ಚಿಕ್ಕೋಡಿ(ಬೆಳಗಾವಿ) : ಸಾಲಭಾದೆ ತಾಳಲಾರದೇ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಟವರಿನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಂಗವಾತಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಂಗವಾತಿ ಗ್ರಾಮದ ನಿವಾಸಿ ಸಂಜಯ್ ಕಲಗೌಡ ಪಾಟೀಲ್(35) ಮೃತ ವ್ಯಕ್ತಿ.
ಮೃತ ವ್ಯಕ್ತಿ ಖಾಸಗಿ ಹಾಗೂ ಬ್ಯಾಂಕ್ ಗಳು ಸೇರಿದಂತೆ ಕೈತುಂಬಾ ಮಾಡಿಕೊಂಡಿದ್ದನಂತೆ. ಇತ್ತ ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆಗೆ ಶರಣಾಗಲು ಮೊಬೈಲ್ ಟವರ್ ಏರಿದ್ದಾನೆ. ಈ ವೇಳೆ, ಸ್ಥಳೀಯರು ತಿಳಿ ಹೇಳಿದ್ದಾರೆ. ಈ ವೇಳೆ ಟವರ್ನಿಂದ ಕೆಳಗೆ ಇಳಿಯುವಾಗ ಆಯತಪ್ಪಿ ನೆಲಕ್ಕೆ ಬಿದ್ದು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರೂ, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಪ್ರೇಯಸಿ ಜೊತೆ ಗಂಡ ಎಂಜಾಯ್: ತವರು ಮನೆಯಲ್ಲಿ ಹೆಂಡತಿ ಆತ್ಮಹತ್ಯೆ