ಬೆಳಗಾವಿ: ಪ್ರಕಾಶ ಹುಕ್ಕೇರಿ ಶಾಸಕರಾಗಿ, ಸಂಸದರಾಗಿ ಹಾಗೂ ಸ್ಥಳೀಯ ಸಂಸ್ಥೆಯಿಂದ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಈಗ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು ಸರಿಯಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ನಗರದಲ್ಲಿ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ್ ಹುಕ್ಕೇರಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕಾಶ ಹುಕ್ಕೇರಿ ಶಿಕ್ಷಕರು ಅಲ್ಲ, ಆದರೆ ಒಳ್ಳೆಯ ರಾಜಕಾರಣಿ. ಅರುಣ್ ಶಹಾಪುರ ಒಳ್ಳೆಯ ಅಭ್ಯರ್ಥಿ. ಅವರ ಗೆಲುವು ನಿಶ್ಚಿತವಾಗಿದೆ. ಆದರೆ, ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ನಿಲ್ಲಬೇಕು ಅನ್ನುವುದು ನಮ್ಮ ಅಭಿಪ್ರಾಯ.
ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ. ಪ್ರಕಾಶ ಹುಕ್ಕೇರಿ ಶಾಸಕರಾಗಿ, ಸಂಸದರಾಗಿ ಹಾಗೂ ಸ್ಥಳೀಯ ಸಂಸ್ಥೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಈಗ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬಿಜೆಪಿಗೆ ಬೆಂಬಲ ವಿಚಾರಕ್ಕೆ 37 ಸದಸ್ಯರು, ಪರಿಷತ್ ಸದಸ್ಯರು ನಮ್ಮ ಪಕ್ಷದ ಸದಸ್ಯರು ಇದ್ದಾರೆ. ನಿನ್ನೆ ನಾಲ್ಕು ಜನ ಹೊಸದಾಗಿ ಆಯ್ಕೆ ಆಗಿದ್ದಾರೆ. ನಮಗೆ ಬಹುಮತದ ಕೊರತೆ ಇಲ್ಲ. ಯಾರ ಬೆಂಬಲವೂ ನಮಗೆ ಬೇಕಾಗಿಲ್ಲ. ಪಕ್ಷ ತೀರ್ಮಾನ ಮಾಡಿದ್ರೆ ನಾವೆಲ್ಲ ಬದ್ದವಾಗಿದ್ದು, ಈ ಚುನಾವಣೆಯಲ್ಲಿ 13 ಜನ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಹುಲಿ, ಆನೆ, ಸಿಂಹ ಇರೋ ಖಾತೆ ನಮ್ಮದು ಎಂದರು.
ಅರಣ್ಯ ಪ್ರದೇಶ ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಆಹಾರ ಖಾತೆಯಿಂದ ಬಡವರಿಗೆ 11ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಇದನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ನೋಡಬೇಕು. ಹಿಂದೆ ಯಾವ ಸರ್ಕಾರವೂ ಕೊಟ್ಟಿಲ್ಲ. ಮುಂದೆನೂ ಕೊಡಲು ಆಗಲ್ಲ ಎಂದು ಕತ್ತಿ ಹೇಳಿದರು.
ಓದಿ: ಡಿಕೆಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದಕ್ಕೆ ಹೆದರುವ ಅಗತ್ಯವಿಲ್ಲ : ಡಿ ಕೆ ಸುರೇಶ್