ಅಥಣಿ: ಬೇಸಿಗೆಯಲ್ಲಿ ಅಥಣಿ ಮತ್ತು ಜಮಖಂಡಿ ಭಾಗದಲ್ಲಿ ಕೃಷ್ಣಾ ನದಿಗೆ ನೀರು ಬರಿದಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ನಿಂದ ಹಿಪ್ಪರಗಿ ಬ್ಯಾರೇಜ್ಗೆ ನೀರು ಹರಿಸಲಾಗುವುದು ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದರು.
ಹಿಪ್ಪರಗಿ ಬ್ಯಾರೇಜ್ ಕೆಳ ಭಾಗದ ನಲವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜಾಪುರ ಬ್ಯಾರೇಜ್ನಿಂದ ಹರಿದು ಬರುವ ನೀರನ್ನು ಹಿಪ್ಪರಗಿ ಬ್ಯಾರೇಜ್ ಕೆಳಗಿನ ಕೃಷ್ಣ ನದಿಗೆ ಮೇ ತಿಂಗಳ ಮೊದಲನೇ ವಾರ ಹರಿಸಲಾಗುವುದು ಎಂದು ಹೇಳಿದರು.
ಶಾಸಕರು ಕಾಣೆಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ:
ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅವರಷ್ಟು ಕೀಳುಮಟ್ಟದ ರಾಜಕೀಯ ನನಗೆ ಬರಲ್ಲ. ಅಧಿಕಾರಿಗಳು ಹಾಗೂ ಜನರ ಮಧ್ಯೆ ಇದೀನಿ. ಕೊರೊನಾ ತಡೆಯಲು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನಿಡಿದ್ದೇನೆ. ಪ್ರತಿನಿತ್ಯ ಅವರ ಮನೆಗೆ ಹೋಗಿ ಭೇಟಿ ಕೊಟ್ಟು ಬರುವುದು ನನಗೆ ಆಗಲ್ಲ. ಅಥಣಿ ಕಾಂಗ್ರೆಸ್ ಮುಖಂಡ ಹೇಗೆ ಇದ್ದಾರೆ ಎಂದು ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.