ETV Bharat / state

ಮಾಸ್ಕ್ ಧರಿಸುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಪ್ರಧಾನಿ ಹೇಳಿದ್ದಾರೆ.. ಅದಕ್ಕೆ ನಾನು ಮಾಸ್ಕ್​ ಹಾಕಿಲ್ಲ: ಸಚಿವ ಕತ್ತಿ ವರಸೆ

ಮಾಸ್ಕ್ ಧರಿಸುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಪ್ರಧಾನಿ ಹೇಳಿದ್ದಾರೆ ಅಂತಾ ಸಚಿವ ಕತ್ತಿ ಉಚ್ಚರಿಸಿದ್ದಾರೆ.

Minister Umesh Katti reaction, Minister Umesh Katti reaction on mask issue, Minister Umesh Katti news, ಸಚಿವ ಉಮೇಶ್​ ಕತ್ತಿ ಪ್ರತಿಕ್ರಿಯೆ, ಮಾಸ್ಕ್​ ಹಾಕಿಕೊಳ್ಳುವುದರ ಬಗ್ಗೆ ಸಚಿವ ಉಮೇಶ್​ ಕತ್ತಿ ಪ್ರತಿಕ್ರಿಯೆ, ಸಚಿವ ಉಮೇಶ್​ ಕತ್ತಿ ಸುದ್ದಿ,
ಸಚಿವ ಕತ್ತಿ ಪ್ರತಿಕ್ರಿಯೆ
author img

By

Published : Jan 18, 2022, 10:50 AM IST

ಅಥಣಿ: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಅಥವಾ ಬಿಡುವುದು ಅವರವರ ವೈಯಕ್ತಿಕ ವಿಚಾರ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅದಕ್ಕಾಗಿ ನಾನು ಮಾಸ್ಕ್​ ಧರಿಸಿಲ್ಲ ಎಂದು ಆಹಾರ ಇಲಾಖೆ ಮತ್ತು ಅರಣ್ಯ ಇಲಾಖೆ ಸಚಿವರಾದ ಉಮೇಶ ಕತ್ತಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಲಕ್ಷ್ಮಿ ಸಸ್ಯೋದ್ಯಾನ ಉದ್ಘಾಟನೆ ನೆರವೇರಿಸಿ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊರೊನಾ ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಲಾಗಿದೆ. ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಸ್ಕ್ ಧರಿಸುವುದು - ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಅದಕ್ಕೆ ನಾನು ಮಾಸ್ಕ್ ಧರಿಸುತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಸಚಿವ ಕತ್ತಿ ಪ್ರತಿಕ್ರಿಯೆ

ಬೆಳಗಾವಿ ವಿಸ್ತಾರವಾದ ಜಿಲ್ಲೆಯಾಗಿದೆ. ಇದರಲ್ಲಿ ಇನ್ನೂ ಮೂರು ಪ್ರತ್ಯೇಕ ಜಿಲ್ಲೆಯಾಗಬೇಕು. ಅದು ಪ್ರಗತಿಯಲ್ಲಿದೆ. ಇಷ್ಟರಲ್ಲಿ ಕಾರ್ಯಗತ ಆಗುತ್ತದೆ ಎಂದು ತಿಳಿಸಿದರು.

ಓದಿ: ಜೆಎನ್‌ಯುನ ಪಿಎಚ್‌ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ!

ರೈತರು ಶ್ರೀಗಂಧ ಬೆಳೆಯುವುದಕ್ಕೆ ಅರಣ್ಯ ಇಲಾಖೆಯಿಂದ ಕೆಲವು ನಿಯಮಗಳನ್ನು ಸಡಿಲ ಮಾಡಲಾಗಿದೆ. ಶ್ರೀಗಂಧ ಬೆಳೆಯಲಿಕ್ಕೆ ರೈತರಿಗೆ ಯಾವುದೇ ತೊಂದರೆಯಾಗದಂತೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ತರಬೇಕೆಂದು ಅರಣ್ಯ ಇಲಾಖೆ ಯೋಜನೆಯನ್ನು ರೂಪಿಸಿದೆ. ಇದರಿಂದ ಮತ್ತಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರು.

ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೆಲವೇ ದಿನಗಳಲ್ಲಿ ಅವರ ಸಂಬಳವನ್ನು ಬಿಡುಗಡೆ ಮಾಡಲಾಗುವುದು. ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಬೇಡಿಕೆ ತಕ್ಕಂತೆ ಆಹಾರ ಇಲಾಖೆಯಿಂದ ನಾವು ಜೋಳ ರಾಗಿ ವಿತರಣೆ ಮಾಡುವ ಯೋಜನೆ ಹಾಕಿದ್ದೇವೆ. ಇಷ್ಟರಲ್ಲಿ ಬೇಡಿಕೆ ತಕ್ಕಂತೆ ಆಯಾ ಪ್ರಾಂತ್ಯಗಳಿಗೆ ಜೋಳ, ರಾಗಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ತಕ್ಷಣ ನಿಮಗೆ ಹೇಳುತ್ತೇನೆ. ಇಷ್ಟರಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಕೆಲವರು ಸಂಕ್ರಾಂತಿ ನಂತರ ಹಾಗೂ ಜನವರಿ 24 ನಂತರ ಬದಲಾವಣೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಇನ್ನು ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಖಾಲಿ ಇರುವ ಸ್ಥಾನಗಳನ್ನು ತುಂಬುವುದು ಬಿಡುವುದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಉಮೇಶ್ ಕತ್ತಿ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.