ಚಿಕ್ಕೋಡಿ: ಕಾವೇರಿ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುತ್ತವೆ. ಆದರೆ, ಕೃಷ್ಣಾ ನದಿ ಭಾಗದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಭಾಗವನ್ನು ಸರ್ಕಾರಗಳು ನಿರ್ಲಕ್ಷ ವಹಿಸುತ್ತಿವೆ ಎಂದು ಚಿಕ್ಕೋಡಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾವ್ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಕಾವೇರಿ ವಿಚಾರವನ್ನು ಅಷ್ಟೇ ನೋಡದೆ ಕೃಷ್ಣಾ ನದಿ ಸಮಸ್ಯೆ ಮೇಲೆಯೂ ಬೆಳಕು ಚೆಲ್ಲಲಿ ಎಂದರು.
ಕಾವೇರಿ, ಕೃಷ್ಣಾ ಎರಡು ನದಿಗಳು ಕರ್ನಾಟಕ ಎರಡು ಕಣ್ಣುಗಳು ಇದ್ದ ಹಾಗೆ, ಕಳೆದ ಐವತ್ತು ವರ್ಷಗಳಿಂದ ಕೃಷ್ಣಾ ತೀರದಲ್ಲಿ ಹಲವಾರು ಸಮಸ್ಯೆಗಳು ಉಲ್ಬಣವಾಗಿದೆ. ಇನ್ನು ಪುನರ್ವಸತಿ ಕಲ್ಪಿಸಬೇಕು, ಪ್ರತಿ ವರ್ಷ ಪ್ರವಾಹ , ಪ್ರತಿ ವರ್ಷ ನದಿ ಬತ್ತಿ ಹೋಗುವುದು ಈ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು. ಕಾವೇರಿ ಕೃಷ್ಣಾ ನದಿಗಳು ರಾಜ್ಯದ ಎರಡು ಕಣ್ಣುಗಳು ಇದ್ದಂತೆ, ಕೃಷ್ಣಾ ನದಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಈ ಭಾಗದಲ್ಲಿ ನೀರಾವರಿ ಯೋಜನೆಗಳು ಮರೀಚಿಕೆಯಾಗಿವೆ. ಕೃಷ್ಣಾ ಬೇಸಿಗೆ ಸಂದರ್ಭದಲ್ಲಿ ಬತ್ತಿ ರೈತರು ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ, ಅದೆಷ್ಟೋ ರೈತರು ಕೃಷಿ ಜಮೀನು, ಮನೆಮಠ ಮಾರಿದರು, ಸಾಲ ತಿರುತಿಲ್ಲ. ಸರ್ಕಾರ ಕಾವೇರಿಗೆ ಕೊಡುವ ಮಹತ್ವವನ್ನು ಕೃಷ್ಣಾಗೆ ಕೊಡಲಿ ಎಂದು ಒತ್ತಾಯಿಸಿದ ಅವರು, ಕಾವೇರಿ ನೀರು ತಮಿಳುನಾಡಿಗೆ ಹರಿಯಬಾರದೆಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಮ್ಮ ಪಕ್ಷದಿಂದ ಬೆಂಬಲವಿದೆ ಇದೆ ಎಂದು ತಿಳಿಸಿದರು.
ಚುನಾವಣೆ ಬಂದಾಗ ರಮೇಶ್ ಕತ್ತಿ ಆ್ಯಕ್ಟಿವ್ ವಿಚಾರ: ಚುನಾವಣೆ ಬಂದಾಗ ನಾನು ಕ್ಷೇತ್ರ ಪ್ರವಾಸ ಮಾಡುತ್ತೇನೆ ಎಂಬುದು ಸುಳ್ಳು. ಸಮಯ ಸಿಕ್ಕಾಗಲ್ಲ ಎಲ್ಲ ಕ್ಷೇತ್ರಗಳಲ್ಲಿ ನಾನು ಸುತ್ತಾಡುತ್ತೇನೆ. ನಾನು ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಕೆಲವು ಕಡೆ ಮಾತುಗಳು ಕೇಳಿ ಬರುತ್ತಿವೆ. ಆದರೆ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತನಾಗಿದ್ದೇನೆ.
ರಾಜ್ಯಸಭಾ ಸದಸ್ಯ ಸ್ಥಾನದಿಂದ ವಂಚಿತನಾಗಿದ್ದೇನೆ, ಎಂಎಲ್ಸಿ ಸ್ಥಾನದಿಂದ ವಂಚಿತನಾಗಿದ್ದೇನೆ. ಇವೆಲ್ಲವನ್ನೂ ಗಮನಲಿಟ್ಟುಕೊಂಡು ನಮ್ಮ ಪಕ್ಷ ನನಗೆ ಟಿಕೆಟ್ ಕೊಡುತ್ತೆ ಎಂಬ ಭರವಸೆಯಲ್ಲಿದ್ದೇನೆ. ಭಾರತೀಯ ಜನತಾ ಪಕ್ಷ ನನಗೆ ಟಿಕೆಟ್ ಕೊಡುವ ವಿಶ್ವಾಸ ನನ್ನಲ್ಲಿದೆ. ಒಂದು ವೇಳೆ ಕೊಡದಿದ್ದರೆ ಜಿಲ್ಲೆಯ ಹಿರಿಯರ ಜೊತೆ ನಾನು ಸಮಾಲೋಚನೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ ವಿಚಾರ: ರಾಜಕಾರಣ ಹರಿಯುತ್ತಿರುವ ನೀರು ಅದು ಒಂದು ಕಡೆ ಇದ್ದರೆ ಕೆಡುತ್ತದೆ. ಹರಿಯುತ್ತಿರುವ ನೀರು ಒಂದೇ ಕಡೆ ನಿಲ್ಲುವುದಿಲ್ಲ, ನಿಂತರೆ ಅದು ದುರ್ವಾಸನೆ ಬರುತ್ತದೆ, ಇದರಿಂದ ಸದ್ಯ ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂದು ರಮೇಶ್ ಕತ್ತಿ ಹೇಳಿದರು.
ಇವತ್ತು ಲಕ್ಷ್ಮಣ್ ಸವದಿ ಅವರ ಭೇಟಿ ವಿಚಾರ ಅಷ್ಟೊಂದು ಮಹತ್ವವಿಲ್ಲ. ಯಾಕೆಂದ್ರೆ ಅವರು ನಮ್ಮ ಸಹೋದರನ ಸ್ಥಾನದಲ್ಲಿದ್ದಾರೆ. ಕಳೆದ 35 ವರ್ಷಗಳಿಂದ ಅವರ ಜೊತೆ ನಾವು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದೇವೆ. ನಮ್ಮ ಅಣ್ಣ ಉಮೇಶ್ ಕತ್ತಿ ಅವರು ತೀರಿ ಹೋದ ಮೇಲೆ, ಶಾಸಕ ಸವದಿ ಅವರಿಂದ ನಾನು ಸಲಹೆಯನ್ನು ಪಡೆದುಕೊಳ್ಳುತ್ತೇನೆ. ಹಲವಾರು ವಿಚಾರಗಳನ್ನು ಅವರ ಜೊತೆ ಚರ್ಚೆ ಮಾಡುತ್ತೇನೆ. ಇವತ್ತಿನ ಭೇಟಿ ರಾಜಕೀಯ ಅರ್ಥ ಕೊಡುವುದು ಬೇಡ. ಇವತ್ತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ಇದನ್ನೂಓದಿ:ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ: ಶಾಸಕ ಲಕ್ಷ್ಮಣ ಸವದಿ