ETV Bharat / state

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿದ್ದ​ ಫೋಟೋ ವೈರಲ್​: ಅರಣ್ಯಾಧಿಕಾರಿ ಪ್ರತಿಕ್ರಿಯೆ ಹೀಗಿದೆ.. - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್‌ ಧರಿಸಿದ್ದ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್‌

author img

By ETV Bharat Karnataka Team

Published : Oct 26, 2023, 9:49 PM IST

ಬೆಳಗಾವಿ: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್​ ವಿಚಾರ ಬಹಳಷ್ಟು ಸದ್ದು ಮಾಡುತ್ತಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಪುತ್ರ ಮೃಣಾಲ್‌ ಮತ್ತು ಅಳಿಯ ರಜತ್‌ ಉಳ್ಳಾಗಡ್ಡಿಮಠ ಅವರು ಕೊರಳಲ್ಲಿ ಹುಲಿ ಉಗುರಿನ ಮಾದರಿಯ ಪೆಂಡೆಂಟ್​ ಧರಿಸಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಮದುವೆ ಸೇರಿ ಮತ್ತಿತರ ಸಮಾರಂಭಗಳಲ್ಲಿ ಮೃಣಾಲ್ ಒಂದೊಂದು ಹುಲಿಯ ಉಗುರಿನ ಪೆಂಡೆಂಟ್​ ಧರಿಸಿದ್ದ ಫೋಟೋ ವೈರಲ್​ ಆಗಿದೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಜತ್‌ ಉಳ್ಳಾಗಡ್ಡಿಮಠ​ ಪ್ರತಿಕ್ರಿಯೆ: "ಇದು ಹುಲಿ ಉಗುರು ಅಲ್ಲ. ಅದರ ಮಾದರಿ ಅಷ್ಟೇ. ಮದುವೆ ಸಮಯದಲ್ಲಿ ಫೋಟೋ ಶೂಟ್​ಗಾಗಿ ಬಳಸಿದ್ದೆ. ಈಗ ವೈರಲ್ ಆಗಿದೆ. ಆದರೆ ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳಾಗಲಿ,‌ ಪೊಲೀಸರಾಗಲಿ ನನ್ನಿಂದ ಮಾಹಿತಿ ಕೇಳಿಲ್ಲ. ನೋಟಿಸ್ ಕೂಡ ನೀಡಿಲ್ಲ."

ಅರಣ್ಯ ಇಲಾಖೆ ಅಧಿಕಾರಿ ಪ್ರತಿಕ್ರಿಯೆ: ಬೆಳಗಾವಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಕಲ್ಲೋಳಿಕರ್ ಪ್ರತಿಕ್ರಿಯಿಸಿ, "ಮೃಣಾಲ್ ಹೆಬ್ಬಾಳ್ಕರ್ ಪೆಂಡೆಂಟ್​ ವಿಚಾರ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಗೆ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿ, ಸರ ತರಿಸಿಕೊಂಡು ತಪಾಸಣೆ ಮಾಡಲಾಗುವುದು. ಪ್ರಕರಣದ ಸತ್ಯಾಸತ್ಯತೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದರು.

ಇದನ್ನೂ ಓದಿ: ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್​: ಹುಬ್ಬಳ್ಳಿ ಕಾಂಗ್ರೆಸ್​ ಮುಖಂಡನ ಸ್ಪಷ್ಟನೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.