ ಕಾರಣ ವಿಸಿ ಅವರು ಲ್ಯಾಂಡ್ ಫೋನ್ ಮೊರೆ ಹೋಗಿದ್ದಾರೆ.
ಈ ಸಂಗತಿಯನ್ನು ಸ್ವತಃ ವಿವಿ ಉಪ ಕುಲಪತಿ ಪ್ರೊ. ಕರಿಸಿದ್ದಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ದೃಢಪಡಸಿದ್ದಾರೆ.
ತಮ್ಮ ಸಂಪರ್ಕಕ್ಕೆ ಕಚೇರಿಯ ಲ್ಯಾಂಡ್ ಫೋನ್ಗೆ ಕರೆ ಮಾಡುವಂತೆ ವಿಸಿ ಮನವಿ ಮಾಡಿಕೊಂಡಿದ್ದಾರೆ. ಯಾವ ವಿಷಯದಲ್ಲಿ ಮೊಬೈಲ್ ದುರ್ಬಳಕೆ ಆಗಿದೆ ಎಂಬ ವಿಷಯವನ್ನು ವಿಸಿ ಬಹಿರಂಗಪಡಿಸದಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ ದೇಶದ ಅತಿ ದೊಡ್ಡ ತಾಂತ್ರಿಕ ವಿವಿಯ ಕುಲಪತಿಗಳು ಮೊಬೈಲ್ ಬಿಟ್ಟು, ಲ್ಯಾಂಡ್ ಫೋನ್ ಬಳಸುತ್ತಿರುವುದು ಚರ್ಚೆ ಹುಟ್ಟು ಹಾಕಿದೆ.
ನಾನೇ ವಿಟಿಯು ವಿಭಜನೆಗೆ ವಿರೋಧಿಸಿದ್ದೆ!
ವಿಟಿಯು ವಿಭಜನೆ ಮಾಡದಂತೆ ಹಾಗೂ ವಿಭಜನೆಯಿಂದ ಎದುರಾಗುವ ಸಂಭಾವ್ಯ ಸಮಸ್ಯೆಗಳ ಬಗ್ಗೆಯೂ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದ್ದೆ. ಆದರೆ ವಿಟಿಯು ವಿಭಜನೆಯಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದ್ದು ಕಾಕತಾಳೀಯ ಎಂದರು.
ವಿಟಿಯು ವಿಭಜನೆ ಸಂಬಂಧ ಸಮಿತಿ ರಚಿಸಿದ್ದ ಸರ್ಕಾರ ಬಳಿಕ ಅದನ್ನು ರದ್ದುಪಡಿಸಿತ್ತು. ವಿಟಿಯು ವಿಭಜನೆ ನಿರ್ಧಾರ ಕೈ ಬಿಟ್ಟಿರುವುದಾಗಿ ಸ್ವತಃ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದರು.