ETV Bharat / state

ಕೆಲ ದಿನಗಳಲ್ಲೇ ಕಾಂಗ್ರೆಸ್, ಜೆಡಿಎಸ್‌ನ ನಾಯಕರು ಬಿಜೆಪಿ ಸೇರ್ತಾರೆ: ಸಚಿವ ಆರ್.ಅಶೋಕ್​

ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್​ ನಲ್ಲಿ ನಾವು 40 ರಿಂದ 50 ಸಾವಿರ ಮತಗಳ ಲೀಡ್‌ನಲ್ಲಿ ಜಯ ಸಾಧಿಸುತ್ತೇವೆ. ಕಾಂಗ್ರೆಸ್​ ಮೂರನೇ ಸ್ಥಾನಕ್ಕೆ ಹೋಗುತ್ತೆ. ಕೆಲ ದಿನಗಳಲ್ಲೇ ಕಾಂಗ್ರೆಸ್, ಜೆಡಿಎಸ್‌ನ ನಾಯಕರು ಬಿಜೆಪಿ ಸೇರ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಕಂದಾಯ ಸಚಿವ ಆರ್​.ಅಶೋಕ್​ ಹೇಳಿದ್ದಾರೆ.

belgavi
ಸಚಿವ ಆರ್​.ಅಶೋಕ್
author img

By

Published : Oct 19, 2020, 12:27 PM IST

ಬೆಳಗಾವಿ: ಕಾಂಗ್ರೆಸ್​ಗೆ ವೈಲೇಷನ್​ ಮಾಡೋದೆ ಒಂದು ಸಂಸ್ಕೃತಿ ಆಗಿಬಿಟ್ಟಿದ್ದು, ಕಾಂಗ್ರೆಸ್​​ನವರಿಗೆ ಅಷ್ಟೊಂದು ಕಾನೂನು ಜ್ಞಾನವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್​ ಟೀಕಿಸಿದರು.

ಕಾಂಗ್ರೆಸ್​ ವಿರುದ್ಧ ಸಚಿವ ಆರ್​.ಅಶೋಕ್ ವಾಗ್ದಾಳಿ

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್.ಆರ್. ನಗರದಲ್ಲಿ ಕಾಂಗ್ರೆಸ್‌ ನಾಯಕರಿಗೆ ಬೂತ್ ಏಜೆಂಟ್‌ರು ಸಿಗುತ್ತಿಲ್ಲ. ಅವರಿಗೆ ಹುಡುಕಲು ಕಷ್ಟ ಆಗುತ್ತಿದೆ‌. ಕಾರಣ ಈಗಾಗಲೇ ಆರ್.ಆರ್. ನಗರದ 9 ವಾರ್ಡ್‌ಗಳಲ್ಲಿನ ಎಲ್ಲ ಕಾರ್ಪೊರೇಟರ್ ಬಿಜೆಪಿ ಸೇರಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್‌ನ ನಾಯಕರು ಬಿಜೆಪಿ ಸೇರ್ತಿದ್ದಾರೆ. 40 ರಿಂದ 50 ಸಾವಿರ ಮತಗಳ ಲೀಡ್‌ನಲ್ಲಿ ಅಂತರದಲ್ಲಿ ನಾವು ಗೆಲ್ತೇವೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತೆ. ಬೂತ್ ಏಜೆಂಟರ್​‌ಗೂ ಹುಡುಕಾಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬರುತ್ತೆ ಎಂದು ಅಶೋಕ್​ ಭವಿಷ್ಯ ನುಡಿದರು.

ರಾಜರಾಜೇಶ್ವರಿ ನಗರದಲ್ಲಿ‌ ನಾನು ಮೂರು ಬಾರಿ ಎಂಎಲ್‌ಎ ಆಗಿ ಗೆದ್ದಿದ್ದೇನೆ. ಇದೀಗ ಆರ್.ಆರ್. ನಗರ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ ನಾನೇ ಇದ್ದೀನಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನವರು ಗೆಲುವು ತಮ್ಮದೇ ಅಂತಿದ್ದಾರೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷರು ಫೀಲ್ಡ್‌ಗಿಳಿದರೂ ಕಾರ್ಯಕರ್ತರು ಕೈಗೆ ಸಿಗುತ್ತಿಲ್ಲ ಎಂದು ಅಶೋಕ್​ ವ್ಯಂಗ್ಯವಾಡಿದ್ರು.

ಆರ್.ಆರ್. ನಗರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸ್ ವಿಚಾರ ಸಂಬಂಧ, ಚುನಾವಣಾ ಅಧಿಕಾರಿಗಳು ಕೇಸ್ ಹಾಕಿದ್ದಾರೆ, ಸರ್ಕಾರ ಅಲ್ಲ. ಕಾಂಗ್ರೆಸ್​ಗೆ ಅಷ್ಟೊಂದು ಕಾನೂನು ಜ್ಞಾನವಿಲ್ಲ. ವೈಲೇಷನ್ ಮಾಡೋದು ಕಾಂಗ್ರೆಸ್ ಸಂಸ್ಕೃತಿನಾ?.ಕೆ ಜಿ ಹಳ್ಳಿ, ಡಿ ಜೆ ಹಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ನಾಯಕ ಹಾಗೂ ಹಿಂದೆ ಮೇಯರ್ ಆಗಿದ್ದವರು ಮಾಡಿಸಿದ್ದಾರೆ ಎಂಬ ವರದಿ ಬಂದಿದೆ. ಕಾಂಗ್ರೆಸ್‌ನವರು ಕಾನೂನು ಉಲ್ಲಂಘನೆ ಮಾಡೋದೇ ದೊಡ್ಡ ಸಾಧನೆ ಅಂತಾ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಏನೂ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್.ಅಶೋಕ್ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.