ETV Bharat / state

ಬೆಳಗಾವಿಯಲ್ಲೇ ಸರ್ಕಾರದ ವಾಹನ ಅಡ್ಡಗಟ್ಟಿದ ಕಿಡಿಗೇಡಿಗಳು.. ಕಲ್ಲು ತೂರಿ ಉದ್ಧಟತನ - ಬೆಳಗಾವಿಯಲ್ಲೇ ಸರ್ಕಾರದ ವಾಹನ ಅಡ್ಡಗಟ್ಟಿದ ಕಿಡಿಗೇಡಿಗಳು

ಬೆಳಗಾವಿಯಲ್ಲಿ ಅಧಿವೇಶನದ ಆರಂಭಕ್ಕೂ ಮುನ್ನವೇ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯ ಸರ್ಕಾರದ ವಾಹನವೊಂದನ್ನು ಅಡ್ಡಗಟ್ಟಿ ಕಲ್ಲು ತೂರಾಟ ಮಾಡಲಾಗಿದೆ.

Rebellion of Marathi speakers
Rebellion of Marathi speakers
author img

By

Published : Dec 15, 2022, 2:32 PM IST

Updated : Dec 15, 2022, 2:53 PM IST

ಬೆಳಗಾವಿಯಲ್ಲೇ ಸರ್ಕಾರದ ವಾಹನ ಅಡ್ಡಗಟ್ಟಿದ ಕಿಡಿಗೇಡಿಗಳು

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ನಡೆದಿದೆ. ಅಧಿವೇಶನ ಆರಂಭಕ್ಕೂ ಮುನ್ನವೇ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕರ್ತವ್ಯಕ್ಕೆ ಬರುತ್ತಿದ್ದ ಸಿಬ್ಬಂದಿಯ ವಾಹನದ ಮೇಲೆ ಕಲ್ಲು ತೂರುವ ಮೂಲಕ ವಿಕೃತಿ ಮೆರೆದಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ದುರ್ಘಟ‌ನೆ ನಡೆದಿದೆ.

ಅಧಿವೇಶನ ನಿಮಿತ್ತ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ವಾಹನವೊಂದು ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿತ್ತು. ಕರ್ನಾಟಕ ಸರ್ಕಾರ ಎಂದು ಬರೆದಿರುವ ಬೋರ್ಡ್​ ನೋಡಿದ ಕಿಡಿಗೇಡಿಗಳು ವಾಹನಕ್ಕೆ ಅಡ್ಡಗಟ್ಟಿ ಕಲ್ಲು ತೂರಿದ್ದಾರೆ. ಬಳಿಕ ಚಾಲಕನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಬೊಲೆರೋ ವಾಹನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ವಾಹನದ ಚಾಲಕ ಚೇತನ್ ಎಂಬುವವರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಚಾಲಕ ಚೇತನ್ ತಕ್ಷಣವೇ ವಾಹನ ಚಲಾಯಿಸಿಕೊಂಡು ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ.

ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಸಚಿವ ಅಮಿತ್ ಶಾ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬಿಜೆಪಿ ಸೇರಲು ಹಣದ ಆಮಿಷ.. ಬಾಂಬೆ ಡೈರಿಯ ಮೊದಲ ಅಧ್ಯಾಯ ಬಿಚ್ಚಿಟ್ಟ ಹೆಚ್ ​ವಿಶ್ವನಾಥ್

Last Updated : Dec 15, 2022, 2:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.