ಬೆಳಗಾವಿ: ಉಪ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಥಣಿ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪ್ರಚಾರ ನಡೆಸಿದ್ದು, ಪ್ರಚಾರಕ್ಕೆ ತೆರಳಿದ ಕುಮಟಳ್ಳಿ ಹಾಗೂ ಕಾರ್ಯಕರ್ತರನ್ನು ಝುಂಜರವಾಡ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿರುವ ಝುಂಜರವಾಡ ಗ್ರಾಮಸ್ಥರು ಕುಮಟಳ್ಳಿಗೆ ಮುತ್ತಿಗೆ ಹಾಕಿ, ನಮಗೆ ನೆರೆ ಬಂದಾಗ ಯಾವ ನಾಯಕನೂ ಬಂದಿಲ್ಲ. ಇದೀಗ ನೀವು ಯಾಕೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಸರ್ಕಾರದಿಂದ ಯವುದೇ ಪರಿಹಾರ ಬಂದಿಲ್ಲ. ನೀವು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಕ್ಲಾಸ್ ತೆಗೆದುಕೊಂಡು, ಪ್ರಚಾರಕ್ಕೆ ಅಡ್ಡಿಪಡಿಸಿದ್ರು. ಮುಖಂಡರು ಮಾತನಾಡುವುದನ್ನು ತಡೆದ ಯುವಕರು, ಚುಣಾವಣೆ ಬಹಿಷ್ಕಾರ ಮಾಡ್ತೀವಿ ಎಂದು ಪಟ್ಟು ಹಿಡಿದರು.