ETV Bharat / state

H Vishwanath: ಬೊಮ್ಮಾಯಿ ಸರ್ಕಾರ ₹1.5 ಲಕ್ಷ ಕೋಟಿ ಮೌಲ್ಯದ ಟೆಂಡರ್​ ಕರೆದು ಕಿಕ್‌ಬ್ಯಾಕ್ ಪಡೆದಿತ್ತು- ಹೆಚ್.ವಿಶ್ವನಾಥ್ - ಬೊಮ್ಮಾಯಿ ಸರ್ಕಾರ ವಿರುದ್ಧ ಹೆಚ್​ ವಿಶ್ವನಾಥ್​ ಆರೋಪ

MLC H Vishwanath: ಬಿಜೆಪಿಯವರು ತಮ್ಮ ಅವಧಿಯಲ್ಲಿ ಗುತ್ತಿಗೆದಾರರಿಗೆ ಏಕೆ ಹಣ ಬಿಡುಗಡೆ ಮಾಡಲಿಲ್ಲ? ಎಲೆಕ್ಷನ್ ಮುಂಚೆ ಅವರು ಒಂದೂವರೆ ಲಕ್ಷ ಕೋಟಿ ರೂ ಮೌಲ್ಯದ ಟೆಂಡರ್ ಕರೆದು ಕಿಕ್ ಬ್ಯಾಕ್ ತೆಗೆದುಕೊಂಡರು. ಇದಕ್ಕೀಗ ಯಾರು ಜವಾಬ್ದಾರರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್​ ಪ್ರಶ್ನಿಸಿದ್ದಾರೆ.

mlc-h-vishwanath-allegation-against-basavaraj-bommai-govt
ಬೊಮ್ಮಾಯಿ ಸರ್ಕಾರ 1.5 ಲಕ್ಷ ಕೋಟಿ ಕಿಕ್ ಬ್ಯಾಕ್ ಪಡೆದಿತ್ತು: ಎಂಎಲ್ಸಿ ಹೆಚ್ ವಿಶ್ವನಾಥ್ ಆರೋಪ
author img

By

Published : Aug 13, 2023, 3:46 PM IST

ವಿಧಾನ ಪರಿಷತ್‌ ಸದಸ್ಯ ಹೆಚ್. ವಿಶ್ವನಾಥ್ ಆರೋಪ

ಬೆಳಗಾವಿ : "ವಿಧಾನಸಭೆ ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಕರೆದು ಕಿಕ್ ಬ್ಯಾಕ್ ತೆಗೆದುಕೊಂಡಿದೆ" ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ ಗಂಭೀರ ಆರೋಪ ಮಾಡಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರಿಂದ ಕಮಿಷನ್ ಆರೋಪದ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಮಾತನಾಡುವುದು ಸುಲಭ, ಮಾತನಾಡುವವನು ಸತ್ಯವಂತನಿರಬೇಕು. ಇಡೀ ದೇಶ, ರಾಜ್ಯದಲ್ಲಿ ನೀ ಕಳ್ಳ, ನೀ ಕಳ್ಳ ಎನ್ನುತ್ತಾರೆ. ಆದರೆ ಯಾರು ಕಳ್ಳ ಎಂದು ಜನ ತೀರ್ಮಾನ ಮಾಡುತ್ತಾರೆ. ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ, ಜನರ ತೀರ್ಮಾನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ನೀಡಬೇಕು" ಎಂದು ಹೇಳಿದರು.

ಬಿಜೆಪಿಗೆ ಕರ್ನಾಟಕದಲ್ಲಿ‌ ಭವಿಷ್ಯವಿಲ್ಲ: ಬೆಳಗಾವಿ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಇತರರೊಡನೆ ಪೈಪೋಟಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, "ಪಾಪ, ರಮೇಶ್ ‌ಜಾರಕಿಹೊಳಿ ನನ್ನ ಸ್ನೇಹಿತ. ಏನೋ ಆಗಿ ಮಂತ್ರಿಯಾದರು. ಹಲವು ಕಾರಣಕ್ಕೆ ಮಂತ್ರಿ ಸ್ಥಾನವೂ ಹೋಯಿತು. ರಾಜ್ಯದಲ್ಲಿ ಬಿಜೆಪಿ ಎಂದಾದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆಯೇ?, ಒಂದು ಸಲ ಕುಮಾರಸ್ವಾಮಿ ಹೆಗಲ ಮೇಲೆ, ಇನ್ನೊಂದು ಸಲ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬಂದರು. ಈಗ ಪೂರ್ತಿಯಾಗಿ ಬಿದ್ದೇ ಹೋದರು. ಬಿಜೆಪಿಗೆ ಕರ್ನಾಟಕದಲ್ಲಿ ಅವಕಾಶ ಇಲ್ಲವೇ ಇಲ್ಲ, ಭವಿಷ್ಯವೂ ಇಲ್ಲ. ಅವರ ನಡವಳಿಕೆ, ನಡೆಸಿದ ಆಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ.‌ ಇನ್ನು ರಮೇಶ್ ಜಾರಕಿಹೊಳಿ ಚೆನ್ನಾಗಿರಪ್ಪ, ಸ್ವಲ್ಪ ಬುದ್ಧಿ ಕಲಿತುಕೊಂಡು ಹೋಗಪ್ಪಾ" ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.

ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್​, "ಕಮಿಷನ್ ತೆಗೆದುಕೊಂಡಿದಕ್ಕೇ ನೀವು ಮನೆ ಸೇರಿರುವುದು. ವಿಧಾನಸಭೆ ಚುನಾವಣೆಯಲ್ಲಿ ಏಕೆ ಗೆಲ್ಲಲಿಲ್ಲ‌‌? ಏನೇನು ತೆಗೆದುಕೊಂಡಿರಿ ಎಂದು ನಿಮ್ಮ ಪಕ್ಕದಲ್ಲಿದ್ದವರೇ ಹೇಳಿದ್ದಾರೆ. ರವಿ ಈ ರಾಜ್ಯದ ಮಂತ್ರಿ ಆಗಿದ್ದವರು. ಮಾತನಾಡಬೇಕಂತ ಏನೇನೋ ಹೇಳಬಾರದು. ನೀವೇನೂ ಸತ್ಯಹರಿಶ್ಚಂದ್ರರೇ? ರಾಜಕಾರಣದಲ್ಲಿ ಸತ್ಯಹರಿಶ್ಚಂದ್ರರು ಎಲ್ಲೂ ಸಿಗಲ್ಲ. ರಾಜಕಾರಣ, ಮಾಧ್ಯಮ, ಕೈಗಾರಿಕೆ ಕ್ಷೇತ್ರ ಸೇರಿ ಎಲ್ಲೂ ಸತ್ಯಹರಿಶ್ಚಂದ್ರರು ಇಲ್ಲ" ಎಂದರು.

ಲೋಕಸಭೆಗೆ ಸ್ಪರ್ಧೆ ವಿಚಾರ: ಮೈಸೂರಿನಿಂದ ಹೆಚ್.ವಿಶ್ವನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ, "ಯಾಕಾಗಬಾರದು? ನಾನು ಕಾಂಗ್ರೆಸ್​​ನಲ್ಲೇ ಸಂಸದ ಆಗಿದ್ದವನು. ಕಾಂಗ್ರೆಸ್ ಕಾರ್ಯಕರ್ತನಾಗಿ ಮೇಲಕ್ಕೆದ್ದು ಬಂದವನು. ಹಲವು ಕಾರಣಗಳಿಂದ ನಾನು ಹೊರ ಬಂದಿದ್ದೇನೆ. ನಲವತ್ತು ವರ್ಷ ಕಾಂಗ್ರೆಸ್​ನಲ್ಲೇ ಇದ್ದವನು. ಪಕ್ಷ ರಾಜಕಾರಣ ಬಲವಾಗಿದ್ದಾಗ ಕಾಂಗ್ರೆಸ್ ಇಂದಿರಾ ಗಾಂಧಿ ಹೆಸರಲ್ಲಿ ಯಾರು ನಿಂತರೂ ಗೆದ್ದು ಬರುತ್ತಿದ್ದರು. ಇದೀಗ ಪಕ್ಷ ರಾಜಕಾರಣ ಹೋಗಿ ವ್ಯಕ್ತಿ ರಾಜಕಾರಣ ಬಂದಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಪಕ್ಷ ರಾಜಕಾರಣ ಸತ್ತು ಹೋದ ಬಳಿಕ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ" ಎಂದು ಅಭಿಪ್ರಾಯಪಟ್ಟರು.

"ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ನಾನು ಇನ್ನೂ ಮಾತಾಡಿಲ್ಲ. ಒಂದು ಸಲ ಕೇಳೋಣ. ಸದ್ಯ ನಾನು ಯಾವ ಪಕ್ಷದ ಸದಸ್ಯನ್ನಲ್ಲ, ಸ್ವತಂತ್ರನಿದ್ದೇನೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ರಾಜ್ಯಾಧ್ಯಕ್ಷ ಆದೆ. ಆಗ ಜೆಡಿಎಸ್ ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳಿದ್ದೆ‌. ನಾನು ಹಿಡಿದುಕೊಳ್ಳುವ ಪಕ್ಷದ ಧ್ವಜ ಬೇರೆ ಬೇರೆಯಾಗಬಹುದು. ಆದರೆ ನನ್ನ ಅಜೆಂಡಾ ಬದಲಾಗಿಲ್ಲ" ಎಂದು ಹೆಚ್.ವಿಶ್ವನಾಥ ಸ್ಪಷ್ಟಪಡಿಸಿದರು.

"ನನ್ನ ಬಳಿ ಸರ್ಕಾರದ ಭ್ರಷ್ಟಾಚಾರದ ಪೆನ್​ಡ್ರೈವ್​​ ಇದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಹೆಚ್‌ಡಿಕೆ ಆಸ್ತಿ ಎಷ್ಟಿದೆ ಎಂದು ಕೇಳಿ. ಆ ಆಸ್ತಿ ಹೇಗೆ ಬಂತು ಕೇಳಿ" ಎನ್ನುವ ಮೂಲಕ ಟಾಂಗ್ ಕೊಟ್ಟರು.

ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ಕೊರತೆ: ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.