ETV Bharat / state

ಬೆಳಗಾವಿಯಲ್ಲಿ MES ಅವನತಿ.. ಶಿವಸೇನೆ ಕಂಗಾಲು: ಬಿಜೆಪಿ ವಿರುದ್ಧ ರಾವತ್​ ಗರಂ - ಬೆಳಗಾವಿ ಪಾಲಿಕೆ ಚುನಾವಣೆ

ಬೆಳಗಾವಿಯಲ್ಲಿ ಎಂಇಎಸ್​ ಹೀನಾಯ ಸೋಲು ಕಂಡಿದ್ದಕ್ಕೆ ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂಜಯ್ ರಾವತ್
ಸಂಜಯ್ ರಾವತ್
author img

By

Published : Sep 9, 2021, 8:57 AM IST

Updated : Sep 9, 2021, 12:09 PM IST

ಬೆಳಗಾವಿ: ಮಹಾನಗರ ‌ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಮುಗ್ಗರಿಸಿದ್ದಕ್ಕೆ ಮಹಾರಾಷ್ಟ್ರದ ಶಿವಸೇನೆ ಕಂಗಾಲಾಗಿದೆ. ಎಂಇಎಸ್ ಸೋಲನ್ನು ಮರಾಠಿ ಭಾಷಿಕರ ಸೋಲೆಂದು ಬಿಂಬಿಸಲು ಶಿವಸೇನೆ ಯತ್ನಿಸುತ್ತಿದೆ. ಆ ಮೂಲಕ ಮತ್ತೆ ಭಾಷಾ ವಿವಾದಕ್ಕೆ ಆಸ್ಪದ ನೀಡುವಂತೆ ವರ್ತಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಾಲಿಕೆ ಚುನಾವಣೆ ಫಲಿತಾಂಶ ವಿಚಾರವನ್ನು ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಸ್ತಾಪಿಸಲಾಗಿದೆ. 'ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ!' ಎಂಬ ಅಡಿ ಬರಹದಲ್ಲಿ ಸಂಪಾದಕೀಯ ಬರೆಯಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಬಳಸಿ ಬೆಳಗಾವಿಯ ಮರಾಠಿಗರ ಹಾದಿ ತಪ್ಪಿಸುವ ಯತ್ನಕ್ಕೆ ಶಿವಸೇನೆ ಕೈ ಹಾಕಿದೆ ಎಂಬ ಮಾತುಗಳು ಬೆಳಗಾವಿಯಲ್ಲಿ ಕೇಳಿ ಬರುತ್ತಿವೆ.

ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು. ಆದರೆ, ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲ ಜ‌ನರು ಮಹಾರಾಷ್ಟ್ರದಲ್ಲೂ ಇದ್ದರು. ಅದೇ ಪ್ರವೃತ್ತಿ ಜ‌‌ನ ಬೆಳಗಾವಿಯಲ್ಲಿ ಮರಾಠಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ.

ಗಡಿ ಹೋರಾಟದ ಹುತಾತ್ಮರ ಶಾಪ ಅವರಿಗೆ ತಟ್ಟುತ್ತದೆ. ಗಡಿ ಹೋರಾಟ ಮುಂದುವರಿಯುತ್ತೆ, ಮರಾಠಿಗರು ಒಗ್ಗೂಡಿ ಮತ್ತೆ ಮುಂದೆ ಬರುತ್ತಾರೆ. ಬೆಳಗಾವಿಯ ಪಾಲಿಕೆ ಸೋಲಿನಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ ಎಂದು ಉಲ್ಲೇಖಿಸಿದೆ.

ಸಾಮ್ನಾ ಸಂಪಾದಕೀಯ ಬರಹ
ಸಾಮ್ನಾ ಸಂಪಾದಕೀಯ ಬರಹ

ಶಿವಸೇನೆ ಕಿಡಿಕಿಡಿ

ಬೆಳಗಾವಿಯಲ್ಲಿ ಎಂಇಎಸ್ ಸೋಲಿನಿಂದ ಕಂಗೆಟ್ಟ ಶಿವಸೇನೆ ಮುಖಂಡ ಸಂಜಯ್ ರಾವತ್, ಬಿಜೆಪಿ ವಿರುದ್ಧ ಸರಣಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸ್ವಾಗತಿಸಿದ ಮಹಾರಾಷ್ಟ್ರ ಬಿಜೆಪಿ ವಿರುದ್ಧ ರಾವತ್ ಗರಂ ಆಗಿದ್ದಾರೆ.

ಬೆಳಗಾವಿಯಲ್ಲಿ ಗೆದ್ದ ಬಿಜೆಪಿಯ ಮರಾಠಿ ಭಾಷಿಕ ಸದಸ್ಯರನ್ನು ಮುಂಬೈಗೆ ಕರೆ ತನ್ನಿ. ಹುತಾತ್ಮ ಸ್ಮಾರಕ ಎದುರು ಶಿರಭಾಗಿ ಮರಾಠಿ ಅಸ್ಮಿತೆಯ ಪ್ರಮಾಣ ವಚನ ಬೋಧಿಸಿ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತಾ ಎರಡು ಸಾಲಿನ ಠರಾವು ಪಾಸ್ ಮಾಡಿ. ಅಹಂಕಾರ ಬದಿಗೊತ್ತಿ ಇಷ್ಟು ಮಾಡಿ ಎಂದು ಸಂಜಯ್ ರಾವತ್ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು ಎಂಇಎಸ್ ​ಅನ್ನು ಬೆಂಬಲಿಸಿತ್ತು. ಆದ್ರೆ, ಎಂಇಎಸ್ ವಿರುದ್ಧ ಮತ ಹಾಕಿ ಭಾಷಾ ರಾಜಕಾರಣಕ್ಕೆ ಬೆಳಗಾವಿ ಜನ ಇತಿಶ್ರೀ ಹಾಡಿದ್ದಾರೆ. 58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 10 ಕಾಂಗ್ರೆಸ್, 10 ಪಕ್ಷೇತರ, ಓರ್ವ ಎಐಎಂಐಎಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕೇವಲ ಎರಡು ವಾರ್ಡ್ ಗಳಲ್ಲಿ ಗೆದ್ದು ಎಂಇಎಸ್ ಹೀನಾಯ ಸೋಲನ್ನನುಭವಿಸಿದೆ.

ರಾವತ್ ವಿವಾದಾತ್ಮಕ ಹೇಳಿಕೆ

ಬೆಳಗಾವಿಯಲ್ಲಿನ ಗೆಲುವನ್ನು ಮಹಾರಾಷ್ಟ್ರ ಬಿಜೆಪಿ ಸ್ವಾಗತಿಸಿದ್ದಕ್ಕೆ ಶಿವಸೇನೆ ಕಿಡಿ ಕಾರಿದ್ದು, ಶಿವಸೇನೆ ಮುಖಂಡ ಸಂಜಯ್ ರಾವತ್‌ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸೋತಿದೆ. ಬೆಳಗಾವಿಯಲ್ಲಿ ಕೇಸರಿ ಧ್ವಜ ಹಾರಿದೆ ಎಂದು ಮಹಾರಾಷ್ಟ್ರದ ಬಿಜೆಪಿ ಪುಡಾರಿಗಳು ಹೇಳ್ತಿದ್ದಾರೆ. 'ಹಾಗಿದ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಅಂತಾ ಠರಾವು ಪಾಸ್ ಮಾಡಿ. 'ಬೆಳಗಾವಿ ಮಹಾನಗರ ಪಾಲಿಕೆಯ ಮೊದಲ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಬೇಕು. ಈ ಕೆಲಸ ಮಾಡಿದ್ದರೆ ಮಾತ್ರ ನೀವು ಹಾರಿಸಿದ ಕೇಸರಿ ಧ್ವಜ ಸತ್ಯ ಎಂದು ಬಿಜೆಪಿಗೆ ಸಂದೇಶ ರವಾನಿಸಿದ್ದಾರೆ. ಶಿವಸೇನೆ ಮುಖಂಡನ ಫೇಸ್‌ಬುಕ್ ಪೋಸ್ಟ್ ಅನ್ನು ಸ್ಥಳೀಯ ಎಂಇಎಸ್ ಸದಸ್ಯರು ಶೇರ್ ಮಾಡುತ್ತಿದ್ದಾರೆ.

Last Updated : Sep 9, 2021, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.