ETV Bharat / state

ಗಡಿವಿವಾದದ ಉರಿವ ಬೆಂಕಿಗೆ ಎಂಇಎಸ್ ತುಪ್ಪ; ಬೆಳಗಾವಿಗೆ ಬರುವಂತೆ 'ಮಹಾ' ಸಚಿವರಿಗೆ ಪತ್ರ - ಬೆಳಗಾವಿಗೆ ಬರುವಂತೆ ಮಹಾ ಸಚಿವರಿಗೆ ಪತ್ರ

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ವಿಚಾರಣೆಯ ಬೆನ್ನಲ್ಲೇ ಇಬ್ಬರನ್ನು ಮಹಾರಾಷ್ಟ್ರ ಸರ್ಕಾರ ಸಮನ್ವಯ ಸಚಿವರನ್ನಾಗಿ ನೇಮಿಸಿತ್ತು.

ಬೆಳಗಾವಿಗೆ ಬರುವಂತೆ 'ಮಹಾ' ಸಚಿವರಿಗೆ ಪತ್ರ
ಬೆಳಗಾವಿಗೆ ಬರುವಂತೆ 'ಮಹಾ' ಸಚಿವರಿಗೆ ಪತ್ರ
author img

By

Published : Nov 29, 2022, 9:50 AM IST

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ‌ ಅಂತಿಮ‌ ವಿಚಾರಣೆ ನವೆಂಬರ್ 30ಕ್ಕೆ(ನಾಳೆ) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದೀಗ ವಿವಾದದ ಉರಿಯುವ ಬೆಂಕಿಗೆ ಎಂಇಎ ತುಪ್ಪ ಸುರಿಯುವ ಕೃತ್ಯಕ್ಕೆ ಮುಂದಾಗಿದೆ.

ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ಆರಂಭಿಸಿರುವ ಎಂಇಎಸ್​, ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವದ್ವಯರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ ಪತ್ರ ಬರೆದು, ಬೆಳಗಾವಿಗೆ ಬರುವಂತೆ ಆಹ್ವಾನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಉಭಯ ರಾಜ್ಯಗಳ ಗಡಿವಿವಾದ ವಿಚಾರಣೆಯ ನಡುವೆ ಇಬ್ಬರನ್ನು ಮಹಾರಾಷ್ಟ್ರ ಸರ್ಕಾರ ಸಮನ್ವಯ ಸಚಿವರನ್ನಾಗಿ ನೇಮಿಸಿದೆ. ಗಡಿವಿವಾದ ಅಲ್ಲದೇ ಇತರ ಸಮಸ್ಯೆಗಳ ಬಗ್ಗೆ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸುವುದು ಅಗತ್ಯವಿದೆ. ಹೀಗಾಗಿ ಬೆಳಗಾವಿಗೆ ಇಬ್ಬರು ಸಚಿವರು ಆಗಮಿಸಿ ಚರ್ಚಿಸಬೇಕಿದೆ‌ ಎಂದು‌ ಪತ್ರದಲ್ಲಿ ಎಂಇಎಸ್ ಮುಖಂಡರು ಮನವಿ ಮಾಡಿದ್ದಾರೆ. ಎಂಇಎಸ್ ‌ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಹಾ ‌ಗಡಿ‌ ಸಚಿವರು ಡಿಸೆಂಬರ್ ‌3ಕ್ಕೆ‌ ಬೆಳಗಾವಿಗೆ ಬರುವುದಾಗಿ‌ ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಸೇನೆ ವಕ್ತಾರ ಸಂಜಯ್​ ರಾವತ್​ಗೆ ಬೆಳಗಾವಿ ಕೋರ್ಟ್​ನಿಂದ ಸಮನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.