ETV Bharat / state

ಎಲ್ಲಾ ಉಪಚುನಾಣೆಯಲ್ಲೂ ಗೆಲುವು ನಮ್ಮದೇ: ಲಕ್ಷ್ಮಣ್ ಸವದಿ

ಬೆಳಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್​​​-ಬಿಜೆಪಿ ಜಿದ್ದಿಗೆ ಬಿದ್ದಿವೆ. ಮೂರು ಎಲ್ಲಾ ಸ್ಥಾನಗಳಲ್ಲಿ ಜಯ ಗಳಿಸುತ್ತೇವೆ, ಗೆಲುವಿಗಾಗಿ ತಂತ್ರ ರೂಪಿಸುತ್ತಿದ್ದೇವೆ ಎಂದು 'ಈಟಿವಿ ಭಾರತ'ಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Lakshman savadi react about by poll
ಲಕ್ಷ್ಮಣ್ ಸವದಿ
author img

By

Published : Mar 27, 2021, 3:24 PM IST

ಅಥಣಿ (ಬೆಳಗಾವಿ): ಬಸವಕಲ್ಯಾಣ ಉಪಚುನಾವಣೆಯಲ್ಲಿ ಕೆಲವು ಅಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಅಸಮಾಧಾನ ಹೊಂದಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ಅಥಣಿಯಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಬಿಜೆಪಿಯಿಂದ ಶರಣು ಸಲಗರ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕೆಲವರಿಗೆ ಸಹಜವಾಗಿಯೇ ಅಸಮಾಧಾನವಿದೆ. ಮುಂದೆ ಅದೆಲ್ಲಾ ಸರಿಯಾಗಲಿದೆ. ಶರಣು ಸಲಗರ ಅಧಿಕ ಮತಗಳಿಂದ ವಿಜಯ ಸಾಧಿಸುತ್ತಾರೆ. ನಿಜವಾದ ಬಿಜೆಪಿ ಕಾರ್ಯಕರ್ತರು ಯಾರೂ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲ್ಲ ಹಾಗೂ ಬಂಡಾಯವಾಗಿ ಉಪಚುನಾವಣೆಗೆ ಸ್ವರ್ಧಿಸಲ್ಲ ಎಂದರು.

ಬೆಳಗಾವಿ ಉಪಚುನಾವಣೆ ಕುರಿತು ಈಟಿವಿ ಭಾರತಕ್ಕೆ ಸವದಿ ಪ್ರತಿಕ್ರಿಯೆ

ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಬಿಜೆಪಿ ಎದುರು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯೇ ಪ್ರಬಲರಲ್ಲ. ಪ್ರಧಾನಿ ನರೇಂದ್ರ ಮೋದಿ ಶಕ್ತಿ ಹೆಚ್ಚಿಸಲು ಮತದಾರ ಪ್ರಭುಗಳು ಆಶೀರ್ವಾದ ಮಾಡುತ್ತಾರೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ನನ್ನನ್ನು ಯುವತಿ ಭೇಟಿ ಮಾಡಿಲ್ಲ, ನರೇಶ್ ನನಗೆ ಬೇಕಾದ ಹುಡುಗ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.