ಬೆಳಗಾವಿ: ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು, ಇದೀಗ ಪ್ರಧಾನಿಗೆ ಪತ್ರ ಅಭಿಯಾನ ಪ್ರಾರಂಭಿಸಿದ್ದಾರೆ.
ಎಂಇಎಸ್ನ ಯುವ ಘಟಕ ಈ ಅಭಿಯಾನ ನಡೆಸುತ್ತಿದೆ. ಪತ್ರ (ಪೋಸ್ಟ್ ಕಾರ್ಡ್) ಅಭಿಯಾನದಲ್ಲಿ ಬೆಳಗಾವಿ, ನಿಪ್ಪಾಣಿ, ಖಾನಾಪುರ ಮತ್ತು ಬೀದರ್ ಜಿಲ್ಲೆಯ ಗಡಿ ಭಾಗದ 865 ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ.
ಭಾಷಾವಾರು ಪ್ರಾಂತ ರಚನೆಯಾದ ದಿನದಿಂದ ಮರಾಠಿ ಭಾಷಿಕರಿಗೆ ಅನ್ಯಾಯ ಆಗುತ್ತಿದೆ. 1956 ರಿಂದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ. 65 ವರ್ಷಗಳಿಂದ ಕನ್ನಡ ಭಾಷಿಕ ರಾಜ್ಯದಲ್ಲಿ ಗಡಿ ಭಾಗದ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಎಂಇಎಸ್ ಆರೋಪಿಸಿದೆ.
ಗಡಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಗಮನಹರಿಸಿ ಇತ್ಯರ್ಥಪಡಿಸಬೇಕು. ಗಡಿ ಭಾಗದ 40 ಲಕ್ಷ ಮರಾಠಿಗರನ್ನು ಮಹಾರಾಷ್ಟ್ರಕ್ಕೆ ಸೇರಿಸಿ ನ್ಯಾಯ ಕೊಡಿಸಬೇಕು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದೆ. ಈಗಾಗಲೇ 11 ಸಾವಿರ ಪತ್ರಗಳನ್ನು ಪೋಸ್ಟ್ ಮಾಡಿರುವುದಾಗಿ ಎಂಇಎಸ್ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರ ರಚನೆ ಕಾರಣೀಕರ್ತರಿಗೆ ಬೊಮ್ಮಾಯಿ ಸಂಪುಟದಿಂದ ಗೇಟ್ ಪಾಸ್