ETV Bharat / state

ಕುಂದಾನಗರಿಗೆ 'ಮಹಾ' ವಲಸೆ ಕಾರ್ಮಿಕರ ಆಗಮನ; ಕೋವಿಡ್‌ ಹರಡುವ ಭೀತಿ - ಬೆಳಗಾವಿಗೆ ಆಗಮಿಸುತ್ತಿರುವ ವಲಸೆ ಕಾರ್ಮಿಕರು

ಎಲ್‌ಟಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆಯಿಂದ ನಿತ್ಯ ನೂರಾರು ಜನರು ಜಿಲ್ಲೆಗೆ ಬರುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಕೇಂದ್ರ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮತ್ತು ಪ್ರಯಾಣಿಕರ ವಿವರಗಳನ್ನು ಪಡೆಯದೇ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ಆಂತಕ ವ್ಯಕ್ತಪಡಿಸಿದ್ದಾರೆ.

Migrant workers arriving in Belgavi from Maharashtra
ಬೆಳಗಾವಿಗೆ ಆಗಮಿಸುತ್ತಿರುವ ವಲಸೆ ಕಾರ್ಮಿಕರು
author img

By

Published : Apr 21, 2021, 12:22 PM IST

ಬೆಳಗಾವಿ: ಕುಂದಾನಗರಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಮಹಾರಾಷ್ಟ್ರದಿಂದ ನಗರದ ರೈಲ್ವೇ ನಿಲ್ದಾಣಕ್ಕೆ ಆಗಮಿಸುವ ವಲಸೆ ಕಾರ್ಮಿಕರನ್ನು ತಪಾಸಣೆ ಮಾಡದೇ ಜಿಲ್ಲಾಡಳಿತ ದಿವ್ಯನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಗೆ ಆಗಮಿಸುತ್ತಿರುವ ವಲಸೆ ಕಾರ್ಮಿಕರು

ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿರುವ ವಲಸೆ ಕಾರ್ಮಿಕರು, ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಹೊರ ರಾಜ್ಯದಿಂದ ಆಗಮಿಸುತ್ತಿರುವ ಜನರು ಗಡಿಜಿಲ್ಲೆ ಬೆಳಗಾವಿಗೆ ಕಂಟಕವಾಗುವ ಭೀತಿ ಮೂಡಿದೆ. ಎಲ್‌ಟಿಟಿ ಎಕ್ಸ್‌ಪ್ರೆಸ್ ರೈಲಿ‌ನಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆಯಿಂದ ನಿತ್ಯ ನೂರಾರು ಜನರು ಬರುತ್ತಿದ್ದಾರೆ. ಹೀಗೆ ಬಂದವರಿಗೆ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮತ್ತು ಪ್ರಯಾಣಿಕರ ವಿವರಗಳನ್ನು ಪಡೆಯುವ ವ್ಯವಸ್ಥೆ ಇಲ್ಲ.

ನಿನ್ನೆಯಷ್ಟೇ ಜಿಲ್ಲೆಯ ಕಾಡಂಚಿನ ಗ್ರಾಮದ 146 ಜನರಲ್ಲಿ ಮಾರಣಾಂತಿಕ ವೈರಸ್ ಇರೋದು ದೃಢವಾಗಿತ್ತು. ಮಹಾರಾಷ್ಟ್ರದಿಂದ ಸ್ವಗ್ರಾಮಕ್ಕೆ ಬಂದಿದ್ದ ಏಳೆಂಟು ಜನರಿಂದ ಇಷ್ಟೊಂದು ಜನರಿಗೆ ವೈರಸ್‌ ಹರಡಿತ್ತು. ಹೀಗಾಗಿ, ಮಹಾರಾಷ್ಟ್ರದಿಂದ ಆಗಮಿಸಿದವರ ವಿವರ ಪಡೆದುಕೊಂಡು ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಕೇಂದ್ರ ತೆರೆಯಬೇಕಿದೆ. ಇಲ್ಲವಾದರೆ ಕುಂದಾನಗರಿಗೆ ಅಪಾಯ ಎದುರಾಗಲಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.