ಚಿಕ್ಕೋಡಿ : ಮೈಕೋ ಕನ್ನಡ ಬಳಗ ಬಿಡದಿ ಘಟಕದ ವತಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಯಿತು.
ಬೆಂಗಳೂರಿನಿಂದ ಅಥಣಿ ತಲುಪಿದ ಐದಕ್ಕೂ ಹೆಚ್ಚು ಜನರ ತಂಡ ದಿನ ಬಳಕೆ ಸಾಮಗ್ರಿಗಳನ್ನು ಹಾಗೂ ಇತರೆ ವಸ್ತುಗಳನ್ನು ವಿತರಣೆ ಮಾಡಿದೆ. 2005ರಲ್ಲಿ ಪ್ರವಾಹ ಬಂದಾಗ ಬಾಗಲಕೋಟೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದ ಮೈಕೋ ಕನ್ನಡ ಬಳಗ, ಈ ಬಾರಿ ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯದ ಜೊತೆಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದೆ.