ಚಿಕ್ಕೋಡಿ: ಮಾಯಪ್ಪಾ ಪೂಜಾರಿ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸಿ ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ಮಾಯಪ್ಪ ಲಗಮಪ್ಪ ಪೂಜಾರಿ, ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ 2013 ರಿಂದ 2016 ರವರೆಗೆ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ವಿಶ್ವವಿದ್ಯಾಲಯದ ಕನ್ನಡ ಮಾಧ್ಯಮದಲ್ಲಿ 2 ನೇ ಶ್ರೇಣಿ ಗಳಿಸಿದ್ದು, ಇದೀಗ ನ್ಯಾಯಾಧೀಶರರಾಗಿ ನೇಮಕಗೊಂಡಿದ್ದಾರೆ.
ಈ ಮೂಲಕ ಚಿಕ್ಕೋಡಿ ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ.