ಬೆಳಗಾವಿ : ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸಂಪುಟದ ಬಗ್ಗೆ ನಾನು ಈಗಾಗಲೇ ಐದು ಸಲ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆ ಆಗುವುದಿದ್ದರೆ ಮೊದಲೇ ಆಗುತ್ತಿತ್ತು. ಈವರೆಗೆ ಆಗಿಲ್ಲ ಅಂದರೆ ನೀವೇ ತಿಳಿದುಕೊಳ್ಳಿ ಎನ್ನುವ ಮೂಲಕ ಸಂಪುಟ ವಿಸ್ತರಣೆ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಬ್ಬಗಳು ಮುಗಿದವು ಅಂದರೆ ಇದು ಕೂಡ ಮುಗಿದ ಹಾಗೆಯೇ. ಆದರೆ, ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಮುನ್ಸೂಚನೆಯೂ ನನಗಿಲ್ಲ ಎಂದು ಹೇಳಿದರು.
ಬಿ. ಎಲ್ ಸಂತೋಷ್ ಪರ ಬ್ಯಾಟಿಂಗ್ : ನಾಯಕತ್ವ ಬದಲಾವಣೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿ. ಎಲ್ ಸಂತೋಷ್ ಅವರ ಹೇಳಿಕೆ ಪಕ್ಷ-ರಾಷ್ಟ್ರದ ದೃಷ್ಟಿಯಿಂದ ಇರುತ್ತದೆ. ಹೀಗಾಗಿ, ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆ ರೀತಿ ಪಕ್ಷ ಕೂಡ ಕೆಲಸ ಮಾಡುತ್ತಿರಬಹುದು. ಅವರು ಪಕ್ಷ ಮತ್ತು ಸಮಾಜದ ಚಿಂತನೆ ಮಾಡಿಯೇ ತಮ್ಮ ಅಭಿಪ್ರಾಯ ಹೇಳಿರಬಹುದು ಎಂದರು.
ಬಿ ಎಲ್ ಸಂತೋಷ್ ಮಾತಿನಲ್ಲಿ ಯಾವಾಗಲೂ ಅರ್ಥ ಇರುತ್ತದೆ. ನೂರಕ್ಕೆ ನೂರರಷ್ಟು ಈ ಬಗ್ಗೆ ಚಿಂತನೆ ಇರಬೇಕು. ಅದಕ್ಕೆ ಅವರು ಹೇಳಿರಬಹುದು. ಏನೂ ಇಲ್ಲದೇ ಹೇಳಿಕೆ ನೀಡುವ ಮನುಷ್ಯ ಅವರಲ್ಲ. ಯಾವುದೇ ರಾಜಕೀಯ ಪಕ್ಷದ ನಾಯಕರು ರಾಜಕೀಯ ಪ್ರೇರಿತ ಹೇಳಿಕೆ ನೀಡಬಹುದು. ಸಂತೋಷ್ ಜೀ ಮಾತುಗಳು ಆ ಮಟ್ಟದಲ್ಲಿ ಇಲ್ಲ. ಅವರು ಹೇಳಿದ್ದಾರೆ ಅಂದರೆ ನಿಶ್ಚಿತವಾಗಿಯೂ ಆ ರೀತಿ ಚಿಂತನೆ ಆಗಿರಬಹುದು. ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಹೇಳಿಕೆ ನಿಶ್ಚಿತ ಇರಬಹುದು ಎಂದು ಅವರು ಹೇಳಿದರು.
ಓದಿ: ಯಾವುದೇ ಫ್ರೂಪ್ ಕೊಡದೆ ಆರೋಪ ಮಾಡುತ್ತಿರುವುದು ಷಢ್ಯಂತ್ರ, ಮ್ಯಾಚ್ ಫಿಕ್ಸಿಂಗ್ ಅಷ್ಟೇ: ಸಚಿವ ಅಶ್ವತ್ಥ್ ನಾರಾಯಣ್